ಬ್ರೇಕಿಂಗ್ ನ್ಯೂಸ್
03-02-26 09:49 pm Richard and Giridhar Shetty, Mangaluru ಕರಾವಳಿ
ಮಂಗಳೂರು, ಫೆ.2 : ಭಾರತದಲ್ಲಿ ಅತಿ ಹೆಚ್ಚು ಅಪಘಾತಗಳು ಯಾಕಾಗುತ್ತಿವೆ? ಇದಕ್ಕೇನು ಕಾರಣ? ಇದನ್ನು ತಪ್ಪಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು 25 ವರ್ಷಗಳಿಂದ ಬಸ್ ಡ್ರೈವರ್ ಕೆಲಸ ಮಾಡಿಕೊಂಡಿರುವ ಮಂಗಳೂರಿನ ವ್ಯಕ್ತಿಯೊಬ್ಬರು ತನ್ನದೇ ಆದ ಕಲ್ಪನೆಗಳನ್ನು ಮುಂದಿಟ್ಟು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದಾರೆ. ಡ್ರೈವರ್ ಮಾತು ಕೇಳಿ ಅವಾಕ್ಕಾಗಿರುವ ಗಡ್ಕರಿಯವರು ಈ ಬಗ್ಗೆ ಚಿಂತನೆ ನಡೆಸುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ.
ಕಾವೂರಿನ ಮಲ್ಲಿ ಲೇಔಟ್ ನಿವಾಸಿ ಸತೀಶ್ ಶೆಟ್ಟಿ ಕಳೆದ 25 ವರ್ಷಗಳಿಂದಲೂ ಮಂಗಳೂರು- ಮುಂಬೈ ಬಸ್ಸಿನಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಕಲಿತಿದ್ದು ಪ್ರಾಥಮಿಕ ಶಾಲೆಯಾದರೂ, ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳು, ಅದರಲ್ಲಿ ಜೀವ ಬಿಡುತ್ತಿರುವ ಹದಿಹರೆಯದ ಯುವಕರನ್ನು ಕಂಡು ಮಮ್ಮಲ ಮರುಗಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಯಾಕೆ ಸಾಧ್ಯವಿಲ್ಲ ಎನ್ನುವ ಬಗ್ಗೆ ಚಿಂತನೆ ಮಾಡಿ ತನ್ನದೇ ಯೋಚನೆಯಿಂದ ರೋಡ್ ಮ್ಯಾಪ್ ರಚಿಸಿದ್ದಾರೆ.









ವಕೀಲಿ ಕಲಿತವರು ನಾಲ್ಕೈದು ವರ್ಷ ಯಾರಾದ್ರೂ ಸೀನಿಯರ್ ಜೊತೆಗೆ ಕೆಲಸ ಮಾಡಲೇಬೇಕು. ಇಂಜಿನಿಯರಿಂಗ್, ಡಾಕ್ಟರ್ ಕಲಿತರೂ ಕನಿಷ್ಠ ಐದು ವರ್ಷ ಇನ್ನೊಬ್ಬರ ಜೊತೆಗೆ ಕೆಲಸ ಮಾಡಬೇಕು. ಅನುಭವ ಗಳಿಸಿಕೊಳ್ಳದೇ ನೇರವಾಗಿ ಯಾವುದೇ ವೃತ್ತಿಯನ್ನೂ ಮಾಡುವಂತಿಲ್ಲ. ಆದರೆ ಒಬ್ಬ ಡ್ರೈವರ್ ಆಗಿ ಹೆದ್ದಾರಿಯಲ್ಲಿ ಬೈಕ್, ಕಾರು ಓಡಿಸಬೇಕಿದ್ದರೆ ಯಾಕೆ ಇಂಥ ಅನುಭವದ ಬಗ್ಗೆ ಕಡ್ಡಾಯ ಇಲ್ಲ. 18 ವರ್ಷ ಆದ ಕೂಡಲೇ ಡ್ರೈವಿಂಗ್ ಲೈಸನ್ಸ್ ಮಾಡ್ಕೋಬಹುದು. ಹಣ ಇದ್ದರೆ ಪರೀಕ್ಷೆ ಬರೆಯದಿದ್ದರೂ ಲೈಸನ್ಸ್ ಮನೆಗೇ ತಲುಪುವ ವ್ಯವಸ್ಥೆ ಇದೆ. ಇದೇ ಕಾರಣದಿಂದ ನಮ್ಮಲ್ಲಿ ದುರಂತ ಆಗ್ತಿರೋದಲ್ವಾ ಎಂದು ಕೇಳುತ್ತಾರೆ ಸತೀಶ್ ಶೆಟ್ಟಿ.
ರಸ್ತೆ ನಿಮಯಗಳನ್ನು ತಿಳಿದುಕೊಳ್ಳದೆ, ಬೈಕ್, ಕಾರು ಕೈಗೆ ಸಿಗ್ತು ಅಂದ ಕೂಡಲೇ ಎರ್ರಾಬಿರ್ರಿ ಓಡಿಸಿ ತಮ್ಮ ಸಾವಿಗೆ ಅಥವಾ ಇನ್ನೊಬ್ಬರ ಸಾವಿಗೆ ಕಾರಣವಾಗುತ್ತಾರೆ. ಇದಕ್ಕೆಲ್ಲ ನಮ್ಮಲ್ಲಿ ಡ್ರೈವಿಂಗ್ ಲೈಸನ್ಸ್ ನೀಡುವುದನ್ನು ಕ್ಷುಲ್ಲಕವಾಗಿಸಿದ್ದು, ರಸ್ತೆ ನಿಯಮಗಳನ್ನು ಕಟ್ಟುನಿಟ್ಟು ಮಾಡದಿರುವುದೇ ಕಾರಣ. ರಸ್ತೆ ಅಪಘಾತ ತಪ್ಪಿಸಲು ಗಲ್ಫ್ ಅಥವಾ ವಿದೇಶಗಳಲ್ಲಿರುವ ರೀತಿಯ ವಾಹನ ಚಾಲನಾ ನಿಯಮಗಳನ್ನು ತರಬೇಕು. ಅದರಿಂದ ಮಾತ್ರ ನಮ್ಮ ರಸ್ತೆಗಳಲ್ಲಿ ಅಮಾಯಕರು ಬಿದ್ದು ಸಾಯುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಸತೀಶ್. ಇದಕ್ಕಾಗಿ ರೋಡ್ ಮ್ಯಾಪ್ ಮಾಡಿಕೊಂಡಿರುವ ಸತೀಶ್ ಇದನ್ನು ಸರ್ಕಾರಗಳು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಅಪಘಾತಗಳನ್ನು ಖಚಿತವಾಗಿ ತಪ್ಪಿಸಬಹುದು ಅನ್ನುತ್ತಾರೆ.

ರೋಡ್ ಮ್ಯಾಪ್ ಅಂಶಗಳು
ಸಣ್ಣ ಪ್ರಾಯದಲ್ಲೇ ವಾಹನ ಚಾಲನೆಯ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದು, ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ಇನ್ನಿತರ ಸಣ್ಣ ವಾಹನಗಳಿಗೆ ಪ್ರತ್ಯೇಕ ಲೇನ್ ಮಾಡಿಸುವುದು, ರಸ್ತೆ ನಿಯಮಗಳ ಬಗ್ಗೆ 75 ವರ್ಷ ಹಳೆಯ ಕಾನೂನು ಬದಲಿಗೆ ಕಟ್ಟುನಿಟ್ಟಿನ ನಿಯಮಗಳನ್ನು ತರುವುದರ ಮೂಲಕ ಅಪಘಾತಗಳನ್ನು ತಪ್ಪಿಸಬಹುದು. ಇದರ ಬಗ್ಗೆ ಸಾಕಷ್ಟು ಪರಿಣತರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ದೇಶದಲ್ಲಿ ತುರ್ತಾಗಿ ಆಗಬೇಕಾದ ಬದಲಾವಣೆಯ ಬಗ್ಗೆ ರೋಡ್ ಮ್ಯಾಪ್ ಒಂದನ್ನು ಸತೀಶ್ ಶೆಟ್ಟಿ ರೆಡಿ ಮಾಡಿದ್ದಾರೆ.
ಇವರ ಯೋಜನೆಗಳು ದೇಶಾದ್ಯಂತ ಜಾರಿಗೆ ಬಂದರೆ ಗಲ್ಫ್ ರೀತಿ ರಸ್ತೆಗಳನ್ನು ಮಾಡಿದರೆ ಸಾಲದು, ಅದೇ ರೀತಿಯ ಚೌಕಟ್ಟನ್ನೂ ಸ್ಥಾಪಿಸಬೇಕು. ಇಲ್ಲದಿದ್ದರೆ ಸಣ್ಣ ವಾಹನಗಳ ಪ್ರಯಾಣಿಕರು ಜೀವ ಕಳಕೊಳ್ಳುವುದು ಆಗುತ್ತಲೇ ಇರುತ್ತದೆ. ಹೆದ್ದಾರಿ ಸಂಚಾರವೇ ನರಕವಾಗುತ್ತದೆ ಎನ್ನುವ ಆತಂಕದ ಮಾತನ್ನು ಹೇಳುತ್ತಾರೆ. ವಿದೇಶದಲ್ಲಿ ಚಾಲನಾ ಪರವಾನಗಿ ಪಡೆಯಬೇಕಿದ್ದರೆ ಅಷ್ಟೊಂದು ಕಷ್ಟ ಇದೆ. ಅದೇ ಕಾರಣಕ್ಕೆ ಅಪಘಾತಗಳ ಸಂಖ್ಯೆಯೂ ಅಷ್ಟೇ ಕಡಿಮೆ ಇರುತ್ತದೆ ಎಂದೂ ಹೇಳುತ್ತಾರೆ. (ಸರಣಿ ಲೇಖನ-2)
Mangaluru-based Anand travles Volvo driver Satish Shetty, with 25 years of experience, has proposed a detailed roadmap to reduce road accidents in India. Meeting Union Transport Minister Nitin Gadkari, he suggested stricter licensing systems, independent driving tests, private training agencies, and deploying ex-Agniveers for highway safety.
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
30-06-26 11:39 am
HK News Staffer
ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನ...
27-06-26 02:44 pm
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
30-06-26 11:02 pm
HK News Staffer
ಪಾಗಲ್ ಪ್ರೇಮಿ ಕೇಸ್ ಬೆನ್ನಲ್ಲೇ ಬಯಲಾಯ್ತು ಅಕ್ರಮ ಬ...
30-06-26 03:48 pm
ಮಂಗಳೂರು ಕೋರ್ಟಿಗೆ ಕೆಮಿಕಲ್ ಬಾಂಬ್ ಬೆದರಿಕೆ ; ಜೆನ್...
29-06-26 07:25 pm
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm
ತಾಯಿಯ ಹೆಸರಿನಲ್ಲಿದ್ದ ಆಸ್ತಿ ಕಿತ್ತುಕೊಂಡ ಮಗ, ತಂದೆ...
29-06-26 04:45 pm