ಮಣಿಪಾಲ ; 4.63 ಲಕ್ಷ ಮೌಲ್ಯದ ಡ್ರಗ್ಸ್ ಜೊತೆ ಸಿಕ್ಕಿಬಿದ್ದ ಪೆಡ್ಲರ್

15-10-20 04:25 pm       Udupi Correspondent   ಕ್ರೈಂ

ಆನ್ ಲೈನ್ ನಲ್ಲಿ  ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ತರಿಸುತ್ತಿದ್ದ ಡ್ರಗ್ ಪೆಡ್ಲರ್ ಒಬ್ಬನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಉಡುಪಿ, ಅಕ್ಟೋಬರ್ 15: ಆರ್.ಟಿ.ಒ ಕಚೇರಿ ಬಳಿಯ ಎಂಡ್ ಪಾಯಿಂಟ್ ಬಳಿ ಮಣಿಪಾಲ ಪೊಲೀಸರು ಡ್ರಗ್ ಪೆಡ್ಲರ್ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. 

ನಿಷೇಧಿತ ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬ್ರಹ್ಮಾವರದ ಮಹಮ್ನದ್ ಫಜಲ್ ಎಂಬಾತ ಪೊಲೀಸರ ಬಲೆಗೆ ಬಿದ್ದ ಆರೋಪಿ. ಉಡುಪಿಯ ಫರ್ಹಾನ್ ಮತ್ತು ಸಫಾ ಜೊತೆ ಸೇರಿ ಫಜಲ್ ಡ್ರಗ್ಸ್ ಮಾರಾಟಕ್ಕೆ ಸಂಚು ಹೂಡಿದ್ದ. ಆನ್ ಲೈನ್ ನಲ್ಲಿ  ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ ಶುಗರ್ ತರಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 

ಮಣಿಪಾಲದ ವಿದ್ಯಾರ್ಥಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ. ಡ್ರಗ್ ಅನ್ನು ಫರ್ಹಾನ್ ಹಾಗೂ ಸಫಾಳಿಗೆ ನೀಡಲು ಕಾಯುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಫಜಲ್ ಬಳಿಯಿದ್ದ  54 ನಿಷೇದಿತ MDMA ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುಗಳ ಮೌಲ್ಯ ಆಂದಾಜು 4,63,600 ರೂ. ಎಂದು ಹೇಳಲಾಗಿದೆ.

The police have succeeded in arresting a person who was indulged in selling banned narcotic drugs near Manipal Rto. The accused has been identified as Fazal from Brahmavar.