Live Video: ಹುಬ್ಬಳ್ಳಿಯಲ್ಲಿ ಗುಂಡಿನ ದಾಳಿ: ರೌಡಿ ಫ್ರೂಟ್‌ ಇರ್ಫಾನ್‌ ಹತ್ಯೆ

06-08-20 02:58 pm       Headline Karnataka News Network   ಕ್ರೈಂ

ನಗರದ ಕಾರವಾರ ರಸ್ತೆಯಲ್ಲಿರುವ ಗುಡಿಹಾಳ ಕ್ರಾಸ್‌ನಲ್ಲಿರುವ ದುರ್ಗಾ ಬಾರ್‌ ಸಮೀಪ ನಿಂತಿದ್ದ ಧಾರವಾಡದ ರೌಡಿಶೀಟರ್ ಫ್ರೂಟ್‌ ಇರ್ಫಾನ್‌ ಮೇಲೆ ಗುರುವಾರ ಸಂಜೆ ಗುಂಡಿನ ದಾಳಿ ನಡೆದಿದೆ.

ಹುಬ್ಬಳ್ಳಿ , ಆ.06: ನಗರದ ಕಾರವಾರ ರಸ್ತೆಯಲ್ಲಿರುವ ಗುಡಿಹಾಳ ಕ್ರಾಸ್‌ನಲ್ಲಿರುವ ದುರ್ಗಾ ಬಾರ್‌ ಸಮೀಪ ನಿಂತಿದ್ದ ಧಾರವಾಡದ ರೌಡಿಶೀಟರ್ ಫ್ರೂಟ್‌ ಇರ್ಫಾನ್‌ ಮೇಲೆ ಗುರುವಾರ ಸಂಜೆ ಗುಂಡಿನ ದಾಳಿ ನಡೆದಿದೆ.

ಬುಲೆಟ್ ವಾಹನದಲ್ಲಿ ಬಂದ ಮೂವರು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಘಟನೆ ಹಳೇ ಹುಬ್ಬಳ್ಳಿ ಆಲ್‌ ತಾಜ್‌ ಹೋಟೆಲ್‌ ಮುಂದೆ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ. ಈ ಗುಂಡಿನ ದಾಳಿಯಿಂದ ಬೆಚ್ಚಿಬಿದ್ದ ಜನ ದಿಕ್ಕಾಪಾಲಾಗಿ ಓಡಿದರು. ಘಟನೆ ಜನರಲ್ಲಿ ಆತಂಕ ಉಂಟು ಮಾಡಿದೆ.

ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಇರ್ಫಾನ್‌ನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು‌. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

Live Video: