NIA Raid, Karnataka, ISIS: ಐಸಿಸ್‌ ಉಗ್ರರೊಂದಿಗೆ ನಂಟು; ಕರ್ನಾಟಕ ಸೇರಿ 41 ಕಡೆ ಎನ್‌ಐಎ ದಾಳಿ, 13 ಶಂಕಿತ ಉಗ್ರರ ಬಂಧನ

09-12-23 03:50 pm       Bengaluru correspondent   ಕ್ರೈಂ

ಐಸಿಸ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಎನ್‌ಐಎ ಭಯೋತ್ಪಾದನಾ ವಿರೋಧಿ ದಾಳಿ ನಡೆಸಿದೆ.

ನವದೆಹಲಿ, ಡಿ 09: ಐಸಿಸ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಎನ್‌ಐಎ ಭಯೋತ್ಪಾದನಾ ವಿರೋಧಿ ದಾಳಿ ನಡೆಸಿದೆ.

ಶನಿವಾರ ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನ ಪ್ರೇಜರ್ ಟೌನ್‌ನ ಮೋರ್ ರಸ್ತೆಯಲ್ಲಿ ದಾಳಿ ನಡೆಸಿ ಎನ್‌ಐಎ ಪರಿಶೀಲನೆ ಕೈಗೊಂಡಿದೆ. ಐಸಿಸ್‌ ಉಗ್ರರ ಜೊತೆ ಸಂಪರ್ಕದಲ್ಲಿರುವ ಹಾಗೂ ವಾಸವಾಗಿರುವ ಶಂಕೆ ಹಿನ್ನೆಲೆ ಈ ದಾಳಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಥಾಣೆ, ಪುಣೆ, ಮೀರಾ ಭಯಂದರ್ ಸೇರಿದಂತೆ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಕಡೆ ಶೋಧ ನಡೆದಿದೆ. ಪುಣೆಯಲ್ಲಿ ಎರಡು ಮತ್ತು ಮೀರಾ ಭಯಂದರ್‌ನಲ್ಲಿ ಒಂದು ಕಡೆ ದಾಳಿ ನಡೆದಿದೆ.

ದಾಳಿ ವೇಳೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

A total of 13 people were arrested in the ISIS terror conspiracy case from Maharashtra's Pune on Saturday, December 9, 2023, following searches by the National Investigation Agency (NIA) at 44 locations in Karnataka and Maharashtra. The anti-terror agency sleuths raided these locations in close coordination with the police forces of Maharashtra and Karnataka, sources said.