ಬ್ರೇಕಿಂಗ್ ನ್ಯೂಸ್
13-07-22 01:22 pm udupi Correspondent ಕರಾವಳಿ
ಕುಂದಾಪುರ, ಜುಲೈ 13 : ರಸ್ತೆ ಬದಿ ನಿಲ್ಲಿಸಿದ್ದ ಕಾರು ಪೂರ್ತಿ ಸುಟ್ಟು ಹೋಗಿದ್ದಲ್ಲದೆ, ಅದರಲ್ಲಿ ಒಬ್ಬ ವ್ಯಕ್ತಿಯೂ ಸುಟ್ಟು ಕರಕಲಾಗಿರುವ ಘಟನೆ ಬೈಂದೂರು ಸಮೀಪದ ಹೇನ್ ಬೇರು ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಫೋರ್ಡ್ ಐಕಾನ್ ಕಾರಿನಂತೆ ಕಂಡುಬರುತ್ತಿದ್ದು ಪೂರ್ತಿ ಸುಟ್ಟು ಹೋಗಿದೆ. ಹಿಂಬದಿ ಸೀಟ್ ನಲ್ಲಿ ವ್ಯಕ್ತಿಯ ಶವ ಇದ್ದು, ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಕಂಡು ಹಿಡಿಯಲಾಗದಷ್ಟು ಸುಟ್ಟು ಹೋಗಿದೆ. ಕಾರಿನ ಚಾಲಕನ ಎಡಬದಿಯ ಸೀಟ್ ಹಿಂಬಾಗಕ್ಕೆ ವಾಲಿಕೊಂಡಿದೆ.
ಕಾರನ್ನು ನಿರ್ಜನ ಜಾಗದಲ್ಲಿ ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ರೀತಿ ಕಂಡುಬಂದಿದೆ. ಪಕ್ಕದಲ್ಲಿಯೇ ಪೆಟ್ರೋಲ್ ಕ್ಯಾನ್ ಕೂಡ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕಾರಿನ ನಂಬರ್ ಪ್ಲೇಟ್ ಕೂಡ ಸುಟ್ಟು ಹೋಗಿದ್ದು ಗುರುತು ಸಿಗದಂತಾಗಿದೆ. ಬೈಂದೂರು - ಹೇನ್ ಬೇರು ರಸ್ತೆಯಲ್ಲಿ ಬದಿಯ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿದ ರೀತಿ ಇದ್ದು ಯಾರೋ ಮಂಗಳವಾರ ತಡರಾತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
Udupi Car found in burnt condition, charred body found, suicide suspected in Byndoor. The car was found in the isolated place. Police are now investigating the case.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
30-08-25 12:55 pm
Udupi Correspondent
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm