ಬ್ರೇಕಿಂಗ್ ನ್ಯೂಸ್
17-11-20 12:54 pm Bangalore Correspondant ಕ್ರೈಂ
ಬೆಂಗಳೂರು, ನ. 16: ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಸುಲಿಗೆ ಮಾಡುತ್ತಿದ್ದ ಕುಖ್ಯಾತ ಬಂಧಿಸಲಾಗಿದೆ. ಈ ಬಗ್ಗೆ ಕೊಡಿಗೇಹಳ್ಳಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ ಬಾಬಾ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವು ಆರೋಪಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.
ಬಂಧಿತರನ್ನು ಶಿವಮೊಗ್ಗ ಮೂಲದ ಆನಂದಪುರದ ಶೇಕ್ ಶಾಹಿದ್ ಅಹಮ್ಮದ್ ಅಲಿಯಾಸ್ ಶಾಹೀದ್ ಬಿನ್ ಶೇಕ್ ನೂರುಲ್ಲಾ(23 ವರ್ಷ) ಹಾಗೂ ಅತೀಖ್(20 ವರ್ಷ) ಎಂದು ಗುರುತಿಸಲಾಗಿದೆ. ಯಲಹಂಕ ಉಪ ವಿಭಾಗದ ಎಸಿಪಿ ಆರ್ ಜಯರಾಂ, ಕೊಡಿಗೇಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ ಬಾಬು, ಪಿಎಸ್‍ಐ ಶ್ರೀನಿವಾಸ್ ಶಿರೂರ್, ಪಿಎಸ್‍ಐ ದೇವಕಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ಈ ಶಾಹಿದ್ ಗ್ಯಾಂಗಿನ ಇಬ್ಬರನ್ನು ಬಂಧಿಸಿದೆ.
ಶೇಕ್ ಶಾಹಿದ್ ಅಹಮ್ಮದ್ ಅಲಿಯಾಸ್ ಶಾಹೀದ್ ಬಿನ್ ಶೇಕ್ ಮೇಲೆ ಈಗಾಗಲೇ 2018ನೇ ಸಾಲಿನಲ್ಲಿ ಕೊಡಿಗೇಹಳ್ಳಿಯಲ್ಲಿ 4 ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣದಲ್ಲಿ ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಮೇಲೆ ಮತ್ತೊಂದು ತಂಡ ಕಟ್ಟಿಕೊಂಡು ಸುಲಿಗೆ ಮಾಡುತ್ತಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಹಿದ್ ಗ್ಯಾಂಗ್ ದಸ್ತಗಿರಿ ಪಡಿಸಿ 8,40,000 ರೂ ಬೆಲೆ ಬಾಳುವ 30 ಗ್ರಾಂ ತೂಕದ ಚಿನ್ನದ ಒಡವೆಗಳು, ಒಂದು ಐ ಪೋನ್ ಮತ್ತು 2 ಕಾರ್‍ಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 3 ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ 4 ಸುಲಿಗೆ ಪ್ರಕರಣಗಳು ಪತ್ತೆಯಾಗಿರುತ್ತವೆ. ಶಾಸ್ತ್ರಿ ಗ್ಯಾಂಗಿನ ಆರೋಪಿತರಿಂದ ಸುಮಾರು 1,50,000/- ರೂ ಬೆಲೆ ಬಾಳುವ 7 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಒಂದು ಮೊಬೈಲ್ ಹಾಗೂ ಹೋಂಡ ಆಕ್ಟಿವಾ ವಶಪಡಿಸಿಕೊಂಡಿದ್ದು ಆರೋಪಿತರ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣಗಳ ಮತ್ತು ಸಂಜಯನಗರದ 1 ಕೊಲೆ ಯತ್ನ ಪ್ರಕರಣ ಪತ್ತೆಯಾಗಿರುತ್ತದೆ.
ಕಳ್ಳತನ ಶೈಲಿ:
ಆರೋಪಿತರು ರಾತ್ರಿ ಸಮಯದಲ್ಲಿ ಆಕ್ಟಿವಾ ಹೋಂಡಾ ಅಥವಾ ಡಿಯೋ ಬೈಕ್‍ಗಳಲ್ಲಿ, ಬೈಕ್‍ನಲ್ಲಿ ಹೋಗುವವ ಸಾರ್ವಜನಿಕರು ಹಿಂಬಾಲಿಸಿ, ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಅವರ ಬಳಿ ಇರುವಂತಹ ಬೆಲೆಬಾಳುವ ಚಿನ್ನದ ಒಡವೆಗಳು, ಹಣ ಮತ್ತು ಮೊಬೈಲ್‍ಗಳನ್ನು ಕಿತ್ತುಕೊಂಡು ಹೋಗುವ ಚಾಳಿಯುಳ್ಳವರಾಗಿರುತ್ತಾರೆ. ವಿನ್ಸೆಂಟ್ ಬಾಬು ಮತ್ತು ಆಕಾಶ್ ಎನ್ ನಾಯ್ಡು ವಿರುದ್ದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ದಸ್ತಗಿರಿ ಮಾಡಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ, ತನ್ನ ಸಹಚರರೊಂದಿಗೆ ಹೆದ್ದಾರಿಯಲ್ಲಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
The Bengaluru police arrested the notorious Shastri robbery gang targeting people on the highways and the city outskirts. Police recovered a car, cash and other material.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm