ಫ್ರೀಡಂ ಆ್ಯಪ್ ಪ್ರಚಾರಕ್ಕೆ ಬಳಸಿಕೊಂಡು ಏಜಂಟರಿಗೆ ವಂಚನೆ ; ಎಫ್ಐಆರ್ ದಾಖಲು, ಸಂಸ್ಥೆ ಮುಖ್ಯಸ್ಥ ಸುಧೀರ್ ಠಾಣೆಗೆ ಕರೆಸಿ ವಿಚಾರಣೆ

12-04-23 03:24 pm       Bengaluru Crime Correspondent   ಕ್ರೈಂ

ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಹೇಳಿ ತಮ್ಮ ಆ್ಯಪ್‌ ಪ್ರಚಾರಕ್ಕೆ ಬಳಸಿಕೊಂಡು ಸಂಬಳ ನೀಡದೆ ವಂಚಿಸಿದ ಆರೋಪದಲ್ಲಿ ಇಂಡಿಯನ್‌ ಮನಿ ಫ್ರೀಡಂ ಕಂಪನಿ ಸಿಇಒ ಸಿ.ಎಸ್‌.ಸುಧೀರ್‌ ಹಾಗೂ ಆತನ ಸಹಚರರನ್ನು ಬನಶಂಕರಿ ಠಾಣೆ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, ಎ.12: ಅರೆಕಾಲಿಕ ಉದ್ಯೋಗ ಕೊಡಿಸುವುದಾಗಿ ಹೇಳಿ ತಮ್ಮ ಆ್ಯಪ್‌ ಪ್ರಚಾರಕ್ಕೆ ಬಳಸಿಕೊಂಡು ಸಂಬಳ ನೀಡದೆ ವಂಚಿಸಿದ ಆರೋಪದಲ್ಲಿ ಇಂಡಿಯನ್‌ ಮನಿ ಫ್ರೀಡಂ ಕಂಪನಿ ಸಿಇಒ ಸಿ.ಎಸ್‌.ಸುಧೀರ್‌ ಹಾಗೂ ಆತನ ಸಹಚರರನ್ನು ಬನಶಂಕರಿ ಠಾಣೆ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

ಬನಶಂಕರಿ ಠಾಣೆಯಲ್ಲಿ 21 ಮಂದಿ ಯುವಕ-ಯುವತಿಯರಿಗೆ ವಂಚನೆ ಎಸಗಿದ ಬಗ್ಗೆ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಿಎಸ್ ಸುಧೀರ್ ಮತ್ತು ಇತರರು ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ಸೂಚಿಸಿತ್ತು.  

ಪೊಲೀಸರ ನೋಟಿಸ್‌ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಸುಧೀರ್‌ ಹಾಗೂ ಆತನ ಕಂಪನಿಯ ಇತರೆ ಉದ್ಯೋಗಿಗಳನ್ನು ಜಯನಗರ ಎಸಿಪಿ ಕೆ.ವಿ.ಶ್ರೀನಿವಾಸ್‌ ಹಾಗೂ ಬನಶಂಕರಿ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ವಿಚಾರಣೆ ನಡೆಸಿದ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಉದ್ಯೋಗಾಂಕ್ಷಿಗಳಿಗೆ ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಫ್ರೀಡಂ ಕಂಪನಿ ಸಿಇಓ ಸುಧೀರ್‌, ತಮ್ಮ ಆ್ಯಪನ್ನು ಹೆಚ್ಚು ಡೌನ್‌ಲೋಡ್‌ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು ರೂ. 15 ಸಾವಿರ ವೇತನ ನೀಡುವುದಾಗಿ ಹೇಳಿದ್ದರು. ಇದನ್ನು ನಂಬಿದ ಕೆಲ ಯುವಕ- ಯುವತಿಯರು, ಸುಲಭವಾಗಿ ಹಣ ಸಂಪಾದಿಸುವ ಆಸೆಯಿಂದ ತಮ್ಮ ಬಂಧುಗಳು ಹಾಗೂ ಸ್ನೇಹಿತರನ್ನು ಫ್ರೀಡಂ ಆ್ಯಪ್‌ಗೆ ಚಂದರಾರನ್ನಾಗಿ ಮಾಡಿಸಿದ್ದರು. ಆದರೆ ಪೂರ್ವನಿಗದಿತ ಒಡಂಬಡಿಕೆಯಂತೆ ಕೆಲಸಗಾರರಿಗೆ ಕಂಪನಿ ಹಣ ಕೊಡಲಿಲ್ಲ.

ಈ ಬಗ್ಗೆ ಕೇಳಿದ್ದಕ್ಕೆ ಎಲ್ಲರನ್ನು ಕೆಲಸದಿಂದ ಸುಧೀರ್‌ ವಜಾಗೊಳಿಸಿದ್ದರು. ಕೊನೆಗೆ ವಂಚನೆ ಆರೋಪ ಹೊರಿಸಿ ಸುಧೀರ್‌ ಹಾಗೂ ಆತನ ಕಂಪನಿಯ 23 ಮಂದಿ ವಿರುದ್ಧ ಬನಶಂಕರಿ ಠಾಣೆಗೆ 21 ಮಂದಿ ಸಂತ್ರಸ್ತರು ದೂರು ನೀಡಿದ್ದರು. ಅದರನ್ವಯ ಸುಧೀರ್‌ ಸೇರಿದಂತೆ 23 ಆರೋಪಿಗಳ ವಿರುದ್ಧ ವಂಚನೆ ಆರೋಪಡಿ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಬಂಧನ ಭೀತಿಯಿಂದ ಸುಧೀರ್, ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

C S Sudheer founder and CEO of IndianMoney and freedom App has been summoned, arrested in Bangalore by Banashankari police after 21 employees  complained against the CEO aginast cheating and fraud. It has been accused that the ffreedom app was created through a plot by Sudheer and others with the purpose of deceiving. According to the complaint, innocent young girls were used to promote the application.