ಬ್ರೇಕಿಂಗ್ ನ್ಯೂಸ್
17-11-23 06:22 pm Udupi Correspondent ಕ್ರೈಂ
ಮಂಗಳೂರು, ನ.17: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಪೈಶಾಚಿಕವಾಗಿ ಕೊಂದಿದ್ದ ಹಂತಕ ಪ್ರವೀಣ್ ಚೌಗುಲೆ ವಿಚಿತ್ರ ಮತ್ತು ವಿಕ್ಷಿಪ್ತ ಮನಸ್ಥಿತಿ ಹೊಂದಿದ್ದ ಅನ್ನೋ ವಿಚಾರ ಬಯಲಿಗೆ ಬಂದಿದೆ. ಅಂತಹ ವಿಕೃತ ಮನಸ್ಥಿತಿಯಿಂದಲೇ ಹಸೀನಾ ಅವರ ಕುಟುಂಬದ ಮೂವರು ಹೆಣ್ಮಕ್ಕಳನ್ನು ಮತ್ತು ಇನ್ನೊಬ್ಬ ಬಾಲಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇದಲ್ಲದೆ, ಮಂಗಳೂರಿನಲ್ಲಿ ಐಷಾರಾಮಿ ಜೀವನ ಮಾಡಿಕೊಂಡಿದ್ದ ಅನ್ನೋ ವಿಚಾರವೂ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಪ್ರವೀಣ್ ಚೌಗುಲೆಯ ವಿಕ್ಷಿಪ್ತ ಮನಸ್ಥಿತಿ ಎಷ್ಟಿತ್ತು ಅಂದರೆ, ಪತ್ನಿಯ ಬಗ್ಗೆಯೂ ತೀವ್ರ ಸಂಶಯ ಹೊಂದಿದ್ನಂತೆ. ಆಕೆಯನ್ನು ಒಬ್ಬಂಟಿಯಾಗಿ ಹೊರಗಡೆ ಹೋಗುವುದಕ್ಕೂ ಬಿಡುತ್ತಿರಲಿಲ್ವಂತೆ. ಮನೆಯಲ್ಲಿ ಅಗತ್ಯ ಸಾಮಗ್ರಿ ಮುಗಿದರೂ, ಆತನೇ ರಜೆಯಿದ್ದ ದಿವಸ ಅಂಗಡಿಯಿಂದ ಸಾಮಾನು ಖರೀದಿಸುತ್ತಿದ್ದ. ಸದಾ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದ ಅನ್ನುವ ವಿಚಾರ ಆತನ ಸಹವರ್ತಿಗಳಿಂದ ತಿಳಿದುಬಂದಿದೆ. ಇದೇ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳ ಮಾಡಿ ಆಕೆಯನ್ನು ಕೊಲ್ಲುವುದಕ್ಕೂ ಎರಡು ಬಾರಿ ಪ್ರಯತ್ನ ಪಟ್ಟಿದ್ದ.
ಮಂಗಳೂರಿನ ಕೆಪಿಟಿ ಬಳಿ ಫ್ಲಾಟ್ ಹೊಂದಿದ್ದ ಚೌಗುಲೆ ಆನಂತರ ಇತ್ತೀಚೆಗೆ ಸುರತ್ಕಲ್ ನಲ್ಲಿ ಇಂಡಿಪೆಂಡೆಂಟ್ ಮನೆಗೆ ಶಿಫ್ಟ್ ಆಗಿದ್ದ. ಇದಲ್ಲದೆ, ಕಳೆದ 2023ರ ಜನವರಿ 31ರಂದು ಹೊಸತಾಗಿ ಎಂಜಿ ಹೆಕ್ಟರ್ ಕಾರು ಖರೀದಿಸಿದ್ದ. ಇದೇ ವೇಳೆ, ಟ್ರೈನಿಯಾಗಿ ಏರ್ ಇಂಡಿಯಾ ಸಂಸ್ಥೆಗೆ ಸೇರಿದ್ದ ಅಯ್ನಾಜ್ ಜೊತೆಗೆ ಗೆಳೆತನ ಹೊಂದಿದ್ದ ಎನ್ನಲಾಗುತ್ತಿದ್ದು, ಆಕೆಯ ಮನೆಗೂ ಸಹೋದ್ಯೋಗಿ ಅನ್ನುವ ನೆಲೆಯಲ್ಲಿ ಬಂದು ಹೋಗಿರುವ ಅನುಮಾನವಿದೆ. ಅಯ್ನಾಜ್ ಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಆಕೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ. ಆದರೆ ಇವರ ನಡುವೆ ಪ್ರೀತಿಯಿತ್ತೇ, ಈತನದ್ದು ಏಕಮುಖದ ಪ್ರೀತಿಯಾಗಿತ್ತೇ ಎನ್ನುವುದು ತಿಳಿದುಬಂದಿಲ್ಲ. ಆಕೆಯೊಂದಿಗಿದ್ದ ಅತಿಯಾದ ಮೋಹದಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೊನ್ನೆ ನ.12ರಂದು ಕೊಲೆಯಾದ ದಿನವೇ ಪ್ರವೀಣ್ ಚೌಗುಲೆ, ಉಡುಪಿಯಿಂದ ಮಂಗಳೂರಿಗೆ ಬಂದು ತನ್ನ ಕುಟುಂಬದ ಜೊತೆಗೆ ಕಾರಿನಲ್ಲಿ ಪ್ರವಾಸಕ್ಕೆಂದು ಹೊರಟಿದ್ದ. ಬೆಳಗಾವಿ ತಲುಪಿದ ಬಳಿಕ ಕುಡಚಿಯಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿ ಉಳಿದುಕೊಂಡಿದ್ದ. ಅಲ್ಲಿರುವಾಗಲೇ ಮೊಬೈಲ್ ಆನ್ ಆಗಿದ್ದರಿಂದ ಬೆನ್ನು ಬಿದ್ದಿದ್ದ ಉಡುಪಿ ಪೊಲೀಸರು, ಬೆಳಗಾವಿ ಪೊಲೀಸರ ಮೂಲಕ ಹಿಡಿದಾಕಿದ್ದರು. ಪ್ರವೀಣ್ ಚೌಗುಲೆ ಐಷಾರಾಮಿ ಜೀವನ ಮಾಡುತ್ತಿದ್ದು ಕೇವಲ ಅಲ್ಲಿ ಸಿಗುತ್ತಿದ್ದ ಸಂಬಳದ ಹಣದಿಂದ ಇಷ್ಟೆಲ್ಲ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ, ಆತನನ್ನು ಬಲ್ಲವರು. ಮಂಗಳೂರಿನಲ್ಲಿ ಎರಡು ಫ್ಲಾಟ್, ಸುರತ್ಕಲ್ ನಲ್ಲಿ ಸ್ವಂತ ಮನೆ, ಮತ್ತೊಂದು ಕಡೆ ಖಾಲಿ ಜಾಗ ಖರೀದಿಸಿಟ್ಟಿದ್ದ ಚೌಗುಲೆಗೆ ಹಣ ಎಲ್ಲಿಂದ ಬಂದಿರುವುದು ಅನ್ನುವ ಶಂಕೆ ಇದೆ.
ಪ್ರವೀಣ್ ಚೌಗುಲೆ ಏಳೆಂಟು ವರ್ಷಗಳಿಂದ ಏರ್ ಇಂಡಿಯಾ ವಿಮಾನದಲ್ಲಿ ಸಿಬಂದಿಯಾಗಿದ್ದರಿಂದ ಮಾದಕ ವಸ್ತು ಅಥವಾ ಚಿನ್ನದ ಸ್ಮಗ್ಲಿಂಗ್ ಜಾಲದಲ್ಲಿ ಇದ್ದಾನೆಯೇ ಎಂಬ ಸಂಶಯಗಳಿವೆ. ದುಬೈ ವಿಮಾನದಲ್ಲಿ ಕೆಲಸಕ್ಕಿದ್ದರಿಂದ ಅಕ್ರಮ ಮಾಫಿಯಾಗಳ ನಂಟು ಇರಬಹುದು. ವಿಮಾನದ ಸಿಬಂದಿಗಳಿಗೆ ಏರ್ಪೋರ್ಟ್ ನಲ್ಲಿ ಚೆಕ್ಕಿಂಗ್ ಇಲ್ಲದೆ ನೇರವಾಗಿ ಬಂದು ಹೋಗುವ ವ್ಯವಸ್ಥೆ ಇರುವುದರಿಂದ ಇವರನ್ನು ಬಳಸಿಕೊಂಡು ಚಿನ್ನ, ಮಾದಕ ವಸ್ತು ಸಾಗಾಟ ನಡೆದಿರಬಹುದೇ ಅನ್ನುವ ಅನುಮಾನ ವ್ಯಕ್ತವಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಮಹಿಳೆಯನ್ನು ಮದುವೆಯಾಗಿದ್ದು, ಹತ್ತು ವರ್ಷದ ಮಗ ಮತ್ತು ಇನ್ನೊಂದು ಎರಡು ವರ್ಷದ ಮಗು ಹೊಂದಿದ್ದಾನೆ.
ಅತಿಯಾದ ವ್ಯಾಮೋಹಕ್ಕೆ ನಾಲ್ಕು ಜೀವ ಬಲಿ
ಆರೋಪಿ ಪ್ರವೀಣ್ ಚೌಗುಲೆಯದ್ದು ವಿಕ್ಷಿಪ್ತ ಮನಸ್ಥಿತಿ ಇತ್ತು ಅನ್ನುವ ನೆಲೆಯಲ್ಲಿ ಚರ್ಚೆಯಾಗುತ್ತಿರುವಾಗಲೇ ಮನಶಾಸ್ತ್ರಜ್ಞರು ಅತಿಯಾದ ಮೋಹವೂ (ಪೊಸೆಸಿವ್ ನೆಸ್) ಅಪರಾಧಕ್ಕೆ ಕಾರಣವಾಗಬಲ್ಲದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೆಲವೊಂದು ವಸ್ತುಗಳ ಬಗ್ಗೆ, ಮನಸ್ಸಿಗೆ ಕಂಡಿದ್ದು, ತುಂಬ ಇಷ್ಟವಾದ ವಸ್ತುಗಳ ಬಗ್ಗೆ ಮನುಷ್ಯ ಅತಿಯಾದ ವ್ಯಾಮೋಹ ಇಟ್ಟುಕೊಂಡಿರುತ್ತಾನೆ. ಇದರಿಂದ ಆ ವಸ್ತು ತನಗೆ ಬಿಟ್ಟು ಬೇರೆ ಯಾರಿಗೂ ಸೇರಬಾರದು, ತನಗೆ ಮಾತ್ರ ಸೇರಬೇಕು ಎನ್ನುವ ಮತ್ಸರ ಸಹಿತ ವ್ಯಾಮೋಹ ಇರುತ್ತದೆ. ಪತ್ನಿಗೆ ಯಾರೊಂದಿಗೋ ಸಂಬಂಧವಿದೆ ಎನ್ನುವ ಶಂಕೆಯೂ ಇದೇ ತೆರನಾದದ್ದು ಎನ್ನುತ್ತಾರೆ, ತಜ್ಞರು. ಕೆಲವೊಬ್ಬರು ಗಣ್ಯರು, ಸೆಲೆಬ್ರಿಟಿಗಳ ಬಗ್ಗೆ ಅತಿಯಾದ ಹುಸಿ ಪ್ರೀತಿ, ವ್ಯಾಮೋಹ ಇಟ್ಟಿರುತ್ತಾರೆ. ಅಂಥವರು ಸತ್ತರೆ ತಾವೂ ಸಾಯುವ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಇಂಥವರು ಕೆಲವೊಮ್ಮೆ ವೃತ್ತಿ ಸಾಮೀಪ್ಯದಲ್ಲಿ ಹೆಣ್ಮಕ್ಕಳು ನಕ್ಕರೂ, ಆಕೆ ತನ್ನನ್ನು ಇಷ್ಟ ಪಡುತ್ತಾಳೆ ಎಂದು ಭ್ರಮೆಯಲ್ಲಿರುತ್ತಾರೆ. ಆದರೆ ಈ ರೀತಿಯ ಮಾನಸಿಕ ಸ್ಥಿತಿ ಅಪರಾಧಕ್ಕೆ ಕಾರಣವಾದೀತೆಂದು ಅದನ್ನು ಶಿಕ್ಷೆಯಿಂದ ಪಾರು ಮಾಡಲು ಮಾನಸಿಕ ಸಮಸ್ಯೆಯೆಂದು ಪರಿಗಣಿಸಲಾಗದು ಎಂದು ಹೇಳುತ್ತಾರೆ, ತಜ್ಞರು.
Udupi Murder case, Accused Praveen had a luxury life, recently he had brought a MG car and lived in Mangalore. A detailed crime report by Headline Karnataka. Preliminary investigations suggest that the quadruple murder accused international airlines flight attendant Praveen Chowgule (37) was an over-possessive person and the murder was triggered by jealousy and animosity, highly placed sources in the police department have disclosed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm