ಬ್ರೇಕಿಂಗ್ ನ್ಯೂಸ್
06-08-20 01:44 pm Headline Karnataka News Network ಕ್ರೈಂ
ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ವಿವಿಧ ನಟರಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಉಡುಪಿ ಮೂಲದ ದಿಶಾ ಸಾಲಿಯಾನ್ ಪ್ರಕರಣ ಕೂಡ ತಿರುವು ಪಡೆದುಕೊಳ್ಳುವ ಸೂಚನೆ ನೀಡಿದೆ. ಜೂನ್ 9ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ವರದಿಯಾಗಿತ್ತು. 14ನೇ ಮಹಡಿಯಲ್ಲಿ ವಾಸವಾಗಿದ್ದ ದಿಶಾ, ಅಲ್ಲಿಂದ ಬಿದ್ದು ಜೀವ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಭಾವಿ ಪತಿ ರೋಹನ್ ರಾಯ್ ಮನೆಯಲ್ಲಿದ್ದರು ಎನ್ನಲಾಗಿದೆ.
ತಡವಾಗಿ ಮರಣೋತ್ತರ ಪರೀಕ್ಷೆ
25 ವರ್ಷದ ದಿಶಾ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅವರು ಜೂನ್ 9ರಂದು ಮೃತಪಟ್ಟಿದ್ದರೂ ಎರಡು ದಿನಗಳ ನಂತರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಎರಡು ದಿನ ವಿಳಂಬ ಮಾಡಿ ಪರೀಕ್ಷೆ ನಡೆಸಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಂಬೈನ ಬೊರಿವಲಿ ಪೋಸ್ಟ್ ಮಾರ್ಟಂ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಸಾವಿಗೆ ಪ್ರಾಥಮಿಕ ಕಾರಣ
ಈ ಪರೀಕ್ಷೆಯ ಕೆಲವು ಅಂಶಗಳು ಬಹಿರಂಗವಾಗಿವೆ. ದಿಶಾ ತಲೆಗೆ ಗಂಭೀರವಾದ ಗಾಯಗಳಾಗಿದ್ದವು. ಜತೆಗೆ ದೇಹದಲ್ಲಿ ಅನೇಕ ಅಸ್ವಾಭಾವಿಕ ಗಾಯಗಳಿದ್ದವು. ಕಟ್ಟಡದ 14ನೇ ಮಹಡಿಯಿಂದ ಬಿದ್ದ ಪರಿಣಾಮವಾಗಿ ಉಂಟಾದ ಗಾಯಗಳು ಆಕೆಯ ಸಾವಿಗೆ ಪ್ರಾಥಮಿಕ ಕಾರಣಗಳಾಗಿವೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ.
ದಿಶಾ ಮೇಲೆ ದೌರ್ಜನ್ಯ?
ದಿಶಾ ಸಾಯುವ ಮುನ್ನ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬ ಆರೋಪ ಕೇಳಿಬಂದಿದೆ. ದಿಶಾ ಮರಣೋತ್ತರ ಪರೀಕ್ಷೆಯಲ್ಲಿ ಅವರ ಖಾಸಗಿ ಅಂಗಗಳಲ್ಲಿಯೂ ಗಾಯಗಳಾಗಿರುವುದು ಗೊತ್ತಾಗಿದೆ ಎಂದು ಬಿಜೆಪಿ ಸಂಸದ ನಾರಾಯಣ ರಾಣೆ ಆರೋಪಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಮಹಿಳೆಯರ ಅಸ್ವಾಭಾವಿಕ ಸಾವಿನ ಪ್ರಕರಣದಲ್ಲಿ ಅವರ ಗುಪ್ತಾಂಗದ ದ್ರವ್ಯಗಳನ್ನು ಶೇಖರಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದಿಶಾ ಪ್ರಕರಣದಲ್ಲಿಯೂ ಇದನ್ನು ಸಂಗ್ರಹಿಸಿದ್ದು, ರಾಸಾಯನಿಕ ವಿಶ್ಲೇಷಣೆಗೆ ರವಾನಿಸಲಾಗಿದೆ.
ಸುಶಾಂತ್ ಸಾವಿಗೆ ನಂಟು?
ದಿಶಾ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಸಂಸದ ರಾಣೆ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಪ್ರಕರಣಕ್ಕೂ ಸುಶಾಂತ್ ಸಾವಿಗೂ ಸಂಬಂಧವಿದೆ ಎಂದೂ ಹೇಳಲಾಗಿದೆ.
ದಿಶಾ ಸಾವಿನ ರಹಸ್ಯ ಸುಶಾಂತ್‌ಗೆ ತಿಳಿದಿತ್ತೇ?
ದಿಶಾ ಸಾವನ್ನಪ್ಪಿದ ಐದು ದಿನದಲ್ಲಿ ಸುಶಾಂತ್ ಸಾವಿಗೀಡಾಗಿದ್ದಾರೆ. ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾವಿನ ಹಿಂದಿನ ರಹಸ್ಯ ಸುಶಾಂತ್‌ಗೆ ಗೊತ್ತಾಗಿತ್ತು. ಅವರು ಅದರಿಂದ ತುಂಬಾ ಬೇಸರಪಟ್ಟುಕೊಂಡಿದ್ದರು. ಇದರ ಕುರಿತು ಅವರು ಬಹಿರಂಗಪಡಿಸಲು ಮುಂದಾಗಿದ್ದರು. ಈ ಕಾರಣದಿಂದಲೇ ಸುಶಾಂತ್‌ರನ್ನು ಹತ್ಯೆ ಮಾಡಿ ಅದನ್ನೂ ಅತ್ಮಹತ್ಯೆ ಎಂದು ಬಿಂಬಿಸಲಾಗಿದೆ. ಈ ಎರಡರಲ್ಲಿಯೂ ಸುಶಾಂತ್ ಗೆಳೆಯ ಎಂದು ಹೇಳಿಕೊಂಡಿರುವ ಸಂದೀಪ್ ಸಿಂಗ್ ಕೈವಾಡವಿದೆ ಎಂಬ ವಾದ ಮುಂದಿಡಲಾಗಿದೆ.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm