ಬ್ರೇಕಿಂಗ್ ನ್ಯೂಸ್
09-10-20 12:56 pm Udupi Correspondent ಕ್ರೈಂ
ಉಡುಪಿ, ಅಕ್ಟೋಬರ್ 09 : ಆನ್ ಲೈನ್ ವಂಚನೆ ಬಗ್ಗೆ ಎಷ್ಟೇ ಪ್ರಕರಣಗಳು ವರದಿಯಾದರೂ, ಜನ ಎಚ್ಚತ್ತುಕೊಳ್ಳಲ್ಲ. ಇಲ್ಲೊಬ್ಬರು ನ್ಯಾಪ್‌ಟಾಲ್ ಕಂಪೆನಿ ಹೆಸರಿನಲ್ಲಿ 12 ಲಕ್ಷದ ಆಸೆಗೆ ಬಿದ್ದು ಬರೋಬ್ಬರಿ 26,47,650 ರೂಪಾಯಿ ಕಳಕೊಂಡಿದ್ದಾರೆ.
ಉಡುಪಿಯ ನಾಗರಾಜ್ ಭಟ್ ಅವರ ವಿಳಾಸಕ್ಕೆ ನ್ಯಾಪ್‌ಟಾಲ್ ಕಂಪನಿ ಹೆಸರಿನಲ್ಲಿ ಸ್ಕ್ರಾಚ್ ಕೂಪನ್ ಬಂದಿತ್ತು. ಅದರಲ್ಲಿ ನೀವು ರೂಪಾಯಿ 12 ಲಕ್ಷ ಬಹುಮಾನ ಗೆದ್ದಿದ್ದೀರಿ, ಅದನ್ನು ಪಡೆಯಲು ನಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಗೆ ನಾಗರಾಜ್ ಕರೆ ಮಾಡಿದ್ದು ಬಹುಮಾನದ ಹಣ ಪಡೆಯಲು ನೋಂದಣಿ ಶುಲ್ಕ 12,೦೦೦ ರೂ. ತೆರಬೇಕು ಎಂದು ತಿಳಿಸಿದ್ದರು.
ಅದರಂತೆ, 2019ರ ಎ.4ರಂದು ನಾಗರಾಜ್, 12 ಸಾವಿರ ರೂ. ಖಾತೆಗೆ ಪಾವತಿಸಿದ್ದರು. ಅನಂತರ ಅಮಿತ್ ಬಿಸ್ವಾಸ್, ಚೇತನ್ ಕುಮಾರ್ ಎಂಬವರು, ಬೇರೆ ಸಂಖ್ಯೆಗಳಿಂದ ಕರೆ ಮಾಡಿ ತಾವು ನ್ಯಾಪ್ಟಲ್ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದರು. ಅಲ್ಲದೆ, 12 ಲಕ್ಷ ಬಹುಮಾನದ ಮೊತ್ತ ಪಡೆಯಲು ಜಿಎಸ್ ಟಿ, ಚಾರ್ಜ್ ಅಂತ ಶುಲ್ಕ ಕಟ್ಟಬೇಕು ಎಂದು ನಂಬಿಸಿದ್ದರು. ಹೀಗೆ ನಾಗರಾಜ್ ಭಟ್, 2019ರ ಎ.4ರಿಂದ ಜು.28ರ ನಡುವೆ ಜಿ.ಎಸ್.ಟಿ. ತೆರಿಗೆ, ವೆರಿಫಿಕೇಶನ್ ಚಾರ್ಜ್, ಸಬ್‌ಚಾರ್ಜ್ ಎಂದು ಒಟ್ಟು 26,47,650 ರೂ. ಮೊತ್ತವನ್ನು ವಿವಿಧ ಖಾತೆಗಳಿಗೆ ಜಮೆ ಮಾಡಿದ್ದಾರೆ.

ಕೊನೆಗೆ, ನಾಗರಾಜ್ ಭಟ್ ತಾನು ಮೋಸ ಹೋಗಿದ್ದು ಅರಿವಾಗಿದ್ದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Man looses 26 lakhs in online fraud later registers case in cyber crime. The victim has been identified as Nagraj Bhat from Udupi.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm