ಹಾಸ್ಟೆಲ್​ ಹುಡುಗಿಯರ ನಗ್ನ ವಿಡಿಯೋ ಲೀಕ್ ; ಆರೋಪಿಗಳಿಗೆ 7 ದಿನ ಪೊಲೀಸ್ ಕಸ್ಟಡಿ, ಪ್ರತಿಭಟನಾಕಾರರಿಗೆ ಕೆನಡಾದಿಂದ ಧಮ್ಕಿ ! 

19-09-22 06:46 pm       HK News Desk   ಕ್ರೈಂ

ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್​ನಲ್ಲಿ ಹುಡುಗಿಯರು ಸ್ನಾನ ಮಾಡುವ ಆಕ್ಷೇಪಾರ್ಹ ವಿಡಿಯೋ ಲೀಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಓರ್ವ ವಿದ್ಯಾರ್ಥಿನಿ ಮತ್ತು ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು.

ಚಂಡೀಗಢ, ಸೆ.19: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್​ನಲ್ಲಿ ಹುಡುಗಿಯರು ಸ್ನಾನ ಮಾಡುವ ಆಕ್ಷೇಪಾರ್ಹ ವಿಡಿಯೋ ಲೀಕ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಓರ್ವ ವಿದ್ಯಾರ್ಥಿನಿ ಮತ್ತು ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಯಿತು. ಬಳಿಕ ಅವರನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ.

ಮೂವರು ಆರೋಪಿಗಳನ್ನು ಭಾರೀ ಭದ್ರತೆಯೊಂದಿಗೆ ಖರಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಎಂಎಂಎಸ್ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳನ್ನು ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಯಿತು.

Prime accused in Chandigarh University video row held in Shimla - The  Economic Times

ಆರೋಪಿಗಳಾದ ಸನ್ನಿ, ರಂಕಜ್​ರನ್ನು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಬಂಧಿಸಲಾಗಿದೆ. ವಿಡಿಯೋ ಲೀಕ್​ ಮಾಡಿದ್ದಾಳೆ ಎಂಬ ಆರೋಪ ಹೊತ್ತಿರುವ ಯುವತಿಯನ್ನೂ ಪೊಲೀಸರು ಘಟನೆ ನಡೆದ ದಿನವೇ ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧವೂ ಸೆಕ್ಷನ್ 354 ಸಿ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

MMS leak case: Now girl students are getting threats- I will make the video  viral if I open my mouth - Youthistaan

ಪ್ರತಿಭಟನಾಕಾರರಿಗೆ ಕೆನಡಾದಿಂದ ಬೆದರಿಕೆ: 

ಎಂಎಂಎಸ್​ ವಿಡಿಯೋ ಲೀಕ್​ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದ್ದು, ಪ್ರತಿಭಟನೆ ಕೈಬಿಡುವಂತೆ ಧಮ್ಕಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Latest News, Breaking News LIVE, Top News Headlines, Viral Videos News  Updates - The Quint

ಎಂಎಂಎಸ್ ವಿಡಿಯೋ ಸೋರಿಕೆ ವಿರುದ್ಧ ಚಂಡೀಗಢ ವಿಶ್ವವಿದ್ಯಾಲಯದ ಹೊರಗೆ ಹುಡುಗಿಯರು ಭಾರಿ ಪ್ರತಿಭಟನೆ ನಡೆಸಿದ್ದರು. ಇದು ವಿವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಭಾರಿ ಪೊಲೀಸ್ ಪಡೆಯನ್ನು ಕರೆಸಲಾಗಿತ್ತು.

Video leak' row: Chandigarh University turns into fortress as protests  erupt again, 2 held from Himachal & other details

ಈ ಪ್ರತಿಭಟನೆಯನ್ನು ಕೈಬಿಡುವಂತೆ ಸೂಚಿಸಿ ಕೆನಡಾದಿಂದ ಅನಾಮಿಕ ಕರೆಗಳು ಬಂದಿವೆ. ಧರಣಿ ನಡೆಸಿದರೆ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬ್ಲ್ಯಾಕ್​ಮೇಲ್​ ಮಾಡಲಾಗಿದೆ ಎಂದು ಕೆಲ ವಿದ್ಯಾರ್ಥಿನಿಯರು ದೂರಿದ್ದಾರೆ.

ಚಂಡೀಗಢ ವಿವಿ ಕ್ಯಾಂಪಸಲ್ಲಿ ವಿಡಿಯೋ ಲೀಕ್ ; ತನ್ನದೇ ನಗ್ನ ವಿಡಿಯೋ ಬಾಯ್ ಫ್ರೆಂಡಿಗೆ ಕಳಿಸಿದ್ದ ಯುವತಿ, 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿಡಿಯೋಗಳೆಂದು ವದಂತಿ, ಭುಗಿಲೆದ್ದ ಆಕ್ರೋಶ !

A foreign link in the Chandigarh University video scandal case came to light after girl students at the varsity alleged that they had received threatening calls from Canada, urging them to stop protests. The caller from the foreign number has allegedly asked the girls to stop protesting or their videos will be made viral.Meanwhile, students of Chandigarh University have planned a mega protest at 4 pm on Monday, said reports.