ಚಂಡೀಗಢ ವಿವಿ ಕ್ಯಾಂಪಸಲ್ಲಿ ವಿಡಿಯೋ ಲೀಕ್ ; ತನ್ನದೇ ನಗ್ನ ವಿಡಿಯೋ ಬಾಯ್ ಫ್ರೆಂಡಿಗೆ ಕಳಿಸಿದ್ದ ಯುವತಿ, 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿಡಿಯೋಗಳೆಂದು ವದಂತಿ, ಭುಗಿಲೆದ್ದ ಆಕ್ರೋಶ !

19-09-22 03:39 pm       HK News Desk   ದೇಶ - ವಿದೇಶ

ಚಂಡೀಗಢ ವಿಶ್ವವಿದ್ಯಾನಿಲಯದ ಕ್ಯಾಂಪಸಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಆಗಿರುವ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆ, ತನಿಖೆಗಾಗಿ ಪಂಜಾಬ್ ಸರಕಾರ ಮೂವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಚಂಡೀಗಢ, ಸೆ.19: ಚಂಡೀಗಢ ವಿಶ್ವವಿದ್ಯಾನಿಲಯದ ಕ್ಯಾಂಪಸಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್ ಆಗಿರುವ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆ, ತನಿಖೆಗಾಗಿ ಪಂಜಾಬ್ ಸರಕಾರ ಮೂವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.   

ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಸೆ.24ರ ವರೆಗೆ ಆರು ದಿನಗಳ ಕಾಲ ವಿವಿಯಲ್ಲಿ ತರಗತಿಗೆ ರಜೆ ನೀಡಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಸೂಚನೆಯಂತೆ ವಿದ್ಯಾರ್ಥಿಗಳ ಎಲ್ಲ ಮನವಿಯನ್ನು ಓಗೊಟ್ಟು ಪ್ರಕರಣದ ಬಗ್ಗೆ ವಿಶೇಷ ತನಿಖೆಗೆ ಆದೇಶ ಮಾಡಲಾಗಿದೆ. ಅಲ್ಲದೆ, ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಗುರುಪ್ರೀತ್ ಕೌರ್ ನೇತೃತ್ವದಲ್ಲಿ ಮಹಿಳಾ ಅಧಿಕಾರಿಗಳದ್ದೇ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಒಪ್ಪಿ ಮನವೊಲಿಸಿದ್ದರಿಂದ ಸೋಮವಾರದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಕೈಬಿಟ್ಟಿದ್ದಾರೆ.

3 held, 2 wardens sacked over Chandigarh University leaked videos | Top  points - India News

ವಿಡಿಯೋ ಲೀಕ್ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಹಾಸ್ಟೆಲ್ ವಾರ್ಡನ್ ಗಳನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಎಲ್ಲ ಹಾಸ್ಟೆಲ್ ಗಳ ವಾರ್ಡನ್ ಗಳನ್ನೂ ವರ್ಗಾವಣೆ ಮಾಡಲಾಗಿದೆ. ವಿದ್ಯಾರ್ಥಿನಿಯರು ಹಾಸ್ಟೆಲ್ ಒಳಗಿದ್ದಾಗಿನ ಖಾಸಗಿ ಕ್ಷಣಗಳು ಮತ್ತು ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಿ ಜೊತೆಗಿದ್ದ ವಿದ್ಯಾರ್ಥಿನಿಯೇ ತನ್ನ ಬಾಯ್ ಫ್ರೆಂಡಿಗೆ ಲೀಕ್ ಮಾಡಿದ್ದಾರೆಂದು ವದಂತಿ ಹಬ್ಬಿತ್ತು. ಅಲ್ಲದೆ, ಒಬ್ಬ ವಿದ್ಯಾರ್ಥಿನಿಯ ನಗ್ನ ವಿಡಿಯೋ ವೈರಲ್ ಆಗಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಸ್ನಾನದ ವಿಡಿಯೋಗಳು ಲೀಕ್ ಆಗಿದೆ ಎನ್ನುವ ವದಂತಿ ಹರಡಿದ್ದರಿಂದ ವಿವಿ ಕ್ಯಾಂಪಸಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಪೋಷಕರು ಕೂಡ ಪ್ರತಿಭಟನೆಗೆ ಸಾಥ್ ನೀಡಿದ್ದರು.

3 held, 2 wardens sacked over Chandigarh University leaked videos: Check  all the details

ತನಿಖೆಯ ಬಳಿಕ ತನ್ನದೇ ನಗ್ನ ವಿಡಿಯೋ ಮಾಡಿ ವಿದ್ಯಾರ್ಥಿನಿಯೊಬ್ಬಳು ಅದನ್ನು ತನ್ನ ಹಿಮಾಚಲ ಪ್ರದೇಶ ಮೂಲದ ಬಾಯ್ ಫ್ರೆಂಡಿಗೆ ಕಳಿಸಿದ್ದು ಪತ್ತೆಯಾಗಿದೆ. ಬಾಯ್ ಫ್ರೆಂಡ್ ಮತ್ತು ಆತನ ಇನ್ನೊಬ್ಬ ಗೆಳೆಯ ಸೇರಿ ಯುವತಿ ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟು ವೈರಲ್ ಮಾಡಿದ್ದರು. ಪೊಲೀಸರು ವಿದ್ಯಾರ್ಥಿನಿ ಸೇರಿ ಇಬ್ಬರು ಬಾಯ್ ಫ್ರೆಂಡ್ ಗಳನ್ನೂ ಬಂಧಿಸಿದ್ದಾರೆ.  

3 held, 2 wardens sacked over Chandigarh University leaked videos | Top  points - India News

ಆರೋಪಿತ ವಿದ್ಯಾರ್ಥಿನಿ ತನ್ನದೇ ನಗ್ನ ವಿಡಿಯೋವನ್ನು ಮಾಡಿ ಬಾಯ್ ಫ್ರೆಂಡಿಗೆ ಕಳಿಸಿದ್ದಳು. ಉಳಿದಂತೆ ಯಾರದ್ದೇ ವಿದ್ಯಾರ್ಥಿಗಳ ವಿಡಿಯೋ ಲೀಕ್ ಆಗಿಲ್ಲ. ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ವದಂತಿಗೆ ಕಿವಿ ಕೊಡಬಾರದು ಎಂದು ಯುನಿವರ್ಸಿಟಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೇ ಪಂಜಾಬ್ ಎಡಿಜಿಪಿ ಗುರುಪ್ರೀತ್ ಕೌರ್ ಕೂಡ ಹೇಳಿದ್ದು ವದಂತಿ ನಂಬಿ ಪ್ರತಿಭಟನೆ ನಡೆಸದಿರಿ ಎಂದಿದ್ದಾರೆ.

ಮಾಧ್ಯಮಗಳಲ್ಲಿ 60ಕ್ಕೂ ಹೆಚ್ಚು ನಗ್ನ ವಿಡಿಯೋಗಳು ಲೀಕ್ ಆಗಿದೆಯೆಂದು ಬಿಂಬಿಸಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಚಂಡೀಗಢ ಯುನಿವರ್ಸಿಟಿ ಕ್ಯಾಂಪಸಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ರಾತ್ರಿ ವಿಡಿಯೋ ಲೀಕ್ ಆಗಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದಂತೆ ವಿದ್ಯಾರ್ಥಿನಿಯರ ಆಕ್ರೋಶ ಭುಗಿಲೆದ್ದಿತ್ತು. ಭಾನುವಾರವೂ ಭಾರೀ ಪ್ರತಿಭಟನೆ ನಡೆದಿದ್ದು ಪಂಜಾಬ್ ಸರಕಾರ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿತ್ತು. 

A three-member Special Investigation Team (SIT) comprising only women police officers has been formed to probe allegations that objectionable videos of several women students were recorded and shared by a hosteller at Chandigarh University."On directions of Punjab Chief Minister Bhagwant Mann, a three-member all-women SIT has been constituted to investigate Chandigarh University case, under the supervision of senior IPS officer Gurpreet Kaur Deo. One student and two others arrested... Electronic devices seized and sent for forensic examination," said DGP Punjab Gaurav Yadav.