ಹಾಡಹಗಲೇ ಮನೆಗೆ ನುಗ್ಗಿ 12ರ ಬಾಲೆಯ ರೇಪ್

06-08-20 06:02 pm       Headline Karnataka News Network   ಕ್ರೈಂ

ಮನೆಗೆ ನುಗ್ಗಿ 12 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕತ್ತರಿಯಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ವಿಮ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಸಂತ್ರಸ್ತೆ ಹೋರಾಟ ನಡೆಸುತ್ತಿದ್ದಾಳೆ.

ನವದೆಹಲಿ: ಮನೆಗೆ ನುಗ್ಗಿ 12 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕತ್ತರಿಯಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ವಿಮ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಸಂತ್ರಸ್ತೆ ಹೋರಾಟ ನಡೆಸುತ್ತಿದ್ದಾಳೆ.

ನವದೆಹಲಿ: ಪೊಲೀಸರು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕಿ ತಂದೆ- ತಾಯಿ ಮತ್ತು ಅಕ್ಕನ ಜೊತೆ ವಾಸವಾಗಿದ್ದಳು. ಕುಟುಂಬದ ಎಲ್ಲ ಸದಸ್ಯರು ಒಂದೇ ಕೋಣೆಯಲ್ಲಿ ವಾಸವಾಗಿ, ಸಮೀಪದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಮೂವರು ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಬಾಲಕಿಯ ವಾಸವಾಗಿದ್ದ ಕಟ್ಟಡದಲ್ಲಿ ಹಲವು ಕೋಣೆಗಳಿದ್ದು, ಅಲ್ಲಿಯ ಜನ ವಾಸವಾಗಿದ್ದಾರೆ. 

ಮನೆಯಲ್ಲಿ ಯಾರು ಇಲ್ಲದ ವಿಷಯ ತಿಳಿದ ಪರಿಚಯಸ್ಥರೇ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕಟ್ಟಡದಲ್ಲಿ ವಾಸವಾಗಿರುವ ಎಲ್ಲರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಕಟ್ಟಡದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನ ವಶಪಡಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

ಪ್ರಕರಣವನ್ನು ಗಂಭೀರವಾಗಿರುವ ಪರಿಗಣಿಸಿರುವ ದೆಹಲಿ ಮಹಿಳಾ ಆಯೋಗ ಎಫ್‍ಐಆರ್ ಪ್ರತಿಯನ್ನು ಆಗಸ್ಟ್ 8ರೊಳಗೆ ಸಲ್ಲಿಸುವಂತೆ ಪಶ್ಚಿಮ ವಿಹಾರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗೆ ನೋಟಿಸ್ ನೀಡಿದೆ. ಈ ಕುರಿತಿ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಮಂಗಳವಾರ ಸಂಜೆ ಸುಮಾರು 5.30ಕ್ಕೆ ನಮಗೆ ವಿಷಯ ತಿಳಿಯಿತು. ಸಂತ್ತಸ್ರೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಹೊರ ಬರೋದನ್ನ ಗಮನಿಸಿದ ನೆರೆಹೊರೆಯವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.