ಬ್ರೇಕಿಂಗ್ ನ್ಯೂಸ್
15-11-23 06:49 pm Udupi Correspondent ಕ್ರೈಂ
ಉಡುಪಿ, ನ.15: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೈದ ಹಂತಕನನ್ನು ಉಡುಪಿ ಪೊಲೀಸರು ಕಡೆಗೂ ಅರೆಸ್ಟ್ ಮಾಡಿದ್ದಾರೆ. ಏರಿ ಇಂಡಿಯಾದಲ್ಲಿ ಕೆಲಸಕ್ಕಿದ್ದ ಅಯ್ನಾಜ್ ಮೇಲಿನ ದ್ವೇಷದಿಂದ ಕೃತ್ಯ ಎಸಗಿದ್ದಾನೆ. ತಡೆಯಲು ಬಂದ ಉಳಿದವರನ್ನೂ ಹತ್ಯೆ ಮಾಡಿದ್ದಾನೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಹೇಳಿದ್ದಾರೆ.
ನ.12ರಂದು ಬೆಳಗ್ಗೆ ಕಲ್ಸಂಕ ಬಳಿಯ ನೇಜಾರಿನಲ್ಲಿ ಹಸೀನಾ ಮತ್ತು ಇಬ್ಬರು ಪುತ್ರಿಯರು, ಒಬ್ಬ ಪುತ್ರಿಯನ್ನು ಹತ್ಯೆ ಮಾಡಲಾಗಿತ್ತು. ಅಮಾನುಷ ರೀತಿಯ ಕೃತ್ಯದ ಬಗ್ಗೆ ರಾಜ್ಯಾದ್ಯಂತ ಭಾರೀ ಸಂಚಲನ ಉಂಟಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಬೆಳಗಾವಿಯ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗುಲೆ (39) ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ನಡೆಸಿದ ವೇಳೆ ಕೃತ್ಯವನ್ನು ತಾನೇ ಎಸಗಿದ್ದಾಗಿ ಆರೋಪಿ ಒಪ್ಪಿದ್ದಾನೆಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
ಪ್ರವೀಣ್ ಚೌಗುಲೆ ಮಂಗಳೂರಿನ ಏರ್ಪೋರ್ಟ್ ಕಚೇರಿಯಲ್ಲಿ ಇಂಡಿಯನ್ ಏರ್ವೇಸ್ ನಲ್ಲಿ ಕ್ಯಾಬಿನ್ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ಅಯ್ನಾಜ್ ಮೇಲೆ ಯಾಕೆ ದ್ವೇಷ ಇತ್ತೆಂಬುದು ತಿಳಿಯಬೇಕಷ್ಟೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು. ತಪ್ಪಿಸಿಕೊಳ್ಳುವ ಉದ್ದೇಶ ಮತ್ತು ಕೃತ್ಯದ ಸಾಕ್ಷ್ಯ ನಾಶ ಮಾಡಬೇಕೆಂದು ಇತರರನ್ನು ಕೊಂದಿದ್ದಾನೆ. ಕೊಲೆಗೆ ಚಾಕು ಬಳಸಿದ್ದಾಗಿ ತಿಳಿಸಿದ್ದು, ಅದನ್ನು ಇನ್ನೂ ವಶಕ್ಕೆ ಪಡೆಯಲಾಗಿಲ್ಲ.
ಪ್ರವೀಣ್ ಚೌಗುಲೆ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಮದುವೆಯಾಗಿದೆ, ಖಾಸಗಿ ಮಾಹಿತಿ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ. ಸಿಆರ್ ಪಿಎಫ್ ಅಥವಾ ಸಿಐಎಸ್ಎಫ್ ನಲ್ಲಿ ಸಿಬಂದಿಯಾಗಿ ಇರಲಿಲ್ಲ ಎನ್ನುವ ಮಾಹಿತಿಯಿದೆ. ಸದ್ಯಕ್ಕೆ ಕೃತ್ಯ ಎಸಗಿದ್ದು ಯಾರು ಅನ್ನುವ ಪತ್ತೆ ಮಾಡುವುದಷ್ಟೇ ಉದ್ದೇಶವಾಗಿತ್ತು. ಕೊಲೆ ಮಾಡಿದ್ದು ಅವನೇ ಎನ್ನುವುದು ಪತ್ತೆಯಾಗಿದೆ. ಆತನ ಹಿನ್ನೆಲೆ, ಯಾರೆಲ್ಲ ಸಪೋರ್ಟ್ ಮಾಡಿದ್ದಾರೆ, ಯಾಕಾಗಿ ಕೊಲೆ ಮಾಡಲು ಬಂದಿದ್ದ ಅನ್ನೋದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಕಾರವಾರದಲ್ಲಿ ಒಂದೊಂದು ತಂಡಗಳು ಸಕ್ರಿಯವಾಗಿದ್ದವು. 15-20 ಮಂದಿಯನ್ನು ವಶಕ್ಕೆ ಪಡೆಯಸಲಾಗಿತ್ತು. ಬೆಳಗಾವಿ ಪೊಲೀಸರ ಸಹಕಾರದಲ್ಲಿ ಮಂಗಳವಾರ ಸಂಜೆ ಪ್ರವೀಣ್ ಚೌಗುಲೆಯನ್ನು ವಶಕ್ಕೆ ಪಡೆದಿದ್ದರು. ಕೊಲೆಯಾದ ಎರಡನೇ ಪುತ್ರಿ ಅಯ್ನಾಜ್ ಒಂದು ವರ್ಷದ ತರಬೇತಿ ಬಳಿಕ ಒಂದೂವರೆ ತಿಂಗಳ ಹಿಂದಷ್ಟೇ ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಸಖಿಯಾಗಿ ಕೆಲಸಕ್ಕೆ ಸೇರಿದ್ದರು.
Udupi murder, Police nab accused Praveen Chowgule officer and flight cabin colleague of the slain air hostess, Ainaz. love matter reason for killings. After two days of intensive search, accused Praveen Chowgale (35) was apprehended in Kudachi, Rayabhaga taluk, Belagavi district, in a joint operation by Udupi and Belagavi police. The accused, originally from Sangli, Maharashtra, was located and arrested by the Udupi DySP-led team in Belagavi.
16-07-25 11:47 am
HK News Desk
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 11:42 am
Mangalore Correspondent
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm