ಖೋಟಾ ನೋಟು ಚಲಾವಣೆ ಯತ್ನ ; ಉಳ್ಳಾಲದಲ್ಲಿ ನಾಲ್ವರ ಬಂಧನ, 2.40 ಲಕ್ಷ ಮೌಲ್ಯದ ಖೋಟಾ ನೋಟು ವಶಕ್ಕೆ

12-10-20 06:08 pm       Mangalore Correspondent   ಕ್ರೈಂ

ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 01: ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಬೀಚ್ ಬಳಿ ಭಾನುವಾರ ಸಂಜೆ KA 01- 6968 ನಂಬರಿನ ಹೋಂಡಾ ಸಿಟಿ ಕಾರು ನಿಂತಿತ್ತು. ಪೊಲೀಸರು ಸಂಶಯದಿಂದ ಕಾರಿನ ಬಳಿ ಹೋಗುತ್ತಿದ್ದಂತೆಯೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಸೈಯದ್ ಹಕೀಬ್, ಫೈಸಲ್ ಖಾನ್, ಮೊಹಮ್ಮದ್ ಜಮಾನ್, ಹಾರಿಸ್ ಎಂಬವರನ್ನು ಬಂಧಿಸಲಾಗಿದೆ. ಓಡಿ ಪರಾರಿಯಾದವರು ಸಲೀಂ ಹಾಗೂ ರಂಜಿತ್ ಎಂದು ಗುರುತಿಸಲಾಗಿದೆ. 

ಪೊಲೀಸರು ಕಾರಿನ ಒಳಗೆ ಪರಿಶೀಲಿಸಿ, ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ತನಿಖೆ ನಡೆಸಿದಾಗ ಆರೋಪಿಗಳು ಕಮಿಷನ್ ಆಸೆಗಾಗಿ ನಕಲಿ ನೋಟುಗಳನ್ನು ಮಾರಾಟ ಮಾಡಲು ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

ಕಾರಿನಲ್ಲಿ 500 ರೂ. ಮುಖಬೆಲೆಯ 4 ಕಟ್ಟುಗಳಲ್ಲಿ 480 ನೋಟುಗಳಿದ್ದವು. ಸುಮಾರು 2.40 ಲಕ್ಷ ರೂ. ಮೌಲ್ಯದ ನೋಟುಗಳಿದ್ದವು ಎನ್ನಲಾಗಿದೆ. ಮೇಲ್ನೋಟಕ್ಕೆ ನಕಲಿ ನೋಟುಗಂತಿದ್ದು ಜುಬೈರ್ ಮತ್ತು ರಿಯಾಜ್ ಎಂಬವರು ನಕಲಿ ನೋಟನ್ನು ನೀಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. 

ಆರೋಪಿಗಳು ತಂದಿದ್ದ ಬೆಂಗಳೂರು ನೋಂದಣಿಯ ಕಾರು, 5 ಮೊಬೈಲ್ ಫೋನ್ ಹಾಗೂ ಮಾರಾಟಕ್ಕೆ ತಂದಿದ್ದ 2.40 ಲಕ್ಷ ರೂ. ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The ullal police have succeeded in arresting four persons for printing fake note currencies. 2.5 lakhs fake currency note seized.