ಬ್ರೇಕಿಂಗ್ ನ್ಯೂಸ್
08-03-23 11:10 pm Mangalore Correspondent ಕರಾವಳಿ
ಮಂಗಳೂರು, ಮಾ.8 : ನಗರದ ಬಲ್ಮಠದ ಸಿಎಸ್ಐ ಕರ್ನಾಟಕ ಧರ್ಮಪ್ರಾಂತ (ಬಿಷಪ್ ಹೌಸ್) ಕಚೇರಿಯಲ್ಲಿ ಬಿಷಪ್ ಅವರ ಸೆಕ್ರೆಟರಿಯಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹತ್ತು ವರ್ಷಗಳಿಂದ ಸೆಕ್ರೆಟರಿಯಾಗಿದ್ದ ಮಹಿಳೆಯನ್ನು ಬಿಷಪ್ ಹೌಸ್ ಖಜಾಂಚಿಯಾಗಿರುವ ವಿನ್ಸೆಂಟ್ ಪಾಲನ್ನ ಎಂಬವರು ನಾಲ್ಕು ವರ್ಷಗಳಿಂದ ದೈಹಿಕ, ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಬಿಷಪ್ ಹೌಸ್ ನಲ್ಲಿ ಕಾನೂನು ಸಲಹೆಗಾರರೂ ಆಗಿರುವ ಫಾದರ್ ನೋಯಲ್ ಕರ್ಕಡ ಮಹಿಳೆಯನ್ನು ಸೆಕ್ಸ್ ವಿಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಬಗ್ಗೆ ದೂರಲಾಗಿದೆ.
ಇದಲ್ಲದೆ, ಬಿಷಪ್ ಹೌಸ್ ಆಡಳಿತ ನೋಡಿಕೊಳ್ಳುವ ಕರುಣಾಕರ ಕುಂದರ, ಮನೋಹರ ಅಮ್ಮನ್ನ, ಸುಜಾತ, ವಿಲಿಯಂ ಕೇರಿ ಎಂಬವರು ತನ್ನ ಬಗ್ಗೆ ತೇಜೋವಧೆ ಆಗುವ ರೀತಿ ವರ್ತಿಸಿದ್ದಾರೆಂದು ದೂರಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಆರು ಮಂದಿ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ವಿನ್ಸೆಂಟ್ ಪಾಲನ್ನ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ, ಬೇರೆಯವರ ಜೊತೆಗೂ ಲೈಂಗಿಕ ಕ್ರಿಯೆಗೆ ಸಹಕರಿಸಲು ಒತ್ತಾಯಿಸುತ್ತಿದ್ದ. ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಹೆದರಿಕೆಯಿಂದ ಈವರೆಗೆ ದೂರನ್ನು ನೀಡಿರಲಿಲ್ಲ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಅತ್ಯಾಚಾರ, ಕಿರುಕುಳ, ಲೈಂಗಿಕ ಶೋಷಣೆ, ಜೀವ ಬೆದರಿಕೆ ಒಡ್ಡಿದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Balmatta CSI church Bishop secretary alleged of sexual harassment, FIR filed on six including church priest. Balmatta CSI Bishop secretary alleges of sexual and mental harassment by Vincent Palanna who is the treasurer of CSI Diocesan office in Balmatta and Rev Fr Noel P Karkada who is a priest at CSI Anglican St Paul’s Church at Hampankatta in Mangalore. The woman has sought help from Stanly Kv , Mysore who is the Founder Director at Odanadi Seva Samsthe. A complaint has been filed at Woman police station in Mangalore.
14-07-25 12:50 pm
Bangalore Correspondent
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm