ಬ್ರೇಕಿಂಗ್ ನ್ಯೂಸ್
13-10-20 05:39 pm Headline Karnataka News Network ಕ್ರೈಂ
ನವದೆಹಲಿ, ಅಕ್ಟೋಬರ್ 13: ರಾಜಧಾನಿ ದೆಹಲಿ ಪೊಲೀಸರು ಫೇಕ್ ಕ್ಯಾಬ್ ರಾಕೆಟ್ ಒಂದನ್ನು ಭೇದಿಸಿದ್ದಾರೆ. ಉಬರ್, ಓಲಾ ರೀತಿಯ ಟ್ರಾವೆಲ್ಸ್ ಕ್ಯಾಬ್ ಏಪ್ ಮಾಡುವುದಾಗಿ ಹೇಳಿ ಒಂದು ಸಾವಿರಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದು 250 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಇದಾಗಿದ್ದು, ಪ್ರಕರಣದ ರೂವಾರಿ ಮಹಿಳೆಯನ್ನು ದೆಹಲಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.
ಕೇರಳ ಮೂಲದ ಡೈಸಿ ಮೆನನ್ ಬಂಧಿತ ಮಹಿಳೆಯಾಗಿದ್ದು, ‘’ಹೆಲ್ಲೋ ಟ್ಯಾಕ್ಸಿ’’ ಹೆಸರಲ್ಲಿ ಏಪ್ ಅಭಿವೃದ್ಧಿ ಪಡಿಸುವುದಾಗಿ ಜನರನ್ನು ನಂಬಿಸಿ ವಂಚಿಸಿದ್ದಾಳೆ. ಎಸ್ಎಂಪಿ ಇಂಡೆಕ್ಸ್ ಎನ್ನುವ ಕಂಪನಿ ಸ್ಥಾಪಿಸಿ, ಅದರ ಮೂಲಕ ಡಬಲ್ ರಿಟರ್ನ್ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸುತ್ತಿದ್ದರು. ಹೆಲ್ಲೋ ಟ್ಯಾಕ್ಸಿಗೆ ಹಣ ಹೂಡಿದರೆ ವನ್ ಟು ಡಬಲ್ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಹೂಡಿಕೆದಾರರನ್ನು ನಂಬಿಸುತ್ತಿದ್ದರು.
ಆರಂಭದಲ್ಲಿ ಒಂದಷ್ಟು ಹಣವನ್ನು ಹಿಂತಿರುಗಿಸುತ್ತಿದ್ದುದು ಹೂಡಿಕೆದಾರರಲ್ಲಿ ನಂಬಿಕೆ ಬೆಳೆದಿತ್ತು. ಆದರೆ ಕಂಪನಿಯವರು ಕೋಟಿಗಟ್ಟಲೆ ಹಣ ಸಂಗ್ರಹ ಆಗುತ್ತಿದ್ದಂತೆ ಕಚೇರಿಗೆ ಬಾಗಿಲು ಎಳೆದಿದ್ದಾರೆ. ಇದರಿಂದ ಭಯಗೊಂಡ ಹೂಡಿಕೆದಾರರು ಪೊಲೀಸರಿಗೆ ದೂರು ಕೊಟ್ಟಿದ್ದರು.
ಈ ನಡುವೆ, ಪೊಲೀಸರು ಹಿಂದೆ ಬಿದ್ದಿದ್ದಾರೆ ಎನ್ನುವ ಮಾಹಿತಿ ತಿಳಿದ ಆರೋಪಿಗಳು ಕಂಪನಿಯ ಕಚೇರಿಯನ್ನು ಸ್ಥಳಾಂತರ ಮಾಡತೊಡಗಿದ್ದರು. ಆರಂಭದದಲ್ಲಿ ಗಾಜಿಯಾಬಾದ್ ನಲ್ಲಿ ಕಚೇರಿ ಇತ್ತು. ಆನಂತ್ರ ಪತ್ಪರ್ ಗಂಜ್, ಆಬಳಿಕ ರೋಹಿಣಿ ಎಂಬಲ್ಲಿಗೆ ಸ್ಥಳಾಂತರ ಮಾಡಿ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳುವ ಯತ್ನ ಮಾಡಿದ್ರು. ಇದೇ ವೇಳೆ, ಪೊಲೀಸರು ಕಂಪನಿಯ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದು, 3.2 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ.ಅಲ್ಲದೆ, ಕಂಪನಿ ಕಡೆಯಿಂದ ಖರೀದಿಸಿದ್ದ 3.5 ಕೋಟಿ ರೂಪಾಯಿ ಮೌಲ್ಯದ 60 ಹೊಸ ಹ್ಯೂಂಡೈ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ನಿರ್ದೇಶಕರಲ್ಲಿ ಒಬ್ಬನಾದ ರಾಜೇಶ್ ಮಹ್ತೋ ಎಂಬಾತನ ಬಂಧನವಾಗಿತ್ತು. ಆತ ನೀಡಿದ ಮಾಹಿತಿ ಪ್ರಕಾರ, ಪೊಲೀಸರು ಪ್ರಮುಖ ರೂವಾರಿ ಎನ್ನಲಾಗುವ ಡೈಸಿ ಮೆನನ್ ಎನ್ನುವ ಮಹಿಳೆಯನ್ನು ಬಂಧಿಸಿದ್ದಾರೆ. ಕಂಪನಿಯ ನಿರ್ದೇಶಕರು ಸೇರಿಕೊಂಡು ಸ್ಟಾರ್ ಹೊಟೇಲ್ ಗಳಲ್ಲಿ ಹೂಡಿಕೆದಾರರನ್ನು ಕರೆಸಿ, ಕಾರ್ಯಕ್ರಮ ಮಾಡುತ್ತಿದ್ದರು. ಸೆಮಿನಾರ್ ಆಯೋಜಿಸುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Delhi Police’s Economic Offences Wing (EOW) has arrested a woman who was a director of a company that allegedly duped around 1,000 people of Rs 250 crore by eliciting them to invest in their new cab aggregator project called "Hello Taxi".
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am