ಬ್ರೇಕಿಂಗ್ ನ್ಯೂಸ್
12-07-25 02:15 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 12 : ಉತ್ತರ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ಕಾರ್ಯ ನಡೆಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಜಲಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಕಳೆದ ಮೂರು ವರ್ಷಗಳಲ್ಲಿ ಮತಾಂತರ ಉದ್ದೇಶಕ್ಕಾಗಿ ಸುಮಾರು 500 ಕೋಟಿಯಷ್ಟು ದೇಣಿಗೆಯನ್ನು ಪಡೆದಿದ್ದಾನೆ ಎಂದು ಎಟಿಎಸ್ ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಪೈಕಿ 200 ಕೋಟಿಯಷ್ಟು ದೇಣಿಗೆ ಅಧಿಕೃತ ಮೂಲಗಳಿಂದ ಪಡೆದಿದ್ದರೆ, 300 ಕೋಟಿಯಷ್ಟು ಮೊತ್ತವನ್ನು ನೇಪಾಳ ಇನ್ನಿತರ ಕಳ್ಳದಾರಿಗಳಿಂದ ಹವಾಲಾ ರೂಪದಲ್ಲಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಭಾರತ- ನೇಪಾಳ ಗಡಿಭಾಗದ ಕಾಠ್ಮಂಡು, ನವಾಲ್ ಪಾರಸಿ, ರೂಪಾಂದೇಹಿ, ಬಾಂಕೇ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಬೇನಾಮಿ ವ್ಯಕ್ತಿಗಳ ಮೂಲಕ ವಹಿವಾಟು ಮಾಡಿಸುತ್ತಿದ್ದ ಎಂದು ಪತ್ತೆ ಮಾಡಿದ್ದಾರೆ.
ಪ್ರಮುಖವಾಗಿ ಈ ದೇಣಿಗೆಯನ್ನು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ, ದುಬೈನಂತಹ ಮುಸ್ಲಿಂ ಬಾಹುಳ್ಯದ ದೇಶಗಳಿಂದ ಸ್ವೀಕರಿಸಲಾಗಿತ್ತು. ಇದರಲ್ಲಿ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದವರು 4-5 ಶೇಕಡಾ ಕಮಿಷನ್ ಪಡೆದು ಈ ಹಣವನ್ನು ಚಾಂಗೂರ್ ಬಾಬಾನಿಗೆ ಮುಟ್ಟಿಸುತ್ತಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾಶ್ ಡಿಪಾಸಿಟ್ ಮೆಷಿನ್ ಗಳಲ್ಲಿ ಈ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಡಿಪಾಸಿಟ್ ಮಾಡಲಾಗುತ್ತಿತ್ತು. ನೇಪಾಳ ಗಡಿಭಾಗದ ಬಿಹಾರಿ ಜಿಲ್ಲೆಗಳಾದ ಬಲರಾಮ್ ಪುರ್, ಶ್ರಾವಸ್ತಿ, ಬಹ್ರೈಚ್, ಲಖೀಂಪುರ್ ಭಾಗದಲ್ಲಿ ಈ ಹಣದ ವಹಿವಾಟು ಹೆಚ್ಚಾಗಿ ಆಗುತ್ತಿತ್ತು. ಸ್ಥಳೀಯ ಮನಿ ಎಕ್ಸ್ ಚೇಂಜ್ ಗಳಲ್ಲಿ ನೇಪಾಳಿ ಕರೆನ್ಸಿಯನ್ನು ಭಾರತೀಯ ಕರೆನ್ಸಿಯಾಗಿ ಬದಲಿಸಲಾಗುತ್ತಿತ್ತು.
ಬಿಹಾರದ ಜಿಲ್ಲೆಗಳಾದ ಮಧುಬನಿ, ಸೀತಾಮಹಿ, ಪೂರ್ನಿಯಾ, ಕಿಷನ್ಗಂಜ್, ಚಂಪಾರಣ್, ಸೂಪೌಲ್ ಭಾಗದಲ್ಲಿ ಹೆಚ್ಚು ಏಜಂಟರಿದ್ದು, ನೇಪಾಳದಿಂದ ಬರುತ್ತಿದ್ದ ಫಂಡ್ ಅನ್ನು ಗುಪ್ತವಾಗಿ ಚಾಂಗೂರ್ ಬಾಬಾಗೆ ತಲುಪಿಸುತ್ತಿದ್ದರು. ಅಯೋಧ್ಯಾ ಜಿಲ್ಲೆಗೆ ಅತಿ ಹೆಚ್ಚು ಹಣವನ್ನು ಬಳಕೆ ಮಾಡಲಾಗಿದ್ದು, ಅಲ್ಲಿರುವ ಹಿಂದು ಮಹಿಳೆಯರನ್ನು ಮತಾಂತರಿಸಲು ಟಾರ್ಗೆಟ್ ಮಾಡಿದ್ದರು. ಈ ಕುರಿತಾಗಿ ಚಾಂಗೂರ್ ಬಾಬಾ ಮತ್ತು ಆತನ ಸಹಚರರು ಹೊಂದಿದ್ದ 40 ಬ್ಯಾಂಕ್ ಖಾತೆಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಎಟಿಎಸ್ ಪೊಲೀಸರು ಹತ್ತು ವರ್ಷಗಳ ಆದಾಯ ತೆರಿಗೆ ದಾಖಲೆಯನ್ನು ಸಲ್ಲಿಸುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ, ಚಾಂಗೂರ್ ಬಾಬಾ ಸಹಚರ ಎನ್ನಲಾದ ನವೀನ್ ರೋಹ್ರಾ ಎಂಬ ಹೆಸರಿನಲ್ಲಿರುವ ಆರು ಖಾತೆಗಳಲ್ಲಿ 34.22 ಕೋಟಿ ಇರುವುದನ್ನು ಎಟಿಎಸ್ ಪತ್ತೆ ಮಾಡಿದೆ. ನಸ್ರೀನ್ ಎಂಬ ಮಹಿಳೆಯ ಖಾತೆಯಲ್ಲಿ 13.90 ಕೋಟಿ ರೂ. ಇರುವುದನ್ನು ಪತ್ತೆ ಮಾಡಲಾಗಿದೆ.
ಇದಲ್ಲದೆ, ಚಾಂಗೂರ್ ಬಾಬಾ ದುಬೈ, ಶಾರ್ಜಾ, ಯುಎಇ ದೇಶಗಳ ವಿದೇಶಿ ಬ್ಯಾಂಕ್ ಗಳಲ್ಲೂ ಖಾತೆಗಳನ್ನು ಹೊಂದಿದ್ದು ಅದನ್ನೂ ಎಟಿಎಸ್ ತಪಾಸಣೆ ನಡೆಸಲು ಮುಂದಾಗಿದೆ. ಇದೇ ವೇಳೆ, ಬಲರಾಂಪುರದಲ್ಲಿ 5 ಕೋಟಿ ವೆಚ್ಚದಲ್ಲಿ ಸರ್ಕಾರಿ ಜಾಗವನ್ನು ಕಬಳಿಸಿ ಚಾಂಗೂರ್ ಬಾಬಾ ನಿರ್ಮಿಸಿದ್ದ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. 40 ಕೊಠಡಿಗಳಿದ್ದ ಸಂಪೂರ್ಣ ಮಾರ್ಬಲ್ ಲೇಪಿತ ಬಂಗಲೆಯನ್ನು ಹತ್ತು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿದೆ. ಚಾಂಗೂರ್ ಬಾಬಾ ಉತ್ತರ ಪ್ರದೇಶದಲ್ಲಿ 1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಮತಾಂತರ ಮಾಡಿದ್ದಾನೆ ಮತ್ತು ಇದಕ್ಕಾಗಿ ನೂರಾರು ಕೋಟಿ ಹಟವನ್ನು ವಿದೇಶಗಳಿಂದ ಫಂಡಿಂಗ್ ಪಡೆದಿದ್ದಾನೆಂದು ಎಟಿಎಸ್ ಪೊಲೀಸರು ಪತ್ತೆ ಮಾಡಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. (ಮಾಹಿತಿ-ಇಂಡಿಯಾ ಟುಡೇ)
In a startling revelation, the Uttar Pradesh Anti-Terrorism Squad (ATS) has disclosed that self-proclaimed godman Jalaluddin, also known as Changur Baba—arrested recently on charges of orchestrating mass religious conversions—received foreign funding amounting to nearly ₹500 crore over the past three years.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm