ಬ್ರೇಕಿಂಗ್ ನ್ಯೂಸ್
06-02-23 03:20 pm Mangalore Correspondent ಕ್ರೈಂ
ಮಂಗಳೂರು, ಫೆ.6: ಜುವೆಲ್ಲರಿ ಉದ್ಯೋಗಿಯನ್ನು ಕತ್ತು ಸೀಳಿ ಕೊಂದ ಪ್ರಕರಣದಲ್ಲಿ ಆರೋಪಿಯ ಸಿಸಿಟಿವಿ ಆಧರಿಸಿ ಪೊಲೀಸರು ಆತನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜುವೆಲ್ಲರಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವ ಯುವಕ ತಲೆಗೆ ಕಪ್ಪು ಟೋಪಿ, ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಕಪ್ಪು ಜರ್ಕಿನ್ ತೊಟ್ಟಿದ್ದು ಜೀನ್ಸ್ ಪ್ಯಾಂಟ್ ಹಾಕಿದ್ದ. ಅಂದಾಜು 28ರ ಆಸುಪಾಸಿನ ಯುವಕನಂತಿದ್ದು, ಈತನ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.
ಜುವೆಲ್ಲರಿ ಅಂಗಡಿಯಿಂದ ಹೊರಬಂದಿದ್ದ ವ್ಯಕ್ತಿ ಅನತಿ ದೂರದ ವರೆಗೆ ಓಡಿ ಆನಂತರ ಆಟೋದಲ್ಲಿ ತೆರಳಿದ್ದ. ಹೀಗಾಗಿ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿ ಆನಂತರ ಎಲ್ಲಿ ಹೋಗಿದ್ದಾನೆ ಅನ್ನುವುದರ ಮಾಹಿತಿ ಇಲ್ಲ. ಇದೇ ವೇಳೆ, ಜುವೆಲ್ಲರಿಯಿಂದ 12 ಗ್ರಾಮ್ ತೂಕದ ಎರಡು ಸಣ್ಣ ಚಿನ್ನದ ಸರ ನಾಪತ್ತೆಯಾಗಿದ್ದು, ಅದನ್ನು ಆತ ಒಯ್ದಿರುವ ಶಂಕೆಯಿದೆ. ಆದರೆ ಸಣ್ಣ ಚಿನ್ನದ ಸರಕ್ಕಾಗಿ ಈ ಕೊಲೆ ಮಾಡಿದ್ದಿರಬಹುದೇ ಅನ್ನುವುದು ಅನುಮಾನಕ್ಕೆ ಕಾರಣವಾಗಿದೆ.

ಕೊಲೆಯ ಬಗ್ಗೆ ಮಾಹಿತಿ ನೀಡಿರುವ ಕಮಿಷನರ್ ಶಶಿಕುಮಾರ್, ಕತ್ತನ್ನು ಹರಿತ ಆಯುಧದಿಂದ ಅಡಿ ಭಾಗದಿಂದಲೇ ಸೀಳಿದ್ದು ಕಂಡುಬಂದಿದೆ ಎಂದಿದ್ದಾರೆ. ಹಾಗಾಗಿ ಆರೋಪಿ ಹರಿತ ಆಯುಧವನ್ನೇ ಬಳಸಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೆ, ಈ ರೀತಿ ಕತ್ತು ಸೀಳುವುದು ಅದರಲ್ಲಿ ತರಬೇತಿ ಪಡೆದವರೇ ಆಗಿರಬೇಕು ಅನ್ನುವುದು ಪೊಲೀಸರ ಅನಿಸಿಕೆ. ಸಾಧಾರಣ ಯುವಕನೊಬ್ಬ ಜನನಿಬಿಡ ರಸ್ತೆಯ ಜುವೆಲ್ಲರಿ ನುಗ್ಗಿ ಹತ್ಯೆ ಮಾಡಿರುವುದು ಬಹಳಷ್ಟು ಶಂಕೆಗೆ ಕಾರಣವಾಗಿದೆ. ಆತ ಕೊಲೆ ಮಾಡುವ ಉದ್ದೇಶದಿಂದಲೇ ಹರಿತ ಆಯುಧವನ್ನು ಹಿಡಿದುಕೊಂಡು ಬಂದಿದ್ದನೇ ಅನ್ನುವ ಅನುಮಾನವೂ ಇದೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಏನೋ ವಸ್ತುವನ್ನು ಹಿಡಿದುಕೊಂಡಿದ್ದ. ಅದು ಹರಿತ ಆಯುಧವೇ ಆಗಿರುವ ಸಾಧ್ಯತೆಯಿದೆ. ಕತ್ತು ಸೀಳಿ ಕೊಲೆಗೈಯುವ ಕೃತ್ಯ ಕಳೆದ ಒಂದು ವರ್ಷದಲ್ಲಿ ದೇಶದ ಹಲವೆಡೆ ನಡೆದಿದ್ದು, ಪೊಲೀಸರು ಆ ದೃಷ್ಟಿಯಿಂದಲೂ ತನಿಖೆ ನಡೆಸುತ್ತಿದ್ದಾರೆ.



ಕೊಲೆಯಾದ ರಾಘವ ಆಚಾರ್ಯ(55) ಬಡ ಕುಟುಂಬದ ವ್ಯಕ್ತಿಯಾಗಿದ್ದು, ಈ ಹಿಂದೆ ಹಲವು ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗೆ ಏಳು ತಿಂಗಳ ಹಿಂದೆ ಮಂಗಳೂರು ಜುವೆಲ್ಲರಿಗೆ ಕೆಲಸಕ್ಕೆ ಸೇರಿದ್ದರು. ಇವರ ಒಬ್ಬ ಮಗ ಊರಲ್ಲಿ ಕೆಲಸ ಸಿಗದೆ ಇತ್ತೀಚೆಗೆ ದುಬೈಗೆ ಹೋಗಿದ್ದ. ಇನ್ನೊಬ್ಬ ಕೆಲಸಕ್ಕಾಗಿ ಅಲೆದಾಡುತ್ತಿದ್ದಾನೆ. ಮತ್ತೊಬ್ಬ ಮಗಳು ಪಿಯುಸಿ ಓದುತ್ತಿದ್ದಾಳೆ. ಪತ್ನಿ ಬೇಕರಿಯಲ್ಲಿ ಕೆಲಸಕ್ಕಿದ್ದು, ಗಂಡನಿಗೆ ಆಧಾರವಾಗಿದ್ದರು. ಇದೀಗ ಕುಟುಂಬದ ಆಸರೆಯಾಗಿದ್ದವರೇ ಕೊಲೆಯಾಗಿದ್ದಾರೆ.
In connection to the incident where a miscreant stabbed a staffer to death, the police have released the portrait of the suspected killer, from the CCTV footage. The police, in statement said, “On February 3, between 3-30 pm to 3-45 pm, the following person came to Mangalore Jewellers situated at Balmatta Road, Mangaluru (Mangaluru north police station jurisdiction) in the guise of a gold buyer and stabbed and killed the staff Raghavendra Achar who was alone inside the jeweller. The portrait of the said person was found in the footage recorded in the local CCTVs.
27-06-26 04:21 pm
HK News Staffer
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 04:23 pm
HK News Staffer
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm