ಬ್ರೇಕಿಂಗ್ ನ್ಯೂಸ್
22-11-20 12:15 pm Mangalore Correspondent ಕ್ರೈಂ
ಮಂಗಳೂರು, ನವೆಂಬರ್ 22: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಭರ್ಜರಿ ಗಿಫ್ಟ್ ಆಸೆಗೆ ಒಳಗಾದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ವ್ಯಕ್ತಿಗೆ ರಿಯನಾರ್ಡೊ ನೀಲ್ ಹೆಸರಿನ ವ್ಯಕ್ತಿಯೊಬ್ಬ ಇತ್ತೀಚೆಗೆ ಫೇಸ್ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯವಾಗಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಂಟರ್‌ನೆಟ್ ಮುಖಾಂತರ ಸಂಪರ್ಕದಲ್ಲಿದ್ದು ಪರಿಚಯದಿಂದ ಮಾತಾಡಿಕೊಂಡಿದ್ದ. ಆದರೆ ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ನಾನು ನಿಮಗೆ ಭರ್ಜರಿ ಗಿಫ್ಟ್ ಕಳುಹಿಸುವುದಾಗಿ ರಿಯನಾರ್ಡೊ ನೀಲ್ ಹೆಸರಿನ ಗೆಳೆಯ ತಿಳಿಸಿದ್ದ. ಆರಂಭದಲ್ಲಿ ನಿರಾಕರಿಸಿದ್ದ ವ್ಯಕ್ತಿ, ಕೊನೆಗೆ ಆತನ ಒತ್ತಾಯಕ್ಕೆ ಮಣಿದು 'ಓಕೆ' ಎಂದಿದ್ದರು.
ಅದಾದ ಕೆಲವೇ ದಿನದಲ್ಲಿ ದೆಹಲಿಯಿಂದ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ಕೊರಿಯರ್ ಆಫೀಸ್‌ನಿಂದ ಕರೆ ಮಾಡಿದ್ದು , ಪಾರ್ಸೆಲ್ ಮೊತ್ತ 32,800 ರೂ. ಪಾವತಿ ಮಾಡುವಂತೆ ತಿಳಿಸಿದ್ದು ಅದನ್ನು ಪೇ ಮಾಡಿದ್ದಾರೆ. ಅದಾದ ಕೆಲವೇ ಕ್ಷಣದಲ್ಲಿ ದೆಹಲಿ ಕಸ್ಟಮ್ಸ್ ಇಲಾಖೆಯಿಂದ ಅಂತ ಹೆಸರೇಳಿಕೊಂಡು ಮತ್ತೊಬ್ಬ ಮಹಿಳೆ ಕರೆ ಮಾಡಿದ್ದು ಜಿಎಸ್ ಟಿ, ಕಸ್ಟಮ್ಸ್ ಫೀಸ್, ಇತರ ವೆಚ್ಚದ ಬಗ್ಗೆ ಮಾತನಾಡಿದ್ದಾಳೆ. ಬೇರೆ ಬೇರೆ ಖಾತೆಗಳ ವಿವರ ನೀಡಿದ್ದು ಅದಕ್ಕೆ ಹಣ ಪಾವತಿ ಮಾಡುವಂತೆ ಕೇಳಿಕೊಂಡಿದ್ದಾಳೆ. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದ ವ್ಯಕ್ತಿ ಭಾರೀ ದೊಡ್ಡ ಗಿಫ್ಟ್ ಬರುವ ನಿರೀಕ್ಷೆಯಲ್ಲಿ ವಿವಿಧ ಖಾತೆಗಳಿಗೆ 14,91,840 ರೂ. ಜಮೆ ಮಾಡಿದ್ದಾರೆ.
ಆದರೆ, ಇದಾದ ನಂತರ ಅವರ ಸಂಪರ್ಕವೇ ಕಡಿತಗೊಂಡಿದ್ದು, ವ್ಯಕ್ತಿಗೆ ಮೋಸ ಹೋಗಿರುವ ಸಂಶಯ ಬಂದಿದೆ. ಲೆಕ್ಕ ಹಾಕಿದಾಗ ಲಕ್ಷಾಂತರ ರೂಪಾಯಿ ಕಳಕೊಂಡಿದ್ದು ಅರಿವಿಗೆ ಬಂದಿದೆ. ಇದೊಂದು ವಂಚನೆಯ ಜಾಲ ಅನ್ನೋದು ಗೊತ್ತಾಗಿ, ಇದೀಗ ಮೋಸ ಹೋದ ವ್ಯಕ್ತಿ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
Man lost Rs 14,91,840 lakh to a Facebook friend who lured him with gifts worth lakhs of rupees. A case has been registered at the cyber crime police station in Mangalore.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm