ಬ್ರೇಕಿಂಗ್ ನ್ಯೂಸ್
11-12-22 03:26 pm Udupi Correspondent ಕ್ರೈಂ
ಉಡುಪಿ, ಡಿ.11: ನಾಲ್ಕು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ನಾಟಕವಾಡಲು ಹೋಗಿ, ಇನ್ನೊಬ್ಬ ವ್ಯಕ್ತಿಯನ್ನು ಜೀವಂತ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ವಿಚಾರಣಾಧೀನ ಕೈದಿಯಾಗಿದ್ದ ಕಾರ್ಕಳದ ಸದಾನಂದ ಶೇರಿಗಾರ್ (58) ಹಿರಿಯಡ್ಕದ ಸಬ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ ನಸುಕಿನ 5 ಗಂಟೆ ವೇಳೆಗೆ ಸದಾನಂದ ಶೇರಿಗಾರ್ ತನ್ನ ಜೈಲು ಕೊಠಡಿಯಲ್ಲಿ ಲುಂಗಿಯ ಶಾಲನ್ನು ಕುತ್ತಿಗೆಗೆ ಬಿಗಿದು ನೇಣು ಹಾಕ್ಕೊಂಡಿದ್ದಾರೆ. ಈತನಿದ್ದ ಸೆಲ್ ನಲ್ಲಿ ಒಟ್ಟು 20 ಮಂದಿ ಕೈದಿಗಳಿದ್ದು, ಕೂಡಲೇ ಇತರರು ಶೇರಿಗಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಜೈಲು ಸಿಬಂದಿಗೆ ತಿಳಿಸಿದ್ದಾರೆ. ಆನಂತರ, ಕುಣಿಕೆಯಿಂದ ತೆಗೆದು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವನ್ನಪ್ಪಿದ್ದ.
ಮೇಸ್ತ್ರಿಯನ್ನು ಹೆಣ್ಣಿನಾಸೆ ತೋರಿಸಿ ಕೊಲೆ
ಕಾರ್ಕಳ ಪೇಟೆಯಲ್ಲಿ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ(60) ಎಂಬವರನ್ನು ಹೆಣ್ಣಿನಾಸೆ ತೋರಿಸಿ ಕರೆದೊಯ್ದು ಮದ್ಯ ಕುಡಿಸಿ, ಅದರಲ್ಲಿ ನಿದ್ದೆ ಮಾತ್ರೆ ಕೊಟ್ಟು ಕೊಲೆಗೈದು ಸುಟ್ಟು ಹಾಕಿದ ಪ್ರಕರಣದಲ್ಲಿ ಸದಾನಂದ ಶೇರಿಗಾರ್ ಪ್ರಮುಖ ಆರೋಪಿಯಾಗಿದ್ದ. ಕಳೆದ ಜುಲೈ 12ರಂದು ಬೈಂದೂರಿನ ಒತ್ತಿನೆಣೆಯ ಹೇನ್ ಬೇರು ಎಂಬ ನಿರ್ಜನ ಪ್ರದೇಶದಲ್ಲಿ ಅರೆಬರೆ ಸುಟ್ಟು ಹೋಗಿದ್ದ ಕಾರಿನ ಒಳಗೆ ಮೃತದೇಹ ಕಂಡುಬಂದಿತ್ತು. ಮೊದಲಿಗೆ, ಶವ ಪತ್ತೆ ವಿಚಾರ ಭಾರೀ ಕುತೂಹಲಕ್ಕೂ ಕಾರಣವಾಗಿತ್ತು. ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಬಿಂಬಿತವಾಗಿತ್ತು.
ಆನಂತರ, ಪೊಲೀಸರು ಕಾರಿನ ಚೇಸ್ ನಂಬರ್ ಆಧರಿಸಿ ತನಿಖೆ ನಡೆಸಿದಾಗ ಕಾರು ಸದಾನಂದ ಶೇರಿಗಾರ್ ಗೆ ಸೇರಿದ್ದು ಅನ್ನುವುದು ತಿಳಿದುಬಂದಿತ್ತು. ಇತ್ತ ಸದಾನಂದ ಶೇರಿಗಾರ್ ನನ್ನು ಹುಡುಕಾಡಿದಾಗ ಸಿಕ್ಕಿರಲಿಲ್ಲ. ಆತ ಬೆಂಗಳೂರಿಗೆ ತೆರಳಿದ್ದು ಮತ್ತು ತಲೆಮರೆಸಿಕೊಂಡಿರುವುದು ಪೊಲೀಸರಿಗೆ ತಿಳಿದುಬಂದಿತ್ತು. ಕಾರ್ಕಳದಲ್ಲಿ ಸರ್ವೆಯರ್ ಆಗಿದ್ದ ಸದಾನಂದ ಶೇರಿಗಾರ್ ಜಾಗದ ವಹಿವಾಟು ನಡೆಸುತ್ತಿದ್ದ. ಅದಕ್ಕಾಗಿ ಬಹಳಷ್ಟು ಸಾಲವನ್ನೂ ಮಾಡಿಕೊಂಡಿದ್ದ. ಆತನಿಗೆ ಹಿರ್ಗಾನ ಮೂಲದ ಶಿಲ್ಪಾ ಎಂಬ ಮಹಿಳೆಯ ಗೆಳೆತನ ಇತ್ತು. ಶಿಲ್ಪಾ ಮತ್ತು ಸದಾನಂದ ಸೇರಿಕೊಂಡು ಆನಂದ ದೇವಾಡಿಗನನ್ನು ಉಪಾಯದಿಂದ ಹೆಣ್ಣಿನಾಸೆ ತೋರಿಸಿ ಮನೆಗೆ ಕರೆಸಿಕೊಂಡಿದ್ದರು. ಬಳಿಕ ಮದ್ಯ ಕುಡಿಸಿ ಕಾರಿನಲ್ಲಿ ಕುಂದಾಪುರದತ್ತ ಕರೆದೊಯ್ದು ಒತ್ತಿನೆಣೆ ಬಳಿಯ ಹೇನ್ ಬೇರು ಪ್ರದೇಶದಲ್ಲಿ ತನ್ನ ಫೋರ್ಡ್ ಇಕಾನ್ ಕಾರನ್ನು ನಿಲ್ಲಿಸಿ, ನಿದ್ದೆ ಹೋಗಿದ್ದ ಆನಂದ ದೇವಾಡಿಗನನ್ನು ಒಳಗೆ ಕುಳ್ಳಿರಿಸಿ ಕಾರಿಗೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಜುಲೈ 12ರ ನಡುರಾತ್ರಿಯಲ್ಲಿ ಕೃತ್ಯ ನಡೆಸಿ, ಸದಾನಂದ ಶೇರಿಗಾರ್ ಮತ್ತು ಶಿಲ್ಪಾ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದರು. ಸಾಸ್ತಾನ ಟೋಲ್ ಗೇಟ್ ನಲ್ಲಿ ಇವರು ಕಾರಿನಲ್ಲಿ ಹೋಗುತ್ತಿರುವುದು, ಆನಂತರ ಬೇರೊಂದು ಕಾರಿನಲ್ಲಿ ಹಿಂತಿರುಗಿರುವುದನ್ನೂ ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಮಾಡಿದ್ದರು.
ಆತ್ಮಹತ್ಯೆ ಎಂದು ನಾಟಕವಾಡಿ ಸಿಕ್ಕಿಬಿದ್ದಿದ್ದ
ಪ್ರಕರಣದ ಬೆನ್ನು ಹತ್ತಿದ ಕಾರ್ಕಳ ಪೊಲೀಸರು ಸದಾನಂದ ಶೇರಿಗಾರ್ ಬಗ್ಗೆ ಸುಳಿವು ಪಡೆದು ನಾಲ್ಕೇ ದಿನದಲ್ಲಿ ಬಂಧಿಸಿದ್ದರು. ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಸಮಾಜಕ್ಕೆ ತಿಳಿಸಿ, ತಲೆಮರೆಸಿಕೊಳ್ಳುವ ನಾಟಕವಾಡಿದ್ದ ಸದಾನಂದ ಎರಡು ದಿನ ಕಳೆಯುವಷ್ಟರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ. ಇದ್ಯಾವುದರ ಬಗ್ಗೆಯೂ ಅರಿವಿಲ್ಲದ ಅಮಾಯಕ ಆನಂದ ದೇವಾಡಿಗನನ್ನು ನಡುಬೀದಿಯಲ್ಲಿ ಜೀವಂತ ಸುಟ್ಟು ಹಾಕಿದ್ದ ಕೃತ್ಯ ಕರಾವಳಿಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪ್ರಕರಣದಲ್ಲಿ ಜೈಲು ಸೇರಿದ್ದ ಸದಾನಂದ ಶೇರಿಗಾರ ಈಗ ಜೈಲಿನಲ್ಲಿಯೇ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾನೆ. ಕುರುಪ್ ಎನ್ನುವ ಮಲಯಾಳಂ ಚಿತ್ರವನ್ನು ನೋಡಿ, ಅದರಂತೆಯೇ ಯಾರನ್ನೋ ಸುಟ್ಟು ಹಾಕಿ ತಾನೇ ಸತ್ತಿದ್ದೇನೆಂದು ಸಮಾಜಕ್ಕೆ ತೋರಿಸುವ ನೆಪದಲ್ಲಿ ಕೃತ್ಯ ಎಸಗಿದ್ದ. ಆದರೆ ಈಗ ತಾನೇ ನಿಜವಾಗಿ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸ.
Udupi pouring petrol, burning the car by killing an old man, accused Sadananda Sherigar commits suicide in Jail. Sadananda Sherigar of Karkala origin was a surveyor. He was the main accused in the murder case of a person who was killed by pouring petrol and torching the car. Sadananda had planned to kill somebody else by setting fire to the car and a person in it in order to appear to look like that he himself died in order to cover his financial frauds. The murder incident had taken place at Ottinene Henber at Shiroor, border of Udupi district in July earlier this year
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm