ಬ್ರೇಕಿಂಗ್ ನ್ಯೂಸ್
12-11-23 10:55 pm Udupi Correspondent ಕ್ರೈಂ
ಉಡುಪಿ, ನ.12: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಒಬ್ಬಳ ಮೇಲಿನ ದ್ವೇಷದಲ್ಲಿ ಇತರ ಮೂವರು ಬಲಿಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಹಸೀನಾ ಅವರ ಪುತ್ರಿ ಅಫ್ನಾನ್(23) ಬೆಂಗಳೂರಿನ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ನಿನ್ನೆಯಷ್ಟೇ ಊರಿಗೆ ಮರಳಿದ್ದರು. ಈಕೆಯ ಮೇಲಿನ ದ್ವೇಷದಲ್ಲಿ ಆಗಂತುಕ ಮನೆಯನ್ನು ಹುಡುಕಿ ನೇರವಾಗಿ ಬಂದಿದ್ದಾನೆ ಎನ್ನಲಾಗುತ್ತಿದೆ. ಆಟೋದಲ್ಲಿ ನೇರವಾಗಿ ಮನೆಗೆ ಬಂದಿದ್ದ ವ್ಯಕ್ತಿ ಕೇವಲ 15-20 ನಿಮಿಷದಲ್ಲಿ ಕೃತ್ಯ ಎಸಗಿ ಹಿಂತಿರುಗಿದ್ದಾನೆ. ಆಟೋ ಚಾಲಕ ಶ್ಯಾಮ್ ಹೇಳಿಕೆಯ ಪ್ರಕಾರ, ಬಂದಿದ್ದ ವ್ಯಕ್ತಿ ಬೆಂಗಳೂರು ಕನ್ನಡ ಭಾಷೆ ಮಾತನಾಡುತ್ತಿದ್ದ ಎಂಬ ಪ್ರಮುಖ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.
ಆಗಂತುಕ ವ್ಯಕ್ತಿ ಕೃತ್ಯದ ಬಳಿಕ ಯಾರಲ್ಲೋ ಬೈಕ್ ನಲ್ಲಿ ಲಿಫ್ಟ್ ಪಡೆದು ನೇಜಾರಿನಿಂದ ಕಲ್ಸಂಕಕ್ಕೆ ಬಂದಿದ್ದು, ಅಲ್ಲಿಂದ ಆಟೋದಲ್ಲಿ ತೆರಳಿದ್ದಾನೆ. ಕಲ್ಸಂಕದಲ್ಲಿ ರಸ್ತೆ ದಾಟಿ ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಬೋಳು ತಲೆ ಮತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡಿರುವುದು ಕಂಡುಬಂದಿದೆ. ಬೆಂಗಳೂರಿನ ವ್ಯಕ್ತಿಯಾಗಿದ್ದರೆ, ಅಫ್ನಾನ್ ಬಗ್ಗೆ ತಿಳಿದೇ ದ್ವೇಷ ಇಟ್ಟುಕೊಂಡು ಬಂದಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮೊದಲಿಗೆ ಅಫ್ನಾನ್ ಗುರಿಯಾಗಿಸಿ ಚೂರಿ ಹಾಕಿದ್ದು, ತಡೆಯಲು ಬಂದ ತಾಯಿ ಹಸೀನಾ, ಇನ್ನೊಬ್ಬ ಪುತ್ರ ಅಯಾಜ್ ಮತ್ತು ಆಸಿಂ ಮೇಲೆಯೂ ದಾಳಿ ನಡೆಸಿದ್ದಾನೆ. ತಡೆಯಲು ಬಂದವರನ್ನು ಮತ್ತು ಕೊಲೆ ಕೃತ್ಯ ನೋಡಿದ್ದಕ್ಕಾಗಿ ಬೊಬ್ಬೆ ಕೇಳಿ ಹೊರಗಿನಿಂದ ಓಡಿ ಬಂದಿದ್ದ 14 ವರ್ಷದ ಆಸಿಂ ಮೇಲೆ ಚೂರಿ ಹಾಕಿರುವ ಸಂಶಯ ಇದೆ.
ಇದೇ ವೇಳೆ, ಹಸೀನಾ ಅವರ ಅತ್ತೆಯೂ ಮನೆಯಲ್ಲಿದ್ದು, ಆಗಂತುಕ ಚೂರಿ ಹಿಡಿದು ಕೊಲೆ ಮಾಡುವುದಕ್ಕಾಗಿ ಆಕೆಯ ಬಳಿಗೂ ತೆರಳಿದ್ದಾನೆ. ಆದರೆ, ಅತ್ತೆ ಟಾಯ್ಲೆಟ್ ಬಾಗಿಲು ಹಾಕ್ಕೊಂಡು ಒಳಗೆ ಅವಿತುಕೊಂಡಿದ್ದು, ಟಾಯ್ಲೆಟ್ ಒಡೆಯಲು ಯತ್ನಿಸಿದ್ದಾನೆ. ಬಳಿಕ ಹೊರಗಿನಿಂದ ಯಾರಾದ್ರೂ ಬರಬಹುದು ಎಂದುಕೊಂಡು ಅರ್ಧದಲ್ಲೇ ತೆರಳಿದ್ದಾನೆ. ಹೀಗಾಗಿ ಮೇಲ್ನೋಟಕ್ಕೆ ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಯೇ ಆಗಿದ್ದರೆ, ಏರ್ ಇಂಡಿಯಾದಲ್ಲಿ ಕೆಲಸಕ್ಕಿದ್ದ ಅಫ್ನಾನ್ ಮೇಲೆ ದ್ವೇಷ ಕಟ್ಟಿಕೊಂಡು ಬಂದಿದ್ದಿರಬಹುದು. ಆಕೆಯ ಮೇಲಿನ ದ್ವೇಷದಲ್ಲಿ ಅಡ್ಡ ಬಂದ ಇತರ ಮೂವರನ್ನೂ ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ಪೊಲೀಸರಲ್ಲಿದೆ. ಅಫ್ನಾನ್ ಜೊತೆಗಿನ ದ್ವೇಷದಲ್ಲಿ ಕೊಲೆ ನಡೆಸಿದ್ದೇ ಹೌದಾದಲ್ಲಿ ಆರೋಪಿ ಯಾರೆಂದು ಈಗಾಗಲೇ ಪೊಲೀಸರಿಗೆ ತಿಳಿದಿರಬಹುದು. ಆತನ ಪತ್ತೆಯೂ ಕಷ್ಟಕರವಾಗಲ್ಲ ಅನ್ನುವ ಮಾತು ಕೇಳಿಬರುತ್ತಿದೆ.
Udupi Murder case, Revenge on hair hostees daughter may be reason for murder of four. The murderer has all the way come from Bangalore. As the city woke to celebrate Diwali, a pall of darkness descended upon Nejar’s Tripti Nagar with the horrifying murder of four members of a Muslim family. The victims identified as Hasina (46) and her children Afnan (23), Aynaz (21), and Asim (12) were brutally stabbed to death, sending shockwaves through the Udupi district. Another family member is currently hospitalized with injuries.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm