Mangalore cyber fraud, STORAK App: ಷೇರಿನಲ್ಲಿ ಹೂಡಿಕೆ, ಹಣ ಡಬಲ್ ಮಾಡಿಸುತ್ತೇವೆಂದು ಮೋಸ ; ಪ್ರಾಫಿಟ್ ಪ್ಲಾನ್ ಹೆಸರಲ್ಲಿ ಎಂಆರ್ ಪಿಎಲ್ ಉದ್ಯೋಗಿಗೆ 21 ಲಕ್ಷ ದೋಖಾ  

23-11-23 08:48 pm       Mangalore Correspondent   ಕ್ರೈಂ

ಷೇರು ವಹಿವಾಟಿನಲ್ಲಿ ಹಣ ಹೂಡಿಕೆ ಮಾಡಿ, ಡಬಲ್ ಮಾಡುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ ನಿರಂತರ ಹಣ ಹಾಕಿಸಿಕೊಂಡು ಸುಮಾರು 21 ಲಕ್ಷ ರೂಪಾಯಿ ಮೋಸ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ನ.23: ಷೇರು ವಹಿವಾಟಿನಲ್ಲಿ ಹಣ ಹೂಡಿಕೆ ಮಾಡಿ, ಡಬಲ್ ಮಾಡುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಂದ ನಿರಂತರ ಹಣ ಹಾಕಿಸಿಕೊಂಡು ಸುಮಾರು 21 ಲಕ್ಷ ರೂಪಾಯಿ ಮೋಸ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ ಎಂಆರ್ ಪಿಎಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮೂಲತಃ ತಮಿಳುನಾಡು ಮೂಲದ ಕಣ್ಣನ್ (45) ಹಣ ಕಳಕೊಂಡವರು. ಅಕ್ಟೋಬರ್ 3ರಂದು ಇವರ ಫೇಸ್ಬುಕ್ ಖಾತೆಗೆ ಹಣ ಡಬಲ್ ಮಾಡುವ ಬಗ್ಗೆ ಲಿಂಕ್ ಬಂದಿತ್ತು. ಲಿಂಕ್ ಪ್ರೆಸ್ ಮಾಡಿದಾಗ 4 month 20* profit plan 116 group ಎಂಬ ಹೆಸರಲ್ಲಿ ವಾಟ್ಸಾಪ್ ಗ್ರೂಪ್ ಓಪನ್ ಆಗಿತ್ತು. ಗ್ರೂಪಿನಲ್ಲಿ ಸದಸ್ಯರಾಗಿದ್ದ ಆಲಿಯಾನೋರಾ ಎಂಬವರು STORAK ಹೆಸರಿನ ಮೊಬೈಲ್ ಎಪ್ಲಿಕೇಶನ್ ಟ್ರೆಂಡಿಂಗ್ ಖಾತೆಯನ್ನು ತೆರಯಲು ಕಣ್ಣನ್ ಅವರಿಗೆ ಸಹಾಯ ಮಾಡಿದ್ದರು.

ಅವರ ಮಾತನ್ನು ನಂಬಿದ ಕಣ್ಣನ್, ಅ.15ರಂದು 50 ಸಾವಿರ ರೂ.ವನ್ನು ತನ್ನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿದ್ದಾರೆ. ಆನಂತರ ಡ್ಯಾಡಿ ಎಂಟರ್ ಪ್ರೈಸಸ್ ಎಂಬ ಹೆಸರಿನ ಖಾತೆಗೆ ಮೂರು ಬಾರಿ ಒಟ್ಟು 21.50 ಲಕ್ಷ ರೂಪಾಯಿ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಹಾಕಿದ್ದರೂ, ಯಾವುದೇ ಮರು ಪಾವತಿ ಆಗದೇ ಮೋಸ ಎಸಗಿದ್ದಾರೆ. ಮೋಸದ ವಿಚಾರ ತಿಳಿಯುತ್ತಲೇ ತಡವಾಗಿ ಬಂದು ಕಣ್ಣನ್ ಅವರು ಉರ್ವಾ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Mangalore MRPL employee looses 21 lakhs over money double fraud online. A case has been registered at cyber police station. Storak mobile application fraud on whatsapp group exposed.