ಬ್ರೇಕಿಂಗ್ ನ್ಯೂಸ್
13-11-23 09:31 pm HK News Desk ಕ್ರೈಂ
ವಿಜಯಪುರ, ನ 13: ನಗರದ ಉದ್ಯಮಿಯೊಬ್ಬರಿಗೆ ಆನಲೈನ್ ಮೂಲಕ ವಂಚಿಸಿದ್ದ ನೈಜಿರಿಯಾ ಮೂಲದ ಮೂರು ಜನರನ್ನು ಬಂಧಿಸುವಲ್ಲಿ ವಿಜಯಪುರ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕ್ರಿಪ್ಟೋ ಮೈನಿಂಗ್ ನಲ್ಲಿ ಹೂಡಿಕೆ ಮಾಡಿದರೆ ಹಾಕಿದ ಬಂಡವಾಳದ ಹಣದ ಜೊತೆಗೆ ಶೇ 200 ರಷ್ಟು ಲಾಭಾಂಶ ಕೊಡುವದಾಗಿ ಹೇಳಿ ಈ ಆರೋಪಿಗಳು ನಾನಾ ಸುಳ್ಳು ಸಬೂಬೂಗಳನ್ನು ಉದ್ಯಮಿಯಿಂದ ನಾನಾ ಹಂತಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ರೂ. 59 ಲಕ್ಷ ಹಣವನ್ನು ಹಾಕಿಸಿಕೊಂಡಿದ್ದರು. ಅಲ್ಲದೇ, ಉದ್ಯಮಿಗೆ ಯಾವುದೇ ಲಾಭಾಂಶ ಕೊಡದೇ ಹಣನ್ನೂ ಮರಳಿಸದೇ ಆನಲೈನ್ ಮೂಲಕ ವಂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಉದ್ಯಮಿ ವಿಜಯಪುರ ಸಿ ಇ ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೊಡ್ಡ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ಕಲಂ 66(ಸಿ), 66(ಡಿ), ಐಟಿ ಆ್ಯಕ್ಟ್- 2008 ಮತ್ತು 419, 420ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಎಎಸ್ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ಸಿ ಇ ಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ರಚಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ತಾಂತ್ರಿಕ ಸಾಕ್ಷ್ಯಗಳಾದ ಮೊಬೈಲ್ ಕರೆ ದಾಖಲೆಗಳು, ಆರೋಪಿಗಳು ವಾಸಿಸುತ್ತಿದ್ದ ಸ್ಥಳ, ಮೊಬೈಲ್ ಸಿಮ್ ಮತ್ತೀತರ ದಾಖಲೆಗಳನ್ನು ಸಂಗ್ರಹಿಸಿದರು. ನಂತರ 06.10.2023 ರಂದು ಕಿನ್ಯಾ ದೇಶದ ಪ್ರಜೆ ಸೇರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ಮತ್ತೆ ಮೂರು ಜನರನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಜಯಪುರಕ್ಕೆ ಕರೆ ತರಲಾಗಿದೆ.
ವಿದ್ಯಾಭ್ಯಾಸಕ್ಕಾಗಿ ಬಂದು ಅಪರಾಧ ಕೃತ್ಯ;
ನೈಜೀರಿಯಾ ಮೂಲದ ಮತ್ತು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದಿದ್ದ ಓಸೆಮುದಿಯಾಮೆನ್ ಉರ್ಫ್ ಪೀಟರ್ ಇದೆಮುದೀಯನ್(38), ಉದ್ಯೋಗಕ್ಕಾಗಿ ಬಂದಿದ್ದ ಎಮೆಕಾ ಉರ್ಫ್ ಹ್ಯಾಪಿ ನ್ವಾವ್ಲಿಸಾ(40) ಮತ್ತು ಓಬಿನ್ನಾ ಸ್ಟ್ಯಾನ್ಲೆ ಇಹೆಕ್ವೆರೆನಾ(42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಈ ವಂಚನೆ ನಡೆಸುತ್ತಿದ್ದರು. ಈ ಬಂಧಿತ ಆರೋಪಿಗಳಿಂದ ಆನಲೈನ್ ವಂಚನೆಗೆ ಬಳಸಿದ ನಾನಾ ಕಂಪನಿಗಳ 21 ಮೊಬೈಲುಗಳು, 18 ಸಿಮ್ ಕಾರ್ಡ್ಗುಳ, 1 ಲ್ಯಾಪಟಾಪ್, 2 ಪೆನಡ್ರೈವ್, 1 ಡೋಂಗಲ್, 2 ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಂಡು ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿನಿಮಾ ಶೈಲಿಯಲ್ಲಿ ಬಂಧನ ಕಾರ್ಯಾಚರಣೆ ;
ಈ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ನಿಜವಾಗಿಯೂ ಸವಾಲಾಗಿತ್ತು. ಆರೋಪಿಗಳು ವಂಚನೆಗೆ ಬಳಸಿದ್ದ ಮೊಬೈಲ್ ಸಂಖ್ಯೆಗಳಿಂದ ವಾಟ್ಸಾಪ್ ಮೂಲಕ ಮಾತ್ರ ಕರೆಗಳನ್ನು ಮಾಡಲಾಗಿದ್ದು, ಉಳಿದಂತೆ ಯಾರಿಗೂ ಸಾಮಾನ್ಯ ಕರೆ ಮಾಡಿರಲಿಲ್ಲ. ಅದರಲ್ಲೂ ಬೃಹತ್ ಬೆಂಗಳೂರಿನಲ್ಲಿ ಆರೋಪಿಗಳ ಪತ್ತೆಗಾಗಿ ವಿಜಯಪುರ ಪೊಲೀಸರು ಸುಮಾರು ಒಂದು ವಾರಕ್ಕಿಂತಲೂ ಹೆಚ್ಚು ಕಾಲ ನಾನಾ ತಂತ್ರ ರೂಪಿಸಿದ್ದರು. ಕೊನೆ ಸಿಕ್ಕ ಸುಳಿವೊಂದರ ಆಧಾರದ ಮೇಲೆ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಮೂರೂ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಲಾಗಿರುವ ಶಂಕೆಯಿದ್ದು, ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ಕೈಗೊಂಡಿದ್ದಾರೆ.
Vijayapura Police Arrests Three Online Fraudsters Of Nigerian Origin over crypto currency online fraud.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm