ಬ್ರೇಕಿಂಗ್ ನ್ಯೂಸ್
21-04-23 11:09 pm Mangalore Correspondent ಕ್ರೈಂ
ಮಂಗಳೂರು, ಎ.21: ದಿನದಿಂದ ದಿನಕ್ಕೆ ಆನ್ಲೈನ್ ಮೋಸಕ್ಕೆ ಒಳಗಾಗುವುದು ಹೆಚ್ಚುತ್ತಿದೆ. ಬುದ್ಧಿವಂತರು ಹೆಚ್ಚಿದ್ದಾರೆ ಎನ್ನಲಾಗುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಮತ್ತೆ ಆರು ಸೈಬರ್ ಫ್ರಾಡ್ ಪ್ರಕರಣಗಳು ದಾಖಲಾಗಿವೆ.
ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ನಕಲಿ ಖಾತೆದಾರ ಮೆಸೇಜ್ ನಂಬಿ 90 ಸಾವಿರ ರೂ. ಕಳಿಸಿ ಹಣ ಕಳಕೊಂಡ ಪ್ರಸಂಗ ನಡೆದಿದೆ. ವ್ಯಕ್ತಿಯೊಬ್ಬ ಇನ್ ಸ್ಟಾ ಗ್ರಾಮ್ ಬಳಕೆ ಮಾಡುತ್ತಿದ್ದಾಗ ಗೆಳೆಯನ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ನಿಮ್ಮ ಇನ್ ಸ್ಟಾ ಗ್ರಾಮ್ ವ್ಯಾಲೆಟ್ ಖಾತೆಗೆ 4.16 ಲಕ್ಷ ರೂ. ಹಣ ಬಂದಿದೆ, ಚೆಕ್ ಮಾಡಿ ಎಂದು ಮೆಸೇಜ್ ಬಂದಿತ್ತು. ಏನೋ ಪ್ರೈಸ್ ಬಂದಿದೆ ಎಂದೆಣಿಸಿಕೊಂಡ ವ್ಯಕ್ತಿ, ಕೂಡಲೇ ಮೆಸೇಜ್ ಚೆಕ್ ಮಾಡಿದ್ದರು. ಲಿಜ್ಜೀ ಹೂಪರ್ ಖಾತೆಯಿಂದ ಮೆಸೇಜ್ ಬಂದಿತ್ತು. ಗೆಳೆಯನೇ ಸೂಚಿಸಿ, ಮೆಸೇಜ್ ಬಂದಿದ್ದರಿಂದ ಈತನೂ ನಂಬಿದ್ದ. ಬಳಿಕ ವ್ಯಾಲೆಟ್ ಪಿನ್ ವೆರಿಫೈ ಶುಲ್ಕದ ಹೆಸರಲ್ಲಿ ಹಣ ಕಳಿಸುವಂತೆ ಆ ಕಡೆಯಿಂದ ಮೆಸೇಜ್ ಬಂದಿತ್ತು. ಇದನ್ನು ನಂಬಿದ ವ್ಯಕ್ತಿ ಎ.12ರಂದು 40 ಸಾವಿರ, 13ರಂದು ಮತ್ತೆ 50 ಸಾವಿರ ಹಣವನ್ನು ಕಳಿಸಿದ್ದರು.
ಆಬಳಿಕ ಮತ್ತೆ 70 ಸಾವಿರ ಹಣ ಕಳಿಸುವಂತೆ ಮರುದಿನ ಮೆಸೇಜ್ ಬಂದಿದ್ದನ್ನು ನೋಡಿ ಏನೋ ಎಡವಟ್ಟು ಆಗಿದೆಯೆಂದು ಹೇಳಿ ಗೆಳೆಯನಿಗೆ ಫೋನ್ ಮಾಡಿದ್ದರು. ಅಷ್ಟರಲ್ಲಿ ತನ್ನ ಖಾತೆ ಆರು ತಿಂಗಳಿಂದ ಹ್ಯಾಕ್ ಆಗಿರುವುದನ್ನು ಅತ್ತ ಕಡೆಯಿಂದ ಹೇಳಿದ್ದು, ಈ ವ್ಯಕ್ತಿ ಶಾಕ್ ಆಗಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ವ್ಯಕ್ತಿ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಎನಿ ಡೆಸ್ಕ್ ಏಪ್ ಡೌನ್ಲೋಡ್ ಮಾಡುವಂತೆ ಹೇಳಿ 83,999 ರೂಪಾಯಿ ಹಣ ಪೀಕಿಸಿಕೊಂಡ ಪ್ರಸಂಗ ನಡೆದಿದ್ದು, ವ್ಯಕ್ತಿ ನಿಂತಲ್ಲೇ ಮೋಸ ಹೋಗಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ಕಸ್ಟಮರ್ ಕೇರ್ ನಂಬರಿಗೆಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ಇದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿದ್ದು, ತನ್ನನ್ನು ಐಸಿಐಸಿಐ ಬ್ಯಾಂಕ್ ಪ್ರತಿನಿಧಿಯೆಂದು ಹೇಳಿಕೊಂಡಿದ್ದಾನೆ. ಅಲ್ಲದೆ, ಕ್ರೆಡಿಟ್ ಕಾರ್ಡ್ ಬಗ್ಗೆ ಕೇಳಿದಾಗ, ನೀವು ಏನಿ ಡೆಸ್ಕ್ ಏಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅದರಲ್ಲಿ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲ ಇರುವುದಾಗಿ ಹೇಳಿದ್ದ. ವ್ಯಕ್ತಿ ಅದರಂತೆ, ಎನಿ ಡೆಸ್ಕ್ ಏಪ್ ಅನ್ನು ಡೌನ್ಲೋಡ್ ಮಾಡಿದ್ದ. ಕೆಲವೇ ಹೊತ್ತಿನಲ್ಲಿ ವ್ಯಕ್ತಿಯ ಐಓಬಿ ಬ್ಯಾಂಕಿನ ಖಾತೆಯಿಂದ ವಿವಿಧ ಹಂತಗಳಲ್ಲಿ 83,999 ರೂಪಾಯಿ ಹಣ ಖೋತಾ ಆಗಿತ್ತು.
ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಪಾರ್ಟ್ ಟೈಮ್ ಕೆಲಸ ಇದೆಯೆಂದು ನಂಬಿ ವಾಟ್ಸಪ್ ಮೆಸೇಜಿಗೆ ಉತ್ತರಿಸಲು ಹೋಗಿ ಬರೋಬ್ಬರಿ 5.66 ಲಕ್ಷ ರೂಪಾಯಿ ಹಣ ಕಳಕೊಂಡಿದ್ದಾನೆ. ಕಳೆದ ಫೆಬ್ರವರಿ ತಿಂಗಳಲ್ಲಿ ವ್ಯಕ್ತಿಗೆ ವಾಟ್ಸಪ್ ನಲ್ಲಿ ಬಿಐಟಿ ಪ್ರೈವೇಟ್ ಕಂಪನಿಯಲ್ಲಿ ಪಾರ್ಟ್ ಟೈಮ್ ಜಾಬ್ ಇದೆಯೆಂದು ಮೆಸೇಜ್ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ವ್ಯಕ್ತಿಗೆ ಆ ಕಡೆಯಿಂದ ಫೋನ್ ನಂಬರ್ ಬಂದಿತ್ತು. ಅದಕ್ಕೆ ಫೋನ್ ಮಾಡಿದ್ದ ವ್ಯಕ್ತಿಗೆ, ಆ ಕಡೆಯಿಂದ ಟಾಸ್ಕ್ ನೀಡಲಾಗಿತ್ತು. ವ್ಯಕ್ತಿ ಟಾಸ್ಕ್ ಕಂಪ್ಲೀಟ್ ಮಾಡಿದ್ದಲ್ಲದೆ, ಅದರ ಶುಲ್ಕವಾಗಿ ಮೊದಲಿಗೆ 232 ರೂ., ಆನಂತರ 2232 ರೂ. ಕಳಿಸುವಂತೆ ಮೆಸೇಜ್ ಬಂದಿತ್ತು. ಆನಂತರ ಫೆಬ್ರವರಿ 4ರಿಂದ ಮಾರ್ಚ್ 10ರ ವರೆಗೆ 5,66,664 ರೂಪಾಯಿ ಅನ್ನು ವಿವಿಧ ಹಂತಗಳಲ್ಲಿ ನಾನಾ ತರದ ಶುಲ್ಕದ ರೂಪದಲ್ಲಿ ಕಟ್ಟಿದ್ದ. ಇನ್ನಷ್ಟು ಹಣಕ್ಕೆ ಬೇಡಿಕೆ ಇಡುತ್ತಲೇ ಇದ್ದಾಗ ವ್ಯಕ್ತಿ ಮೋಸ ಹೋಗಿರುವುದು ಅರಿವಾಗಿದ್ದು, ಪೊಲೀಸರ ಬಳಿಗೆ ಬಂದಿದ್ದಾನೆ.
ನಾಲ್ಕನೇ ಪ್ರಕರಣದಲ್ಲಿ ವ್ಯಕ್ತಿಯೊಬ್ಬ 15 ಸಾವಿರ ಮೌಲ್ಯದ ಉತ್ತಮ ಗುಣಮಟ್ಟದ ಮೊಬೈಲ್ ಖರೀದಿಸಲು ಹೋಗಿ 1.36 ಲಕ್ಷ ರೂಪಾಯಿ ಕಳಕೊಂಡಿದ್ದಾನೆ. ಫೇಸ್ಬುಕ್ ನಲ್ಲಿ ಐಫೋನ್ ಮೊಬೈಲ್ ಕುರಿತ ವಿಡಿಯೋ ಒಂದನ್ನು ನೋಡಿ ಲೈಕ್ ಕೊಟ್ಟಿದ್ದ. ಕೂಡಲೇ ಅತ್ತ ಕಡೆಯಿಂದ ಈತನ ಮೊಬೈಲಿಗೆ ಸಂದೇಶ ಬಂದಿತ್ತು. ಅದೇ ಮೊಬೈಲ್ ಕೇವಲ 15 ಸಾವಿರಕ್ಕೆ ಸಿಗುತ್ತದೆ, ಬೇಕಾದ್ರೆ ವಿಚಾರಿಸಿ ಎಂದಿತ್ತು. ಅಲ್ಲದೆ, ಗೂಗಲ್ ಪೇ ನಂಬರ್ ಕಳಿಸಿ ಹಣ ಕಳಿಸಿದರೆ ಮೊಬೈಲ್ ತಲುಪಿಸಲಾಗುವುದು ಎಂದು ಸಂದೇಶ ಕಳಿಸಿದ್ದರು. ಇದನ್ನು ನಂಬಿದ ವ್ಯಕ್ತಿ ಬೇರೆ ಬೇರೆ ಚಾರ್ಜ್ ಹೆಸರಲ್ಲಿ ಬರೋಬ್ಬರಿ 1.36 ಲಕ್ಷ ರೂಪಾಯಿ ಕಳಿಸಿಕೊಟ್ಟಿದ್ದಾನೆ. ಆದರೆ, ಅತ್ತ ಕಡೆಯಿಂದ ಮೊಬೈಲಂತೂ ಬಂದಿಲ್ಲ.
5ನೇ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಆನ್ಲೈನ್ ಟೆಲಿಗ್ರಾಮ್ ಟ್ರೇಡಿಂಗ್ ಏಪ್ ಗೆ ಹೂಡಿಕೆ ಮಾಡುವ ನೆಪದಲ್ಲಿ ಬರೋಬ್ಬರಿ 4.20 ಲಕ್ಷ ರೂಪಾಯಿ ಕಳಿಸಿಕೊಟ್ಟು ಮೋಸ ಹೋಗಿದ್ದಾನೆ. ಈ ಬಗ್ಗೆ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore sees increase in Online fraudsters, job fraud credit card fraud reported. Six people were deceived to the tune of lac of rupees by online fraudsters in and around the city.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm