ಬ್ರೇಕಿಂಗ್ ನ್ಯೂಸ್
01-11-25 01:31 pm Mangalore Correspondent ಕ್ರೈಂ
ಮಂಗಳೂರು, ನ.1 : ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ 79 ವರ್ಷದ ವೃದ್ಧ ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚಿಸಿ, 17 ಲಕ್ಷ ರೂ. ಲಪಟಾಯಿಸಿದ ಘಟನೆ ನಡೆದಿದ್ದು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸಂತ್ರಸ್ತೆ ಕಳೆದುಕೊಂಡಿದ್ದ 17 ಲಕ್ಷ ಹಣವನ್ನು ಮರಳಿ ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.23ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಿಜೈ ನಿವಾಸಿ 79 ವರ್ಷದ ಮಹಿಳೆಗೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿದ್ದ. ನಿಮಗೆ ಪ್ರಕರಣವೊಂದರಲ್ಲಿ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಬಂಧನದ ಬೆದರಿಕೆಯೊಡ್ಡಿದ್ದಾನೆ. ಬಂಧನದಿಂದ ಪಾರಾಗಲು ಕೂಡಲೇ ನಿಮ್ಮ ಖಾತೆಯಲ್ಲಿರುವ ಹಣವನ್ನು ಠೇವಣಿ ಮಾಡುವಂತೆ ಹಾಗೂ ಪರಿಶೀಲನೆ ಬಳಿಕ ಹಣವನ್ನು ಮರಳಿಸುವುದಾಗಿ ತಿಳಿಸಿದ್ದಾನೆ.

ಈ ಪ್ರಕ್ರಿಯೆ ಮುಗಿಯೋ ವರೆಗೂ ಯಾರಿಗೂ ತಿಳಿಸದಂತೆ ಭಯ ಹುಟ್ಟಿಸಿದ್ದು, ಸುಮಾರು 5 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿ ಇರುತ್ತೀರಿ ಎಂದು ತಿಳಿಸಿದ್ದಾರೆ. ಈ ವೇಳೆ, ಮಹಿಳೆ ಬ್ಯಾಂಕ್‌ಗೆ ತೆರಳಿ ತನ್ನ ಸ್ಥಿರ ಠೇವಣಿ ಖಾತೆಯಲ್ಲಿದ್ದ 17 ಲಕ್ಷ ರೂ. ಹಣವನ್ನು ಆರೋಪಿ ತಿಳಿಸಿದ ಖಾತೆಗೆ ವರ್ಗಾಯಿಸಿದ್ದಾರೆ.
ಬಳಿಕ ಸಂತ್ರಸ್ತ ಮಹಿಳೆ ನೆರೆಮನೆಯ ಮಹಿಳೆಯೊಬ್ಬರಿಗೆ ವಿಷಯ ತಿಳಿಸಿದಾಗ ವಂಚನೆಯ ಸಂಶಯ ಬಂದಿದೆ. ಕೂಡಲೇ ಮಹಿಳೆಯ ಜತೆಗೆ ಸೈಬರ್ ಠಾಣೆಗೆ ತೆರಳಿ ಅಳಲು ಹೇಳಿಕೊಂಡಿದ್ದಾರೆ. ತಕ್ಷಣ ಠಾಣಾಧಿಕಾರಿ 1930 ಸಹಾಯವಾಣಿ ಮೂಲಕ ದೂರು ಕೊಟ್ಟು ಬ್ಯಾಂಕ್ ಖಾತೆಯಲ್ಲಿದ್ದ 17 ಲಕ್ಷ ರೂ.ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅ.24ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅ.27ರಂದು ಹಣ ಬಿಡುಗಡೆಗೆ ಆದೇಶ ನೀಡಿದೆ. ಇದರಂತೆ, ಸಂತ್ರಸ್ತೆಯ ಖಾತೆಗೆ ಹಣ ಮರಳಿಸಲಾಗಿದೆ.
ಮೋಸ ತಿಳಿಯುತ್ತಲೇ ಸಂತ್ರಸ್ತೆ ದೂರು ನೀಡಿದ ಕಾರಣ ಕ್ಷಿಪ್ರಗತಿಯ ಕಾರ್ಯಾಚರಣೆ ಮೂಲಕ ಪೊಲೀಸರು ಸಂತ್ರಸ್ತೆಯ ಬ್ಯಾಂಕ್ ಖಾತೆಯ ಹಣವನ್ನು ಬ್ಲಾಕ್ ಮಾಡಿ ಮರಳಿ ಪಡೆಯಲು ಸಾಧ್ಯವಾಗಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ದೂರು ನೀಡುವಾಗ ವಿಳಂಬವಾಗಿ ಹಣ ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಗೋಲ್ಡನ್ ಅವರ್ ಬಳಕೆ ಮಾಡಿದ ಕಾರಣ ಸಂತ್ರಸ್ತರಿಗೆ ಹಣ ವಾಪಸ್ ನೀಡಲಾಗಿದೆ ಎಂದು ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ರಿಸರ್ವ್ ಬ್ಯಾಂಕ್ ಎಂದು ಹೇಳಿ ಹಾಸನಕ್ಕೆ ಹಣ ಕಳಿಸಿದ್ದೆ !
ವಿಡಿಯೋ ಕರೆ ಮಾಡಿದ ವ್ಯಕ್ತಿ, ಮುಂಬೈನ ಡೇಟಾ ಪ್ರೊಟೆಕ್ಷನ್ ಡಿಪಾರ್ಟ್ಮೆಂಟ್ ಆಫ್ ಇಂಡಿಯಾದಿಂದ ಮಾತನಾಡುತ್ತಿದ್ದೇನೆ, ನಿಮ್ಮ ಆಧಾರ್ ಕಾರ್ಡ್ ಉಪಯೋಗಿಸಿ ಯಾರೋ ಸಿಮ್ ತೆಗೆದುಕೊಂಡಿದ್ದು ವಂಚನೆಗೆ ಬಳಕೆಯಾಗಿದೆ ಎಂದು ತಿಳಿಸಿದ್ದ. ಅಲ್ಲದೆ, ನಿಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. 4.5 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಹೇಳಿದ್ದು ಮೋಸ ಆಗಿರುವುದರಿಂದ ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ತಿಳಿಸಿದ್ದ.
ಆನಂತರ, ನಿಮ್ಮನ್ನು ಈ ಪ್ರಕರಣದಿಂದ ಪಾರು ಮಾಡುವ ಐಡಿಯಾವನ್ನೂ ಅವರೇ ಹೇಳಿಕೊಂಡಿದ್ದು ನಿಮ್ಮಲ್ಲಿರುವ ಎಲ್ಲ ಎಫ್ ಡಿ, ಬ್ಯಾಂಕ್ ಖಾತೆಗಳ ಮಾಹಿತಿ ಕೇಳಿದ್ದಾನೆ. ಅಲ್ಲದೆ, ಎಲ್ಲ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ಜಮೆಯಾಗುತ್ತದೆ ಎಂದು ಹೇಳಿ ಬ್ಯಾಂಕ್ ಖಾತೆಯ ಮಾಹಿತಿ ಕೊಟ್ಟು ಸದ್ಯಕ್ಕೆ ಈ ಖಾತೆಗೆ ವರ್ಗಾಯಿಸುವಂತೆ ತಿಳಿಸಿದ್ದಾನೆ. ಆತ ಹೇಳಿದಂತೆ ಖಾತೆಯಲ್ಲಿದ್ದ 17,10,290 ರೂ. ಹಣವನ್ನು ಆತ ಹೇಳಿದ ಖಾತೆಗೆ ವರ್ಗಾಯಿಸಿದ್ದೇನೆ. ಬ್ಯಾಂಕ್ ನಲ್ಲಿ ಅಷ್ಟು ಮೊತ್ತವನ್ನು ಯಾಕೆ ತೆಗೆಯುತ್ತೀರಿ ಎಂದು ಕೇಳಿದ್ದಾರೆ. ಆಗ ನಾನು ಆತ ಹೇಳಿದಂತೆ ಆಸ್ತಿ ಖರೀದಿಸಲು ಎಂದು ಹೇಳಿದ್ದೆ. ಬ್ಯಾಂಕ್ ನಲ್ಲಿ ಹೇಗೆ ವರ್ತಿಸಬೇಕು ಎಂದು ಕೂಡಾ ಅವನೇ ಹೇಳಿಕೊಟ್ಟಿದ್ದ. ಆತ ಸೂಚಿಸಿದಂತೆ ನದೀಂ ಪಾಶಾ ಹೆಸರಿನ ವ್ಯಕ್ತಿಯ ಹಾಸನ ಜಿಲ್ಲೆಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ. ಸುಮಾರು 5 ಗಂಟೆಗಳ ಕಾಲ ಆತನೊಂದಿಗೆ ವಿಡಿಯೋ ಕರೆಯ ಬಳಿಕ, ನೀವಿನ್ನು ಮನೆಗೆ ಹೋಗಿ, ಯಾವುದೇ ಚಿಂತೆ ಮಾಡಬೇಡಿ. ನಿಮ್ಮ ಹಣ ಖಾತೆಗೆ ವಾಪಾಸು ಬರುತ್ತದೆ ಎಂದು ತಿಳಿಸಿದ್ದ. ಮನೆಗೆ ಬಂದ ಬಳಿಕ ರಿಸರ್ವ್ ಬ್ಯಾಂಕ್ ಎಂದು ಹೇಳಿ ಹಾಸನದ ನದೀಂ ಪಾಶ ಎನ್ನುವ ವ್ಯಕ್ತಿಯ ಖಾತೆಗೆ ವರ್ಗಾಯಿಸಲು ತಿಳಿಸಿದ್ದೇಕೆ ಎಂದು ಅನುಮಾನ ಬಂತು. ಈ ಬಗ್ಗೆ ನೆರೆಮನೆಯ ಮಹಿಳೆಗೆ ಮಾಹಿತಿ ನೀಡಿದಾಗ ಮೋಸದ ಬಗ್ಗೆ ತಿಳಿಸಿದ್ದಾರೆ.
In a shocking cybercrime incident, a 79-year-old woman living in an apartment in Mangaluru fell victim to a “digital arrest” scam, losing ₹17 lakh to fraudsters. However, thanks to the swift action of her neighbor and police, the entire amount was recovered within hours after being frozen by the banks.
22-11-25 08:03 pm
HK News Desk
DK Shivakumar: ಸಿಎಂ ಅವರೇ ಐದು ವರ್ಷ ಇರೋದಾಗಿ ಹೇಳ...
22-11-25 02:25 pm
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
23-11-25 09:21 pm
HK News Desk
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
23-11-25 03:25 pm
Udupi Correspondent
Mangalore Rain, Puttur: ಮಂಗಳೂರು, ಪುತ್ತೂರಿನಲ್ಲ...
22-11-25 10:44 pm
ಡಿ.3ರಂದು ಸಿದ್ದರಾಮಯ್ಯ ಸಿಎಂ ಆಗಿಯೇ ಕೋಣಾಜೆಗೆ ಬರಲಿ...
22-11-25 05:46 pm
Drem Deal Group Fraud, Mangalore: IMPACT: ಕೆಎ...
22-11-25 03:49 pm
ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಓಟ ಇರಲ್ಲ ; 24 ಗಂ...
21-11-25 10:39 pm
23-11-25 07:17 pm
Bangalore Correspondent
Bangalore Atm Van Robbery, Arrest: ಮೆಗಾ ದರೋಡೆ...
22-11-25 07:55 pm
Bangalore Robbery, Police Arrested: ಮಹಾನ್ ದರೋ...
21-11-25 11:07 pm
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm