ಬ್ರೇಕಿಂಗ್ ನ್ಯೂಸ್
14-10-20 05:58 pm Mangalore Correspondent ಕ್ರೈಂ
ಮಂಗಳೂರು, ಅಕ್ಟೋಬರ್ 14: ಕೋಣಾಜೆ ಠಾಣೆ ವ್ಯಾಪ್ತಿಯ ಹೂಹಾಕುವ ಕಲ್ಲು ಸಮೀಪದ ಬೆಳ್ಳೇರಿ ಬಳಿ ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಕಲೇಶಪುರ ಮೂಲದ ಮಹಮ್ಮದ್ ಅಶ್ರಫ್(30) ಎಂದು ಗುರುತಿಸಲಾಗಿದೆ. ಈತ ವಿಹಾಹಿತನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಬಾಕ್ರಬೈಲಿನ ಪಾತೂರು ನಿವಾಸಿ ಯುವತಿಯನ್ನು ಮದುವೆಯಾಗಿದ್ದ ಅಶ್ರಫ್, ಅಲ್ಲಿಯೇ ವಾಸವಿದ್ದ. ಸ್ಥಳೀಯವಾಗಿ ಕೂಲಿ ಕೆಲಸಕ್ಕೂ ಹೋಗುತ್ತಿದ್ದ. ಇತ್ತೀಚೆಗೆ ಮಹಿಳೆಯ ಸೋದರನ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮಹಿಳೆ ಒಂಟಿಯಾಗಿರುವ ವಿಷಯ ತಿಳಿದುಬಂದಿತ್ತು. ಹೀಗಾಗಿ ಮಹಿಳೆಯ ಮನೆಗೆ ಕನ್ನ ಹಾಕಿದ್ದಲ್ಲದೆ, ಅಡ್ಡ ಬಂದ ಮಹಿಳೆಯ ಮೇಲೆ ಹಲ್ಲೆಗೈದು ಅತ್ಯಾಚಾರ ಮಾಡಿದ್ದ. ಕೊನೆಗೆ ಮಹಿಳೆಯನ್ನು ಕೊಲೆಗೈದು ಪ್ರಕರಣ ಗೊತ್ತಾಗಬಾರದೆಂದು ಬೆಂಕಿ ಕೊಟ್ಟು ಸುಟ್ಟು ಹಾಕಿದ್ದ. ಆನಂತರ ಮನೆಯಲ್ಲಿ ಸಿಕ್ಕಿದ್ದ ಸ್ವಲ್ಪ ಚಿನ್ನ ಮತ್ತು ನಗದನ್ನು ದೋಚಿಕೊಂಡು ಹೋಗಿದ್ದ.
ಪ್ರಕರಣದ ಬಳಿಕ ಸಾದಾ ಸೀದ ಎನ್ನುವಂತಿದ್ದ ಅಶ್ರಫ್ ನನ್ನು ಗುಮಾನಿ ಮೇರೆಗೆ ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳ್ಳೇರಿಯ ಅವಿವಾಹಿತೆ ಮಹಿಳೆ ಕುಸುಮ(53) ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೆ.26 ರಂದು ಮಹಿಳೆಯ ಸಹೋದರ ಕರೆ ಮಾಡಿದಾಗ ಫೋನ್ ರಿಸೀವ್ ಮಾಡದ್ದರಿಂದ ಸ್ಥಳೀಯರಲ್ಲಿ ಹೋಗಿ ನೋಡುವಂತೆ ತಿಳಿಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಘಟನೆ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವಕ್ಕೆ ಮನೆಯೊಳಗೇ ಬೆಂಕಿ ಹಾಕಿದ್ದರಿಂದ ಅರ್ಧ ಸುಟ್ಟ ರೀತಿಯಲ್ಲಿತ್ತು. ಅಲ್ಲದೆ, ಮನೆಯ ಕರ್ಟನ್ ಕೂಡ ಹೊತ್ತಿಕೊಂಡಿತ್ತು. ಅತ್ಯಾಚಾರ, ಕೊಲೆಯೆಂದು ಸುದ್ದಿಯೂ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮನೆಯ ಆಸುಪಾಸಿನಲ್ಲಿ ಕೂಲಿ ಕೆಲಸಕ್ಕೆ ಬರುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಂತಕ ಸಿಕ್ಕಿಬಿದ್ದಿದ್ದಾನೆ.
Konaje police have succeeded in arresting the accused who allegedly raped and murdered a lady from Belleri in Balepuni village, Bantwal taluk.
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm