ಬ್ರೇಕಿಂಗ್ ನ್ಯೂಸ್
09-11-23 08:14 pm HK News Desk ಕ್ರೈಂ
ಕೋಲಾರ, ನ.9: ಕೋಲಾರ ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ ನವೆಂಬರ್ 3ರಂದು ಸಂಜೆಯ ಹೊತ್ತು ಪ್ರಥಮ ಪಿಯು ವಿದ್ಯಾರ್ಥಿ ಕಾರ್ತಿಕ್ (17) ಎಂಬಾತನನ್ನು ಅತ್ಯಂತ ಹಿಂಸಾತ್ಮಕವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಅಪ್ರಾಪ್ತ ವಯಸ್ಸಿನ ಹಂತಕರಿಗೆ ಈಗ ಪೊಲೀಸರೇ ಫೈರಿಂಗ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಬಂಧಿತರಾಗಿದ್ದ ಈ ಇಬ್ಬರನ್ನು ಕೋಲಾರಕ್ಕೆ ಕರೆತರುವ ವೇಳೆ ಅವರು ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದರು. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಕ್ರೌರ್ಯವನ್ನು ಮೈಗೂಡಿಸಿಕೊಂಡಿರುವ ಇವರ ಸೊಕ್ಕು ಅಡಗಿಸಲು ಪೊಲೀಸರು ಅವರ ಕಾಲಿಗೇ ಗುಂಡು ಹಾರಿಸಿದ್ದಾರೆ. ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಈ ಫೈರಿಂಗ್ ನಡೆದಿದೆ.
ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್ ಅರುಣ್ ಸಿಂಗ್ ಎಂಬವರ ಪುತ್ರನಾಗಿದ್ದಾನೆ. ನವೆಂಬರ್ 3ರಂದು ಸಂಜೆ ಆತನನ್ನು ಶಾಲೆಯ ಆವರಣಕ್ಕೆ ಬರುವಂತೆ ಹೇಳಿದ್ದ ಆತನ ಸ್ನೇಹಿತರು ಅಲ್ಲೇ ಆತನನ್ನು ಕೊಂದು ಮುಗಿಸಿದ್ದರು. ಈ ಕೃತ್ಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನಾಗಿರುವ ದಿಲೀಪ್ ಅಲಿಯಾಸ್ ಶೈನ್ ಮತ್ತು ರಿಷಿಕ್ ಎಂಬವರು ಪ್ರಧಾನ ಆರೋಪಿಗಳು ಎಂದು ಗುರುತಿಸಲಾಗಿತ್ತು. ಒಟ್ಟು ಆರು ಮಂದಿಯ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಮೂವರನ್ನು ಬಂಧಿಸಲಾಗಿತ್ತು. ಕಾರ್ತಿಕ್ ಮತ್ತು ಈ ಹಂತಕರೆಲ್ಲರೂ ಮೊದಲು ಗೆಳೆಯರೇ ಆಗಿದ್ದು, ಯಾವುದೋ ಕಾರಣಕ್ಕೆ ದ್ವೇಷ ಬೆಳೆದು ಕೊಲೆಯ ಹಂತಕ್ಕೆ ತಲುಪಿತ್ತು ಎನ್ನುವುದು ಪ್ರಾಥಮಿಕ ಮಾಹಿತಿ.
ಕಾರ್ತಿಕ್‌ನನ್ನು ಕೊಲೆ ಮಾಡಿದ ದುಷ್ಟ ಬಾಲಕರಲ್ಲಿ ಇಬ್ಬರು ತಮಿಳುನಾಡಿಗೆ ಪರಾರಿಯಾಗಿದ್ದರು. ಆದರೆ, ಅವರ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅವರನ್ನು ಬಂಧಿಸಿದ್ದರು.
ಅವರನ್ನು ಅಲ್ಲಿಂದ ಕೋಲಾರಕ್ಕೆ ಕರೆತರುವ ಜವಾಬ್ದಾರಿಯನ್ನು ಹೊತ್ತಿದ್ದವರು ಮುಳಬಾಗಿಲು ಸಬ್ ಇನ್ಸ್‌ಪೆಕ್ಟರ್ ವಿಠಲ್ ತಳವಾರ್. ಅವರು ವಾಹನದಲ್ಲಿ ಕೊಯಮತ್ತೂರಿನಿಂದ ಹಂತಕರನ್ನು ಕರೆ ತರುತ್ತಿದ್ದರು. ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಬರುತ್ತಿದ್ದಂತೆಯೇ ಒಮ್ಮೆ ವಾಹನವನ್ನು ನಿಲ್ಲಿಸಲಾಯಿತು. ಆಗ ಈ ಹಂತಕರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ವಿಠಲ್ ತಳವಾರ್ ಅವರು ಆತ್ಮರಕ್ಷಣೆಗಾಗಿ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಎರಡೂ ಕಾಲುಗಳಿಗೆ ಗುಂಡು ಹಾರಿಸಲಾಗಿದ್ದು, ಬಳಿಕ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸರಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಪಿ ನಾರಾಯಣ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವೆಂಬರ್ 3ರ ಸಂಜೆ ನಡೆದಿದ್ದೇನು ?
ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್, ನ.3ರಂದು ಕಾಲೇಜಿಗೆ ಹೋಗಿರಲಿಲ್ಲ. ಹೊಟ್ಟೆ ನೋವಿನ ಕಾರಣ ನೀಡಿ ಮನೆಯಲ್ಲೇ ಇದ್ದ. ಸಂಜೆ ವೇಳೆ ಯಾರೋ ಸ್ನೇಹಿತರು ಕರೆ ಮಾಡಿ ಆತನನ್ನು ಕರೆದಿದ್ದಾರೆ. ಸಂಜೆ 5.30ರ ವೇಳೆಗೆ ಕಾರ್ತಿಕ್ ಮನೆಯಿಂದ ಹೊರ ಹೋಗಿದ್ದು ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಾತ್ರಿ 9 ಗಂಟೆಗೆ ಕಾರ್ತಿಕ್‌ನ ತಂದೆ ಅರುಣ್ ಸಿಂಗ್ ಅವರಿಗೆ ಕರೆ ಮಾಡಿ ಕಾರ್ತಿಕ್ ಕೊಲೆಯಾಗಿರುವ ವಿಷಯವನ್ನು ತಿಳಿಸಿದ್ದರು. ಅಲ್ಲಿ ಹೋಗಿ ನೋಡಿದಾಗ ಕಾರ್ತಿಕ್ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದ.
The police have opened fire on the two minor killers arrested in connection with the brutal murder of 17-year-old Karthik, a first PU student, on the premises of a government school in Petchamanahalli layout of Kolar city on the evening of November 3.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
13-02-25 10:08 am
Mangalore Correspondent
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm