ಬ್ರೇಕಿಂಗ್ ನ್ಯೂಸ್
17-11-23 09:57 pm Udupi Correspondent ಕ್ರೈಂ
ಉಡುಪಿ, ನ.17: ಆತ ಮನುಷ್ಯ ಅಲ್ಲ, ಮೃಗ. ಆತನಿಗೆ ಈ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ. ಆತನಿಗೆ ಗರಿಷ್ಠ ಶಿಕ್ಷೆಯಾಗುವಂತೆ ಸರಕಾರ ನೋಡಿಕೊಳ್ಳಬೇಕು. ಇದಕ್ಕಾಗಿ ತ್ವರಿತ ಗತಿಯ ಕೋರ್ಟ್ ನೇಮಕ ಮಾಡಬೇಕು ಎಂದು ಪತ್ನಿ ಮತ್ತು ಮೂವರು ಮಕ್ಕಳನ್ನು ಕಳಕೊಂಡ ನೂಹ್ ಮಹಮ್ಮದ್ ಹೇಳಿದ್ದಾರೆ.
ಶುಕ್ರವಾರ ಮನೆಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಲ್ಲಿಯೂ ಕುಟುಂಬಸ್ಥರು ತ್ವರಿತ ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ. ಅಲ್ಲದೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆ ಮನವಿಯನ್ನೂ ಮಾಡಿದ್ದಾರೆ. ಕೃತ್ಯದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ನೂರ್ ಮಹಮ್ಮದ್ ಮಾತನಾಡುತ್ತಲೇ ಗದ್ಗದಿತರಾದರು. ದೊಡ್ಡ ಮಗಳು ಅಫ್ನಾನ್ ಮತ್ತು ಮಗನಿಗೆ ಮದುವೆ ಮಾಡಬೇಕೆಂದು ನಿಶ್ಚಯ ಮಾಡಿದ್ದೆವು. ಮುಂದಿನ ಫೆಬ್ರವರಿ ವೇಳೆಗೆ ಮದುವೆಗೆ ತಯಾರಿ ಮಾಡಿದ್ದೆವು. ಪತ್ನಿಗೆ ಗಂಡು ಮತ್ತು ಹೆಣ್ಣು ನೋಡುವ ಜವಾಬ್ದಾರಿಯನ್ನೂ ನೀಡಿದ್ದೆ. ಸಣ್ಣವರಿಗೆ ನಾನೇ ನೋಡುತ್ತೇನೆ ಎಂದಿದ್ದೆ.
ಮದುವೆ ತಯಾರಿಗಾಗಿ ಮನೆಗೆ ಪೈಂಟ್ ಕೊಡಬೇಕೆಂದು ಮೊನ್ನೆ ಕೊಲೆಯಾಗುವ ಒಂದು ದಿನದ ಹಿಂದೆ 50 ಸಾವಿರ ಹಣವನ್ನೂ ಕಳಿಸಿದ್ದೆ. ಒಂದು ಮೊಬೈಲ್ ತೆಗೆದಿಟ್ಟು ಅದನ್ನು ಕಳಿಸಿಕೊಡುವುದಾಗಿ ಹೇಳಿದ್ದೆ. ದಿನವೂ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಪತ್ನಿಗೆ ಫೋನ್ ಮಾಡಿ, ಆಕೆ ಮತ್ತು ಮಕ್ಕಳ ಬಗ್ಗೆ ಕೇಳುತ್ತಿದ್ದೆ. ಮೊನ್ನೆಯೂ ಫೋನ್ ಮಾಡಿದ್ದೆ. ಏನೋ ರಿಸೀವ್ ಮಾಡಿಲ್ಲ ಅಂದ್ಕೊಂಡಿದ್ದೆ. ಆದರೆ ಕೆಲಸದಲ್ಲಿ ತೊಡಗಿದ್ದಾಗ ನಿರಂತರ ಫೋನ್ ಕರೆಗಳು ಬರುತ್ತಿದ್ದವು. ನಾನು ಗಮನಿಸಿರಲಿಲ್ಲ. ಬೇರೆಯವರು ಫೋನ್ ಬರ್ತಾ ಇದೆ ಎಂದು ಹೇಳಿದಾಗ, ಪರಿಚಯದವರೊಬ್ಬರು ಕರೆ ಮಾಡಿದ್ದರು. ವಿಷಯ ಹೇಳಿದಾಗ ನಂಬುವುದಕ್ಕೇ ಆಗಲಿಲ್ಲ. ಶಾಕ್ ಆಗಿ ಪ್ರಜ್ಞೆ ತಪ್ಪಿ ಬಿದ್ದೆ. ಆನಂತರ, ಜೊತೆಗಿದ್ದವರು ನೀರು ಹಾಕಿ ಉಪಚರಿಸಿ ತುರ್ತಾಗಿ ವಿಮಾನದ ಟಿಕೆಟ್ ಮಾಡಿಸಿ ಊರಿಗೆ ಕಳಿಸಿಕೊಟ್ಟರು.
ದೊಡ್ಡ ಮಗಳು ಹಿಂದೆ ಏಳೆಂಟು ತಿಂಗಳು ನನ್ನ ಜೊತೆಗೆ ಒಮಾನದಲ್ಲೇ ಇದ್ದಳು. ಆನಂತರ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಮಂಗಳೂರಿನಲ್ಲಿ ಇಬ್ಬರೂ ಒಂದೇ ಮನೆ ಮಾಡಿಕೊಂಡಿದ್ದರು. ಸಣ್ಣವಳು ತಾನು ಗಗನ ಸಖಿಯಾಗಬೇಕೆಂದು ತುಂಬ ಆಸೆ ಪಟ್ಟಿದ್ದಳು. ನಮ್ಮಲ್ಲಿ ಯಾರು ಕೂಡ ಆ ಕೆಲಸಕ್ಕೆ ಹೋಗಲ್ಲ ಎಂದು ಆಕೆಗೂ ಗೊತ್ತಿತ್ತು. ಜೀವನದ ಆಸೆಯೆಂದು ಹೇಳಿ ನನ್ನ ಪರ್ಮಿಶನ್ ತಗೊಂಡು ಕೆಲಸಕ್ಕೆ ಸೇರಿದ್ದಳು. ಒಂದು ವರ್ಷ ಎರಡು ತಿಂಗಳಾಯ್ತು ಏರ್ ಇಂಡಿಯಾಕ್ಕೆ ಸೇರ್ಪಡೆಗೊಂಡು. ಆದರೆ ಈ ರೀತಿಯಾಗುತ್ತೆ ಎಂದು ಅನ್ಕೊಂಡಿರಲಿಲ್ಲ. ನನ್ನ ಮಗಳಿಗಾದ ಸ್ಥಿತಿ ಮುಂದೆ ಯಾರಿಗೂ ಬರಬಾರದು. ಆತನನ್ನು ಈ ಭೂಮಿಯಲ್ಲಿ ಬದುಕಲು ಬಿಡಬಾರದು ಎಂದು ನೋವಿನಿಂದಲೇ ಹೇಳಿಕೊಂಡರು.
ಅಯ್ನಾಜ್ ಮೊಬೈಲ್ ಬ್ಲಾಕ್ ಮಾಡಿದ್ದಳು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮನೆಗೆ ಭೇಟಿ ಕೊಟ್ಟು ಹಿಂದೆ ತೆರಳಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ನೂರ್ ಮಹಮ್ಮದ್ ಅವರ ಇನ್ನೊಬ್ಬ ಪುತ್ರ ಅಸಾದಿ, ಅಯ್ನಾಜ್ ತನಗೆ ಕೀಟಲೆ ಕೊಡುತ್ತಾನೆಂದು ಆರೋಪಿ ಪ್ರವೀಣ್ ಚೌಗುಲೆಯ ಮೊಬೈಲ್ ಬ್ಲಾಕ್ ಮಾಡಿದ್ದಳು. ಆದರೆ, ಈ ವಿಚಾರವನ್ನು ಮನೆಯಲ್ಲಿ ತಿಳಿಸಿರಲಿಲ್ಲ. ಆಕೆ ನಮ್ಮಲ್ಲಿ ಹೇಳುತ್ತಿದ್ದರೆ, ಏನಾದ್ರೂ ಮಾಡುತ್ತಿದ್ದೆವು. ತಂದೆಗೆ ಹೇಳಿದರೆ, ಕೆಲಸಕ್ಕೆ ಹೋಗುವುದು ಬೇಡ ಎನ್ನುತ್ತಾರೆಂದು ಧೈರ್ಯ ಗೆಟ್ಟು ತಿಳಿಸಿರಲಿಲ್ಲ. ಇದರಿಂದಲೇ ಅಚಾತುರ್ಯ ಆಯಿತು ಎಂದು ಹೇಳಿದರು.
ನ.12ರಂದು ಬೆಳಗ್ಗೆ ನೇಜಾರಿನ ಹಸೀನಾ, ಅವರ ಪುತ್ರಿಯರಾದ ಅಫ್ನಾನ್, ಅಯ್ನಾಜ್ ಮತ್ತು ಪುತ್ರ ಆಸಿಂ ಕೊಲೆಯಾಗಿದ್ದರು. ಹಸೀನಾ ಅವರ ಪತಿ ನೂರ್ ಮಹಮ್ಮದ್ ಒಮಾನಲ್ಲಿ ಕೆಲಸದಲ್ಲಿದ್ದರು. ಮಕ್ಕಳನ್ನು ಓದಿಸಿ ಒಳ್ಳೆಯ ಉದ್ಯೋಗ ತೆಗೆಸಿ, ಮದುವೆಗೆ ತಯಾರಿ ನಡೆಸಿದ್ದರು. ಅಷ್ಟರಲ್ಲೇ ತಾಯಿ, ಮಕ್ಕಳು ಪರಮ ಪಾಪಿಯ ಹುಚ್ಚಾಟಕ್ಕೆ ಬಲಿಯಾಗಿದ್ದಾರೆ.
Udupi Murder Case: “That animal deserves highest degree of punishment,” says father Noor Mohammed Noor Mohammed, the grieving husband and father whose wife and three children were brutally murdered in Nejaru village, Udupi, has called for the highest level of punishment for the accused. In the wake of this inhumane act, Mohammed expressed his anguish and urged that the perpetrator be brought to justice at the earliest.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm