ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್ ಪ್ರತಿಷ್ಠೆಯಾಗಿಸಿದೆ, ಈಗ ಟಾರ್ಗೆಟ್ ಮಾಡಿದ್ದಾರೆ, ನನ್ನದು ರಾಹುಲ್ ಗಾಂಧಿ ಐಡಿಯಾಲಜಿ ; ಪ್ರಿಯಾಂಕ ಖರ್ಗೆ 

31-10-25 08:10 pm       HK News Desk   ಕರ್ನಾಟಕ

ಆರೆಸ್ಸೆಸ್ ನವರು ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ನಾನು ಎಲ್ಲೂ ಆರೆಸ್ಸೆಸ್ ಬ್ಯಾನ್ ಮಾಡುವಂತೆ ಹೇಳಿಲ್ಲ. ಆದರೆ ಆರೆಸ್ಸೆಸ್, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.‌

ಕಲಬುರಗಿ, ಅ.31 : ಆರೆಸ್ಸೆಸ್ ನವರು ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ನಾನು ಎಲ್ಲೂ ಆರೆಸ್ಸೆಸ್ ಬ್ಯಾನ್ ಮಾಡುವಂತೆ ಹೇಳಿಲ್ಲ. ಆದರೆ ಆರೆಸ್ಸೆಸ್, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.‌

ಅವರು ತಮ್ಮ ಪಥಸಂಚಲನಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದಾರೆ.‌ ವಿದ್ಯಾರ್ಥಿಗಳು ಓದಲು ಬರ್ತಾರೆ, ಇವರು ಪಥಸಂಚಲನಕ್ಕೆ ಬನ್ನಿ ಅಂತಾರೆ. ಇದೆಲ್ಲ ಸರಿಯಲ್ಲ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನಾವು ಯಾವುದೇ ಪ್ರತಿಭಟನೆ ಮಾಡಬೇಕಾದ್ರೆ ಪರವಾನಿಗೆ ಪಡೆಯುತ್ತೇವೆ. ಆದ್ರೆ ಅವರು ಪರವಾನಿಗೆ ಕೇಳದೇ ಮಾಹಿತಿಗಾಗಿ ಅಂತ ಕೇಳ್ತಾರೆ.‌ ಪಥಸಂಚಲನಕ್ಕೆ ಅಧಿಕಾರಿಗಳ ಬಳಿ ಪರವಾನಿಗೆ ಕೇಳಿಲ್ಲ. ನಾನು ಪತ್ರ ಬರೆದಿದ್ದೇನೆ ಅಂತ ನಮ್ಮ ಮೇಲೆ ಮುಗಿಬಿದ್ದಿದ್ದಾರೆ. 

ಆರೆಸ್ಸೆಸ್ ರಿಜಿಸ್ಟರ್ ಇಲ್ಲದ ಸಂಘವಾಗಿದೆ. ಯಾವುದೇ ಪಕ್ಷಕ್ಕೆ ಸೀಮಿತ ಇಲ್ಲ ಅಂತಾರೆ. ಆದರೆ ಬಿಜೆಪಿಯವರು ಯಾಕೆ ಅವರ ಪರ ವಹಿಸುತ್ತಾರೆ. ಆರೆಸ್ಸೆಸ್ ಬಗ್ಗೆ ಮಾತಾಡಿದರೆ ನನಗೆ ದೇಶ ವಿದೇಶದಿಂದ ಫೋನ್ ಮಾಡಿ ಬೈದಿದ್ದಾರೆ. ನನಗೆ, ನಮ್ಮ ಕುಟುಂಬಕ್ಕೆ ಬೈದಿದ್ದಾರೆ, ಯಾರಾದ್ರೂ ಅದನ್ನ ಖಂಡಿಸಿದ್ರಾ? 

ಮಾಹಿತಿ ಅಷ್ಟೇ ಕೊಡೋದಾದ್ರೆ ನಾವು ಅವರಿಗೆ ಯಾಕೆ ಅವರಿಗೆ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡಿ ಅಂತ ಕೇಳಿದ್ರೆ ನಮ್ಮ ಅಧಿಕಾರಿಗಳು ಅವರಿಗೆ ಕೊಡ್ತಾ ಇದ್ರು. ಲಾಠಿ ಬೀಸಿಕೊಂಡು ಹೋದ್ರೆ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಅಂತ ಮತ್ತೊಂದು ಸಂಘಟನೆಯವರು ಕೊಡಬೇಡಿ ಅಂತ ಹೇಳಿದ್ದಾರೆ.‌ ಹಾಗಾಗಿ ಆಕ್ಷೇಪ ಬಂದಿರುವುದರಿಂದ ಕೊಟ್ಟಿಲ್ಲ. ಈಗ ವಿಷಯ ಹೈಕೋರ್ಟ್ ನಲ್ಲಿದೆ, ಕೋರ್ಟ್ ಏನು ಹೇಳುತ್ತೋ ಅದನ್ನು ಪಾಲಿಸುತ್ತೇವೆ ಎಂದರು.‌

ಬೇರೆ ನಾಯಕರ ಐಡಿಯಾಲಜಿ ಬಗ್ಗೆ ಮಾತನಾಡಲ್ಲ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಖರ್ಗೆ, ಸಿದ್ದರಾಮಯ್ಯನವರ ಐಡಿಯಾಲಜಿ ಫಾಲೋ ಮಾಡುತ್ತೇನೆ‌. ಅದು ಸಾಕು ನಂಗೆ ಎಂದು ಹೇಳಿದ ಪ್ರಿಯಾಂಕ ಖರ್ಗೆ, ಪಥಸಂಚಲನಕ್ಕೆ ಅರ್ಜಿ ಹಾಕಿದ್ದ ಆರ್ಎಸ್ಎಸ್ ಮುಖಂಡ ಯಾಕೆ ಶಾಂತಿ ಸಭೆಗೆ ಹೋಗಲಿಲ್ಲ.‌ ತನ್ನ ಬದಲು ಬಿಜೆಪಿ ಮುಖಂಡರನ್ನ ಶಾಂತಿ ಸಭೆಗೆ ಯಾಕೆ ಕಳುಹಿಸಿದ್ರು. ಅಶಾಂತಿ ಮೂಡಿಸೋಕೆ ಬಿಜೆಪಿ ಮುಖಂಡರು ಹೋಗಿದ್ರಾ..? ಎಂದು ಪ್ರಶ್ನಿಸಿದರು. ‌ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾಲ್ಕೈದು ಜನರಿಗೆ ಮಾತ್ರ ಗೊತ್ತಿದೆ. ಅದು ಬಿಟ್ಟು ನೀವು ಎಲ್ಲರನ್ನೂ ಕೇಳ್ತಿದ್ದೀರಾ? ಎಂದು ಸಚಿವ ಸಂಪುಟ ವಿಸ್ತರಣೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಖರ್ಗೆ ಕಟಕಿಯಾಡಿದರು.

Minister Priyank Kharge has alleged that the RSS has turned conducting a path sanchalan (march) in his constituency into a matter of prestige and is now personally targeting him.