ಬ್ರೇಕಿಂಗ್ ನ್ಯೂಸ್
01-04-23 08:17 pm Mangalore Correspondent ಕ್ರೈಂ
ಮಂಗಳೂರು, ಎಪ್ರಿಲ್ 1: ಸಿಎಸ್ಐ ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಸೈಂಟ್ ಪಾಲ್ ಚರ್ಚ್ ಪಾದ್ರಿ ರೆ.ಫಾ. ನೋಯಲ್ ಕರ್ಕಡ ವಿರುದ್ಧ ಮತ್ತೊಬ್ಬ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ಆನಂತರ ಅರ್ಧದಲ್ಲಿ ಕೈಬಿಟ್ಟು ವಂಚಿಸಿದ್ದಾನೆ ಎಂದು ಉಡುಪಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಆರೋಪಿಸಿದ್ದು, ಮಂಗಳೂರಿನ ಬಲ್ಮಠದ ಶಾಂತಿ ಕೆಥಡ್ರಲ್ ಚರ್ಚ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮುಸ್ಲಿಂ ಮಹಿಳೆ ಗಂಡನಿಂದ ಬೇರ್ಪಟ್ಟವರಾಗಿದ್ದು, 2021ರ ಆಗಸ್ಟ್ ತಿಂಗಳಲ್ಲಿ ನೋಯಲ್ ಕರ್ಕಡ ಉಡುಪಿಯಲ್ಲಿ ಪರಿಚಯ ಆಗಿದ್ದ. ಆನಂತರ, ತಾನು ಮದುವೆಯಾಗುತ್ತೇನೆಂದು ಹೇಳಿ ಹತ್ತಿರವಾಗಿದ್ದು, ಏಳೆಂಟು ತಿಂಗಳ ಕಾಲ ಕಳಸ, ಕಾಸರಗೋಡು, ಚಿಕ್ಕಮಗಳೂರಿಗೆ ಸುತ್ತಾಡಿಸಿದ್ದ. ಕೊಟ್ಟಾರದಲ್ಲಿರುವ ಕ್ವಾಟ್ರಸ್ ನಲ್ಲಿ ಇರಿಸಿಕೊಂಡು ದೈಹಿಕ ಸಂಪರ್ಕ ಮಾಡಿದ್ದ. 2022ರ ಫೆಬ್ರವರಿ ನಂತರ ದೂರ ಮಾಡಿದ್ದು, ಸಂಪರ್ಕ ಕಡಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಸೈಂಟ್ ಪಾಲ್ ಚರ್ಚ್ ನಲ್ಲಿ ಭೇಟಿಯಾಗಲು ಯತ್ನಿಸಿದಾಗ, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ಕೊಟ್ಟರೆ ಸಾಯಿಸ್ತೀನಿ ಎಂದು ಬೆದರಿಸಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.
ವಿನ್ಸೆಂಟ್ ಪಾಲನ್ನ, ವಿಲಿಯಂ ಕುಂದರ್ ಅವರಿಗೂ ನಮ್ಮ ನಡುವಿನ ಸಂಬಂಧ ಗೊತ್ತಿದೆ. ನಾವು ಮದುವೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದರು. ಆನಂತರ, 2022ರ ಅಕ್ಟೋಬರ್ ತಿಂಗಳಲ್ಲಿ ಚರ್ಚ್ ತೆರಳಿದ್ದಾಗ ಎಲ್ಲರೂ ಸೇರಿ ಹಲ್ಲೆ ಮಾಡಿದ್ದಾರೆ. ಮೈಮುಟ್ಟಿ ತನ್ನನ್ನು ಎತ್ತಿಕೊಂಡು ಹೋಗಿ, ಪೊಲೀಸ್ ಸ್ಟೇಶನ್ನಿಗೆ ಒಯ್ದಿದ್ದರು. ಹನಿಟ್ರಾಪ್ ಕೇಸು ಕೊಡಿಸುತ್ತೇನೆ ಎಂದು ಬೆದರಿಸಿದ್ದರು. ಕದ್ರಿ ಠಾಣೆಗೆ ಒಯ್ದಿದ್ದಾಗ, ಪೊಲೀಸರಿಗೆ ನನ್ನ ಜೊತೆಗಿದ್ದ ನೋಯಲ್ ಕರ್ಕಡನ ವಿಡಿಯೋಗಳನ್ನು ತೋರಿಸಿದ್ದೆ. ನನ್ನನ್ನು ದೈಹಿಕವಾಗಿ ಬಳಸಿಕೊಂಡು ಈಗ ದೂರ ಮಾಡುತ್ತಿದ್ದಾನೆ, ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದಾಗ, ಪೊಲೀಸರೇ ನೋಯಲ್ ಗೆ ಜೋರು ಮಾಡಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು. ಆನಂತರ, ಆಸ್ಪತ್ರೆಗೆ ಸೇರಿಸಿ ನನ್ನ ಮೊಬೈಲ್ ಪಡೆದು ಆತನ ಜೊತೆಗೆ ಮಾಡಿದ್ದ ಚಾಟಿಂಗ್ ಗಳನ್ನು ಡಿಲೀಟ್ ಮಾಡಿದ್ದಾನೆ. ಕೆಲವೊಂದು ಖಾಸಗಿ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾನೆ. ಆಸ್ಪತ್ರೆಯಲ್ಲಿದ್ದಾಗ ಪೊಲೀಸ್ ದೂರು ಕೊಡುವುದು ಬೇಡ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ.
ಆದರೆ, ನಾನು ಉಡುಪಿಗೆ ಮರಳಿದ ಬಳಿಕ ನನ್ನ ಸಂಪರ್ಕ ಕಡಿದುಕೊಂಡಿದ್ದಾನೆ. ಇತ್ತೀಚೆಗೆ ಸಿಎಸ್ಐ ಬಿಷಪ್ ಹೌಸ್ ನಲ್ಲಿ ಮಹಿಳೆಯನ್ನು ಹೊರಗೆ ಹಾಕಿದ್ದು ತಿಳಿದು ಆಘಾತಗೊಂಡಿದ್ದೆ. ಆಕೆಯ ಪ್ರಕರಣದಲ್ಲಿ ಪಾಂಡೇಶ್ವರ ಮಹಿಳಾ ಪೊಲೀಸರು ನನ್ನನ್ನು ಹೇಳಿಕೆ ಪಡೆಯಲು ಕರೆಸಿಕೊಂಡಿದ್ದಾರೆ. ನೋಯಲ್ ಕರ್ಕಡ ನನಗೆ ನ್ಯಾಯ ಕೊಡುತ್ತಾನೆ ಎಂದು ನಂಬಿದ್ದೆ. ಆದರೆ ಮೋಸ ಮಾಡಿದ್ದಾನೆ. ಒಡನಾಡಿ ಸಂಸ್ಥೆಯ ಮೂಲಕ ಆತನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ. ನನಗಿಬ್ಬರು ಮಕ್ಕಳಿದ್ದಾರೆ, ಅವರನ್ನು ನಾನೇ ದುಡಿದು ಸಾಕಬೇಕು. ಹಾಗಾಗಿ ಪೊಲೀಸ್ ದೂರು ಕೊಡಲು ಬಂದಿರಲಿಲ್ಲ. ಆತ ಕೊಲ್ತೇನೆ ಎಂದು ಬೆದರಿಸಿದ್ದ. ಮೊದಲ ಗಂಡ ಬೇರೆ ಮದುವೆಯಾಗಿದ್ದಾನೆ. ನಾನೊಬ್ಬ ಮುಸ್ಲಿಂ ಆಗಿದ್ದು, ನನ್ನ ಪರವಾಗಿ ಸಮಾಜದ ಮುಖಂಡರು ದನಿ ಎತ್ತಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಸಿಎಸ್ಐ ಬೆಂಗಳೂರು ಬಿಷಪ್ ಹೌಸ್ ಅಧಿಕಾರಿಗಳಾದ ಗುರುಪ್ರಸಾದ್, ಸ್ಟೀಫನ್ ಮತ್ತು ಪ್ರೇಮ್ ಎಂಬವರು ಮಹಿಳೆಯರ ಜೊತೆಗೆ ನಿಂತು ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದಾರೆ. ಗುರುಪ್ರಸಾದ್ ಮಾತನಾಡಿ, ಇವರಿಗೆ 80 ಸಿ ಪ್ರಕಾರ ಆದಾಯ ತೆರಿಗೆಯಿಂದ ವಿನಾಯ್ತಿ ಇರುವುದರಿಂದ ಬೇಕಾದಷ್ಟು ದೇಣಿಗೆ ಬರುತ್ತದೆ. ಹಣದ ಮದದಲ್ಲಿ ಸರ್ವಾಧಿಕಾರಿ ವರ್ತನೆ ಮಾಡುತ್ತಿದ್ದಾರೆ. ಏಸುವನ್ನು ನಂಬುವ ಕ್ರೈಸ್ತರು ಮನುಷ್ಯ ಧರ್ಮವನ್ನು ಪಾಲಿಸುವವರು. ಇವರು ದೇವರ ಹೆಸರಲ್ಲಿ ಅನಾಚಾರ ಮಾಡುತ್ತಿದ್ದಾರೆ. ಪಾದ್ರಿಗಳ ರೂಪದಲ್ಲಿ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ. ಮಂಗಳೂರಿನ ಬಿಷಪ್ ಮತ್ತು ಪಾದ್ರಿಗಳು ಈಗಲೇ ಎಚ್ಚತ್ತು ಮಹಿಳೆಯರಿಗೆ ನ್ಯಾಯ ಕೊಡಿಸಿದರೆ ಓಕೆ. ಇಲ್ಲದಿದ್ದರೆ ನಾವು ಬೆಂಗಳೂರಿನಿಂದ ಮತ್ತಷ್ಟು ಮಂದಿ ಇಲ್ಲಿಗೆ ಬಂದು ಪಾದ್ರಿಗಳ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಲ್ಮಠ ಸಿಎಸ್ಐ ಬಿಷಪ್ ಹೌಸ್ ಸೆಕ್ರಟರಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅತ್ಯಾಚಾರ ಸೇರಿ ಕಿರುಕುಳದ ಬಗ್ಗೆ ಎಫ್ಐಆರ್ ಆಗಿದ್ದರೂ, ಪೊಲೀಸರು ನೋಯಲ್ ಕರ್ಕಡ ಬಗ್ಗೆ ಮೃದು ಧೋರಣೆ ತಾಳಿದ್ದಾರೆ.
ಬಲ್ಮಠ ಸಿಎಸ್ಐ ಬಿಷಪ್ ಹೌಸ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ; ಆರು ಮಂದಿ ವಿರುದ್ಧ ಎಫ್ಐಆರ್ ದಾಖಲು
Mangalore Muslim woman alleges of Sexual harassment against CSI Church priest Rev Fr Noel Karkada. Recently Mangalore Balmatta CSI Bishop secretary woman had alleged of sexual and mental harassment by Vincent Palanna who is the treasurer of CSI Diocesan office in Balmatta and Rev Fr Noel P Karkada who is a priest at CSI Anglican St Paul’s Church at Hampankatta in Mangalore. Now even the muslim woman has sought help from Stanly Kv , Mysore who is the Founder Director at Odanadi Seva Samsthe.
10-01-25 07:03 pm
Bangalore Correspondent
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am