ಬ್ರೇಕಿಂಗ್ ನ್ಯೂಸ್
28-09-23 07:53 pm HK News Desk ಕ್ರೈಂ
ನವದೆಹಲಿ, ಸೆ.28: ನೀವು ಹಣ ಹೂಡಿಕೆ ಮಾಡಿ, ಡಬಲ್ ರಿಟರ್ನ್ ಸಿಗುತ್ತದೆ, ಈ ಲಿಂಕ್ ಕ್ಲಿಕ್ ಮಾಡಿ ಎನ್ನುವ ರೀತಿಯ ಮೊಬೈಲ್ ಮೆಸೇಜ್ ನೋಡಿರಬಹುದು. ಇಂಥದ್ದೇ ಮೆಸೇಜ್, ಲಿಂಕನ್ನೇ ಮುಂದಿಟ್ಟು ನಕಲಿ ಕಂಪನಿಗಳ ಹೆಸರಲ್ಲಿ 125 ಕೋಟಿಯಷ್ಟು ಸೈಬರ್ ದೋಖಾ ನಡೆಸಿರುವ ಜಾಲವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ನಕಲಿ ಕಂಪನಿ ಹೆಸರಲ್ಲಿ ಸೈಬರ್ ಜಾಲ ಹೆಣೆದಿದ್ದ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಟೆಕ್ ಪದವೀಧರನಾಗಿರುವ ಮತ್ತು ಈ ಹಿಂದೆ ಯುಪಿಎಸ್ಸಿ ಪರೀಕ್ಷೆ ಮೂಲಕ ಅಧಿಕಾರಿ ಹುದ್ದೆ ಪಡೆಯಲು ಪ್ರಯತ್ನ ನಡೆಸಿದ್ದ ವಿವೇಕ್ ಕುಮಾರ್ ಸಿಂಗ್ (33), ಆತನ ಗೆಳೆಯರಾದ ಮನೀಶ್ ಕುಮಾರ್ (23), ಸುಹೇಲ್ ಅಕ್ರಮ್ (32), ಗೌರವ್ ಶರ್ಮಾ (23), ಬಲರಾಮ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕೇವಲ ಎರಡು ವರ್ಷಗಳಲ್ಲಿ 125 ಕೋಟಿಯಷ್ಟು ವಿವಿಧ ನಕಲಿ ಕಂಪನಿಗಳ ಹೆಸರಲ್ಲಿ ವಹಿವಾಟು ನಡೆಸಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆದರೆ ಪೊಲೀಸರಿಗೆ ಇವರಿಂದ ಕೇವಲ 1.2 ಕೋಟಿಯಷ್ಟು ಹಣವನ್ನು ಮಾತ್ರ ಜಪ್ತಿ ಮಾಡಲು ಸಾಧ್ಯವಾಗಿದೆ.
ವಿವೇಕ್ ಕುಮಾರ್ ಸಿಂಗ್, ಈ ಜಾಲದ ಪ್ರಮುಖನಾಗಿದ್ದು, ಪ್ರತಿ ವಹಿವಾಟಿನ ಮೇಲೆ 3ರಿಂದ 4 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರೆ, ಇತರರಿಗೆ 1.5 ಪರ್ಸೆಂಟ್ ಹಣವನ್ನು ಕಮಿಷನ್ ರೂಪದಲ್ಲಿ ನೀಡುತ್ತಿದ್ದ. ದೆಹಲಿಯಲ್ಲಿ ಇವರು ಸುಸಜ್ಜಿತ ಕಚೇರಿಯನ್ನು ಹೊಂದಿದ್ದರು. ನಕಲಿ ದಾಖಲೆ ಪತ್ರಗಳನ್ನು ಬಳಸಿ ಸ್ಥಾಪಿಸಿದ್ದ ನಕಲಿ ಕಂಪನಿಗಳನ್ನೇ ಜಾಲದಲ್ಲಿ ತೋರಿಸುತ್ತಿದ್ದರು. ಇತ್ತೀಚೆಗೆ ಆಶೀಶ್ ಎನ್ನುವಾತ ಇದೇ ಜಾಲದಲ್ಲಿ ಸಿಕ್ಕಿಬಿದ್ದು 30 ಲಕ್ಷ ರೂ. ಕಳಕೊಂಡ ಬಳಿಕ ಪೊಲೀಸ್ ದೂರು ನೀಡಿದ್ದರಿಂದ ನಕಲಿ ಜಾಲ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಮೆಸೇಜ್ ಮಾಡಿ, ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ ಎನ್ನುವ ಆಶೀಶ್ ಮಾಹಿತಿ ಆಧರಿಸಿ ಮಧ್ಯ ದೆಹಲಿಯ ಡಿಸಿಪಿ ಸಚಿನ್ ಶರ್ಮಾ ಕಳೆದ ಜೂನ್ ತಿಂಗಳಿನಿಂದ ತನಿಖೆ ಆರಂಭಿಸಿದ್ದರು.
ಹಣ ಹೂಡಿಕೆ ಮಾಡುವಂತೆ ಹೇಳಿ, ಆರಂಭದಲ್ಲಿ ಸಣ್ಣ ಮೊತ್ತದ ರಿಟರ್ನ್ಸ್ ನೀಡುತ್ತಾರೆ. ಜನರು ನಂಬಿಕೆ ಬರುತ್ತಿದ್ದಂತೆ ಮತ್ತಷ್ಟು ಹಣ ಹೂಡಿಕೆ ಮಾಡುತ್ತಾರೆ. ಆನಂತರ, ಹಣ ಹಿಂತಿರುಗಿಸದೆ ವಂಚಿಸುತ್ತಾರೆ. ಆಶೀಶ್ ಇದೇ ರೀತಿ ಹಣ ಹೂಡಿಕೆ ಮಾಡಿ, 30 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಕಳಕೊಂಡಿದ್ದ. ಪೊಲೀಸರ ತನಿಖೆಯಲ್ಲಿ ಆರೋಪಿಗಳು 25 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿರುವುದು ಮತ್ತು ಬೇರೆ ಬೇರೆ ನಗರಗಳಲ್ಲಿ ನಕಲಿ ದಾಖಲೆಗಳನ್ನಿಟ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಒಂದು ಬಿಸಿನೆಸ್ ಅಕೌಂಟ್ ಇರುವುದು ಮತ್ತು ಅದನ್ನು ದೆಹಲಿಯ ಕಚೇರಿ ಹೆಸರಲ್ಲಿ ನಿರ್ವಹಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಸುಹೇಲ್ ಎನ್ನುವಾತ ಬಾಡಿಗೆ ಕಟ್ಟಡದಲ್ಲಿ ಆ ಕಚೇರಿ ಹೊಂದಿದ್ದಲ್ಲದೆ, ಅದೇ ಕಚೇರಿ ಹೆಸರಲ್ಲಿ 11 ನಕಲಿ ಕಂಪನಿಗಳನ್ನು ಸ್ಥಾಪಿಸಿರುವುದು ಪತ್ತೆಯಾಗಿದೆ. ಆತನ ಜೊತೆಗೆ ಗೌರವ್ ಎನ್ನುವಾತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಪ್ರತಿ ಕಂಪನಿಗೂ ಪ್ರತ್ಯೇಕ ನಿರ್ದೇಶಕರು ಇರುವಂತೆ ತೋರಿಸಲಾಗಿತ್ತು. ಸೆಪ್ಟಂಬರ್ 18ರಂದು ಸುಹೇಲ್ ಮತ್ತು ಗೌರವ್ ದೆಹಲಿಯ ಮಾಲವೀಯ ನಗರದಲ್ಲಿ ಪೊಲೀಸರಿಗೆ ಸಿಕ್ಕಿಬೀಳುವುದರೊಂದಿಗೆ ಜಾಲ ಬೆಳಕಿಗೆ ಬಂದಿತ್ತು.
ತಪಾಸಣೆ ಸಂದರ್ಭದಲ್ಲಿ ಪೋರ್ಜರಿ ಮಾಡಿದ್ದ ದಾಖಲೆ ಪತ್ರಗಳು, ಡೆಬಿಟ್ ಕಾರ್ಡ್, ಇನ್ನಿತರ ದಾಖಲೆ ಪತ್ರಗಳು ಸಿಕ್ಕಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸುವುದು ತಮ್ಮ ಕೆಲಸ ಎನ್ನುವುದನ್ನು ಆರೋಪಿ ಸುಹೇಲ್ ತಿಳಿಸಿದ್ದ. ಆತನ ಮಾಹಿತಿಯಂತೆ, ಗುರ್ಗಾಂವ್ ಮತ್ತು ದೆಹಲಿಯ ಇತರ ಕಡೆಗಳಲ್ಲಿ ಜಾಲದ ಪ್ರಮುಖರು ಇದ್ದಾರೆಂಬುದನ್ನು ತಿಳಿದು ಪೊಲೀಸರು ದಾಳಿ ನಡೆಸಿ ಮತ್ತೆ ಮೂವರನ್ನು ಬಂಧಿಸಿದ್ದಾರೆ. ದೇಶಾದ್ಯಂತ ಜಾಲ ಹೊಂದಿದ್ದ ಇವರು ಹಣ ದ್ವಿಗುಣ ಹೆಸರಲ್ಲಿ ಜನರನ್ನು ಯಾಮಾರಿಸಿ ಹಣ ಪೀಕಿಸುತ್ತಿದ್ದರು.
Police identified the arrested men as Vivek Kumar Singh, 33, Manish Kumar, 23, Suhel Akaram, 32, Gaurav Sharma, 23, and Balram Pandit, 27.Additional deputy commissioner of police (central) Sachin Sharma said that the gang lured people into investing money through channels on the messaging app Telegram. The victims would receive substantial returns on their initial investments, prompting them to invest bigger amounts.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am