ಬ್ರೇಕಿಂಗ್ ನ್ಯೂಸ್
27-07-26 07:35 pm HK News Staffer ಕ್ರೈಂ
ಬೆಂಗಳೂರು, ಜುಲೈ 27: ಅಗ್ನಿ ಅವಘಡದಲ್ಲಿ ಐಷಾರಾಮಿ ಕಾರುಗಳ ಸಹಿತ 20ಕ್ಕೂ ಅಧಿಕ ವಾಹನಗಳು ಆಹುತಿಯಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಥಣಿಸಂದ್ರ ಮುಖ್ಯ ರಸ್ತೆಯ ಭಾರತೀಯ ಸಿಟಿ ಬಳಿಯಿರುವ ಗ್ಯಾರೇಜ್‌ವೊಂದರಲ್ಲಿ ಸೋಮವಾರ ಬೆಳಗಿನಜಾವ 4 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.
ಪರಿಣಾಮ ರಿಪೇರಿಗಾಗಿ ಗ್ಯಾರೇಜ್‌ಗೆ ತಂದಿದ್ದ ಐಷಾರಾಮಿ ಜಾಗ್ವಾರ್, ರೇಂಜ್ ರೋವರ್ ಸಹಿತ 20ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಗ್ಯಾರೇಜ್ ಪಕ್ಕದ ಶೆಡ್‌ಗೂ ಬೆಂಕಿ ತಗುಲಿದ್ದು ಅಲ್ಲಿ ನಿಲ್ಲಿಸಲಾಗಿದ್ದ ಸುಮಾರು 8 ಆಟೋಗಳು ಸಹ ಅಗ್ನಿಗಾಹುತಿಯಾಗಿವೆ. ಅಲ್ಲದೇ ಕಾರು ಗ್ಯಾರೇಜ್ ಸಮೀಪದ ಫ್ಯಾಕ್ಟರಿಗೂ ಬೆಂಕಿ ತಗುಲಿದ್ದರಿಂದ 2 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು, 4 ಲಕ್ಷ ರೂ. ಯಂತ್ರಕ್ಕೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂದು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಭಾನುವಾರ ಹಳೆ ಚಂದಾಪುರದ ವಿಶಾಲ ಖಾಸಗಿ ಬಸ್ ತಂಗುವ ಯಾರ್ಡ್ನಲ್ಲಿ ಬೆಂಕಿ ಅವಘಡ ಸಂಭವಿಸಿ ನಾಲ್ಕು ಖಾಸಗಿ ಬಸ್ಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿತ್ತು.
ಬಳ್ಳಾರಿಗೆ ತೆರಳಬೇಕಿದ್ದ ಬಸ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಹಿಂಬದಿಯಿಂದ ಎರಡನೇ ಸೀಟಿನ ಬಳಿ ಹೊಗೆ ಬರುತ್ತಿದ್ದುದನ್ನು ದಾರಿಹೋಕರು ಬಂದು ತಿಳಿಸಿದ್ದರು. ತಕ್ಷಣವೇ ನೀರು ತಂದು ಸುರಿದರೂ ಬೆಂಕಿ ತಹಬಂದಿಗೆ ಬಂದಿರಲಿಲ್ಲ. ಕ್ಷಣಾರ್ಧದಲ್ಲಿ ಬೆಂಕಿ ಬಸ್ ಆವರಿಸಿ ಸುಟ್ಟುಹೋಯಿತು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅವರು ಬರುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಇತರೆ ಮೂರೂ ಬಸ್ಗಳಿಗೆ ಬೆಂಕಿ ತಗುಲಿ, ಆ ಬಸ್ಗಳು ಸಹ ಭಸ್ಮಗೊಂಡಿವು ಎಂದು ಚಾಲಕ ಮಂಜುನಾಥ್ ಮಾಹಿತಿ ನೀಡಿದ್ದರು.
ಈ ಬಸ್ ತಂಗುದಾಣದಲ್ಲಿ 200-300 ಕ್ಕೂ ಹೆಚ್ಚು ಬಸ್ ನಿಲುಗಡೆ ಆಗುತ್ತವೆ. ಟೂರಿಸ್ಟ್ ಹಾಗೂ ಲಾಂಗ್ ಟ್ರಿಪ್ ಬಸ್ಗಳು ನಾಲ್ಕೈದು ತಿಂಗಳುಗಳ ಕಾಲ ನಿಲ್ಲುತ್ತವೆ. ಚಂದಾಪುರ ರೆಡ್ಡಿಯವರಿಗೆ ಸೇರಿದ ಯಾರ್ಡ್ ಆದರೂ ಮಹಾರಾಷ್ಟ್ರದವರು ಈ ಜಾಗದ ಉಸ್ತುವಾರಿ ವಹಿಸಿದ್ದಾರೆ ಎನ್ನುವ ಮಾಹಿತಿ ಇದೆ. ಘಟನೆ ನಡೆದ ತಕ್ಷಣ ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಕರೆ ಮಾಡಿದೆವು. ಆದರೆ ರಸ್ತೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಇಲ್ಲಿಗೆ ಬರುವಷ್ಟರಲ್ಲಿ ನಾಲ್ಕೂ ಬಸ್ಗಳು ಸುಟ್ಟಿವೆ ಎಂದು ಚಂದಾಪುರ ಸ್ಥಳೀಯ ಮುಖಂಡ ತಿಳಿಸಿದ್ದರು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm