Udupi Murder of Four, Accused arrest in Belagavi: ಉಡುಪಿ ತಾಯಿ, ಮಕ್ಕಳ ಕೊಲೆ ಪ್ರಕರಣ ; ಬೆಳಗಾವಿಯಲ್ಲಿ ಶಂಕಿತ ಆರೋಪಿ ವಶಕ್ಕೆ 

14-11-23 08:34 pm       Udupi Correspondent   ಕ್ರೈಂ

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೈದ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಉಡುಪಿ ಪೊಲೀಸರು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ವಶಕ್ಕೆ ಪಡೆದಿದ್ದಾರೆ. ‌

ಉಡುಪಿ, ನ.14: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೈದ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಉಡುಪಿ ಪೊಲೀಸರು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ವಶಕ್ಕೆ ಪಡೆದಿದ್ದಾರೆ. ‌

ಮೂಲತಃ ಮಹಾರಾಷ್ಟ್ರ ಸಾಂಗ್ಲಿ ಮೂಲದ ನಿವಾಸಿ ಪ್ರವೀಣ್​​​​ ಅರುಣ್​​​ ಚೌಗಲೆ(35) ವಶಕ್ಕೆ ಪಡೆದ ಆರೋಪಿ.‌ ಮಂಗಳೂರು ಏರ್ಪೋರ್ಟ್​ನಲ್ಲಿ ಕೆಲಸ ಮಾಡ್ತಿದ್ದ ಪ್ರವೀಣ್​​ ಚೌಗುಲೆಯನ್ನು ಶಂಕೆಯ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯಾಗಿದ್ದ ಪ್ರವೀಣ್​​​​ ಅರುಣ್​​​ ಚೌಗಲೆ ಕುಡಚಿಯ ನೀರಾವರಿ ಇಲಾಖೆ ಅಧಿಕಾರಿಯೊಬ್ಬರ ಸಂಬಂಧಿಯಾಗಿದ್ದು ಅವರದೇ ಮನೆಯಲ್ಲಿ ಅಡಗಿಕೊಂಡಿದ್ದ ಎನ್ನಲಾಗಿದೆ. ಸಿಸಿಟಿವಿಯಲ್ಲಿ ದಾಖಲಾದ ಚಹರೆ ಆಧರಿಸಿ ಹಲವು ಕಡೆಗಳಲ್ಲಿ ಒಂದೇ ರೀತಿ ಕಂಡುಬಂದ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ ಬಗ್ಗೆ ಉಡುಪಿ ಪೊಲೀಸರು ದೃಢಪಡಿಸಿಲ್ಲ.‌

ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಯಿದೆ. ಪೊಲೀಸರು ಆರೋಪಿಯನ್ನು ಉಡುಪಿಗೆ ಕರೆ ತರುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಲ್ಸಂಕ ಸಮೀಪದ ನೇಜಾರಿನಲ್ಲಿ ತಾಯಿ ಹಸೀನಾ ಮತ್ತು ಅವರ ಮಕ್ಕಳಾದ ಅಫ್ನಾನ್​​(23), ಅಯ್ನಾಝ್​​​(21), ಹಾಸೀಂ(14) ಕೊಲೆಯಾಗಿದ್ದರು. ನವೆಂಬರ್​ 12ರಂದು ಬೆಳಗ್ಗೆ ಮನೆಗೆ ನುಗ್ಗಿ ಚೂರಿ ಇರಿದು ತಾಯಿ, ಮಕ್ಕಳನ್ನು ಕೊಲೆ ಮಾಡಲಾಗಿತ್ತು.‌ ಪ್ರಕರಣದ ತನಿಖೆಗೆ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

Udupi Murder of four, accused arreated of Sangli arrested from Belagavi by Udupi Police. In a significant breakthrough, Udupi police have successfully apprehended the murderer   responsible for the brutal murder of four individuals.