ಬ್ರೇಕಿಂಗ್ ನ್ಯೂಸ್
13-11-20 04:38 pm Headline Karnataka News Network ಕ್ರೈಂ
ಮುಂಬೈ, ನವೆಂಬರ್ 13: ಎಟಿಎಂ ಮೆಷೀನ್ ಗೆ ಹಣ ತುಂಬಲು ಬಂದಿದ್ದ ವೇಳೆ ವ್ಯಾನ್ ಚಾಲಕ ವಾಹನದಲ್ಲಿದ್ದ 4.25 ಕೋಟಿ ರೂಪಾಯಿ ಹಣದ ಜೊತೆಗೆ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ವಿರಾರ್ ನ ಬೋಲಿಂಜ್ ನಲ್ಲಿ ಘಟನೆ ನಡೆದಿದ್ದು, ಬ್ಯಾಂಕ್ ಸಿಬಂದಿ ವಾಹನ ನಿಲ್ಲಿಸಿ ಕೋಟಕ್ ಮಹೀಂದ್ರಾ ಎಟಿಎಂ ಒಳಗೆ ತೆರಳಿದ್ದರು. ಗಾರ್ಡ್ ಕೂಡ ವಾಹನದಿಂದ ಇಳಿದು ಹೊರಗೆ ನಿಂತಿದ್ದರು. ಈ ವೇಳೆ, ವಾಹನದಲ್ಲಿ ಕೋಟ್ಯಂತರ ರೂ. ಹಣ ಇರುವುದನ್ನು ತಿಳಿದಿದ್ದ ಚಾಲಕ ವ್ಯಾನ್ ಸಹಿತ ಮುಂದಕ್ಕೆ ಹೋಗಿದ್ದು, ಆನಂತರ ಪರಾರಿಯಾಗಿದ್ದಾನೆ.
ಘಟನೆ ಬ್ಯಾಂಕ್ ಸಿಬಂದಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದಾರೆ. ಆದರೆ, ಪೊಲೀಸರ ಪ್ರಕಾರ, ಚಾಲಕನ ಹೆಸರು, ಮಾಹಿತಿ ನೀಡಿಲ್ಲ. ವಾಹನದಲ್ಲಿ ಜಿಪಿಎಸ್ ಅಳವಡಿಸಿದ್ದು, ಅದರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಬ್ಯಾಂಕ್ ರಜೆ ಇರುವುದರಿಂದ ಎಟಿಎಂಗೆ ಹಣ ತುಂಬಿಸುವುದಕ್ಕಾಗಿ ಸಿಬಂದಿ ಮುಂದಾಗಿದ್ದರು. ಬೇರೆ ಬೇರೆ ಎಟಿಎಂಗೆ ಹಣ ತುಂಬಿಸುವ ಕಾರ್ಯವನ್ನು ಲಾಜಿಸ್ಟಿಕ್ಸ್ ಕಂಪನಿ ನಿರ್ವಹಿಸುತ್ತದೆ.
ಆರೋಪಿ ಚಾಲಕ ವ್ಯಾನನ್ನು ನಿಲ್ಲಿಸಿ ಟ್ರಂಕ್ ನಲ್ಲಿರುವ ಹಣವನ್ನು ಬೇರೆ ವಾಹನಕ್ಕೆ ತುಂಬಿಸಿ ಎಸ್ಕೇಪ್ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ಜೊತೆಗಿದ್ದ ಸೆಕ್ಯುರಿಟಿ ಗಾರ್ಡ್ ಮತ್ತು ಸಿಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
The driver of a cash logistics firm allegedly fled with a van containing nearly Rs 4.3 crore as his colleagues were filling an ATM in Virar, Mumbai.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm