CCB Police, Loan lending: ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಶಾಕ್ ಕೊಟ್ಟ ಸಿಸಿಬಿ ಪೋಲೀಸರು ; 42 ಲಕ್ಷ ನಗದು, ಚಿನ್ನಾಭರಣ ವಶಕ್ಕೆ 

13-11-23 09:40 pm       Bangalore Correspondent   ಕ್ರೈಂ

ಮೀಟರ್ ಬಡ್ಡಿ ದಂಧೆ ನಡೆಸುತಿದ್ದ ನಾಲ್ಕು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದು, ಆರೋಪಿಗಳ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಬೆಂಗಳೂರು, ನ 13: ಮೀಟರ್ ಬಡ್ಡಿ ದಂಧೆ ನಡೆಸುತಿದ್ದ ನಾಲ್ಕು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದು, ಆರೋಪಿಗಳ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಚಾಮರಾಜ ಪೇಟೆಯಲ್ಲಿ ವೆಂಕಟೇಶ, ಬಸವನಗುಡಿಯಲ್ಲಿ ಎಎಸ್‌ಐ ಪುತ್ರಿ ಶೀಲ, ಕಾಮಾಕ್ಷಿ ಪಾಳ್ಯದ ರೌಡಿ ಶೀಟರ್ ಜಗದೀಶ್ ಅಲಿಯಾಸ್ ಟಾಮಿ, ಬಸವೇಶ್ವರ ನಗರದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆದಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ದಾಳಿ ವೇಳೆ 42,42,000 ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 23,42,400 ರೂ. ನಗದು, 7,00,000 ರೂ. ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, ಚೆಕ್‌ಗಳು- 109, ಡಿಮಾಂಡ್ ಪ್ರಾಮಿಸರಿ ನೋಟ್-50, ಖಾಲಿ ಬಾಂಡ್ ಪೇಪರ್-42, ಶುದ್ಧ ಕ್ರಯ ಪ್ರತ್ರಗಳು-85, ಸಾಲ ನಮೂದಿಸಿದ ದಾಖಲಾತಿ-35, ಇ- ಸ್ಪಾಂಪ್ ಪೇಪರ್‌ಗಳು-11, ಪಾಕೆಟ್ ಪುಸ್ತಕ-45, ಅಗ್ರಿಮೆಂಟ್ ಪ್ರತಿಗಳು-15, ರೋಲೆಕ್ಸ್ ವಾಚ್‌-6 ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಡ್ಡಿಗೆ ಸಾಲ ಕೊಟ್ಟು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡಲಾತ್ತಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

CCB police raid on interest loan lenders in Bangalore. 40 lakhs worth gold and cash seized.