ಬ್ರೇಕಿಂಗ್ ನ್ಯೂಸ್
05-12-23 10:45 pm Mangalore Correspondent ಕ್ರೈಂ
ಮಂಗಳೂರು, ಡಿ.5: ಯುಕೋ ಬ್ಯಾಂಕಿನ ಖಾತೆಗಳಿಗೆ ವಿವಿಧ ಬೇನಾಮಿ ಖಾತೆಗಳಿಂದ 820 ಕೋಟಿ ಹಣ ವರ್ಗಾವಣೆ ಮಾಡಿರುವ ಪ್ರಕರಣ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಮಂಗಳೂರು ಸೇರಿದಂತೆ ಪಶ್ಚಿಮ ಬಂಗಾಳದ 13 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಏಳು ಖಾಸಗಿ ರಂಗದ ಬ್ಯಾಂಕುಗಳ 14 ಸಾವಿರ ಖಾತೆಗಳಿಂದ ಯುಕೋ ಬ್ಯಾಂಕಿನ 41 ಸಾವಿರ ಖಾತೆಗಳಿಗೆ 820 ಕೋಟಿ ರೂ. ಜಮೆ ಆಗಿರುವ ಬಗ್ಗೆ ಯುಕೋ ಬ್ಯಾಂಕ್ ಕಡೆಯಿಂದಲೇ ದೂರು ದಾಖಲಾಗಿದೆ. ಇಬ್ಬರು ಐಟಿ ಇಂಜಿನಿಯರ್ ಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ದಾಖಲಾದ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕರ್ನಾಟಕದ ಮಂಗಳೂರು, ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ 13 ಸ್ಥಳಗಳಿಗೆ ದಾಳಿ ಮಾಡಿದ್ದು, ಹಲವಾರು ಶಂಕಿತ ವ್ಯಕ್ತಿಗಳನ್ನು ಗುರಿಯಾಗಿಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ನವೆಂಬರ್ ತಿಂಗಳಲ್ಲಿ ಐಎಂಪಿಎಸ್ (Immediate Payment Service-IMPS) ಮೂಲಕ ಯುಕೋ ಬ್ಯಾಂಕ್ ನಲ್ಲಿ ಸೃಜಿಸಲ್ಪಟ್ಟ ಖಾತೆಗಳಿಗೆ ಹಣ ಜಮೆಯಾಗಿತ್ತು. ಯುಕೋ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಇಂಜಿನಿಯರ್ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್ ದೂರು ನೀಡಿತ್ತು. ಶೋಧ ಕಾರ್ಯದಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಸೇರಿದಂತೆ ಇಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ. ಭಾನುವಾರ, ಸೋಮವಾರ ದಾಳಿ ಕಾರ್ಯಾಚರಣೆ ನಡೆದಿದ್ದು ಎಲ್ಲೆಲ್ಲಿ ದಾಳಿಯಾಗಿದೆ ಎಂಬ ಮಾಹಿತಿಯನ್ನು ಗುಪ್ತವಾಗಿರಿಸಲಾಗಿದೆ.
ನವೆಂಬರ್ 10 ಮತ್ತು 13ರ ಮಧ್ಯೆ ಹಣದ ವರ್ಗಾವಣೆ ನಡೆದಿದ್ದು ಮಂಗಳೂರು ಸೇರಿದಂತೆ ದೇಶದ ಹಲವು ಕಡೆಯ ವ್ಯಕ್ತಿಗಳ ಹೆಸರಲ್ಲಿ ಹಣದ ವಹಿವಾಟು ನಡೆದಿದೆ ಎನ್ನಲಾಗಿದೆ. ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿ ಯುಕೋ ಬ್ಯಾಂಕ್ ಕಚೇರಿಯಿದ್ದು ಅಲ್ಲಿಗೆ ದಾಳಿ ನಡೆದಿಲ್ಲ. ಬದಲಿಗೆ, ಹಣದ ವರ್ಗಾವಣೆ ಆಗಿರುವ ಖಾತೆಗಳಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. 820 ಕೋಟಿ ಹಣವು ಮೂರು ದಿನದ ಅಂತರದಲ್ಲಿ 8,53049 ಬಾರಿ ಮರು ವರ್ಗಾವಣೆ ಆಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು ದೊಡ್ಡ ಮಟ್ಟದ ಮಾಫಿಯಾ ಶಾಮೀಲಾಗಿರುವ ಶಂಕೆಯಿದೆ.
The Central Bureau of Investigation has conducted searches at around 13 locations, including Kolkata (West Bengal) and Mangalore (Karnataka), at the premises of the accused and others, including private persons and bank officials. During the searches, electronic evidence, including mobile phones, laptops, computer systems, email archives, and debit/credit cards, was recovered.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm