Mangalore, Ullal Police, Anti drug operation; ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಡ್ರಗ್ ತಂಡದ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಡ್ರಗ್ಸನ್ನು ಸಾಗಿಸುತ್ತಿದ್ದವರ ಬಂಧನ, ಮಾರಕಾಯುಧಗಳು ವಶಕ್ಕೆ 

05-12-23 02:16 pm       Mangalore Correspondent   ಕ್ರೈಂ

ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆಂಟಿ ಡ್ರಗ್ ತಂಡವು ಭರ್ಜರಿ ಕಾರ್ಯಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತಗಳನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದೆ. 

ಉಳ್ಳಾಲ, ಡಿ.5 : ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆಂಟಿ ಡ್ರಗ್ ತಂಡವು ಭರ್ಜರಿ ಕಾರ್ಯಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತಗಳನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದೆ. 

ಶಿಶಿರ್ ದೇವಾಡಿಗ ಮತ್ತು ಸುಶಾನ್ ಎಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಬ್ಬರು ಬಿಳಿ ಸ್ವಿಫ್ಟ್ ಕಾರಿನಲ್ಲಿ ನಿಷೇಧಿತ 132 ಗ್ರಾಮ್ ಎಮ್ ಡಿಎಮ್ ಮತ್ತು 250 ಗ್ರಾಮ್ ಎಲ್ ಎಸ್ಡಿ ಸ್ಟ್ಯಾಂಪ್ ಮಾದಕ ವಸ್ತುಗಳನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ನಿರ್ದೇಶನದಂತೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂತೋಷ್ ನಗರ ಎಂಬಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಲ್ಲಿದ್ದ 3,70,050 ರೂಪಾಯಿ ನಗದು, ಸ್ವಿಫ್ಟ್ ಕಾರು, ಮಾದಕ ವಸ್ತುಗಳು ಮತ್ತು ಮಾರಕಾಯುಧಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪಿಎಸ್ ಐಗಳಾದ ಪುನೀತ್ ಗಾಂವ್ ಕರ್, ಸಂತೋಷ್ ಕುಮಾರ್ ಡಿ, ಸಿಬ್ಬಂದಿಗಳಾದ ಸಾಜು ನಾಯರ್,ಮಹೇಶ್, ಶಿವಕುಮಾರ್ ಇದ್ದರು.

Mangalore Anti drug operation, two held for drug supply by Ullal Police.