Mangalore Catholic Priest Nelson Olivera, Removed: ವೃದ್ಧ ದಂಪತಿಗೆ ಹಲ್ಲೆ ; ಕ್ರೈಸ್ಟ್ ಕಿಂಗ್ ಚರ್ಚ್ ಧರ್ಮಗುರು ಹುದ್ದೆಯಿಂದ ಪಾದ್ರಿ ವಜಾ, ಮಂಗಳೂರು ಡಯಾಸಿಸ್ ಪ್ರಕಟಣೆ 

02-03-24 06:29 pm       Mangalore Correspondent   ಕ್ರೈಂ

ವೃದ್ಧ ದಂಪತಿಗೆ ಅಮಾನುಷ ರೀತಿಯಲ್ಲಿ ಹಲ್ಲೆಗೈದ ವಿಟ್ಲ ಬಳಿಯ ಪೆರಿಯಾಲ್ತಡ್ಕ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ಫಾ.ನೆಲ್ಸನ್ ಒಲಿವೆರಾ ಅವರನ್ನು ಮಂಗಳೂರು ಕ್ಯಾಥೊಲಿಕ್ ಡಯಾಸಿಸ್ ಪಾದ್ರಿ ಹುದ್ದೆಯಿಂದ ತೆರವುಗೊಳಿಸಿದೆ.

ಮಂಗಳೂರು, ಮಾ.2: ವೃದ್ಧ ದಂಪತಿಗೆ ಅಮಾನುಷ ರೀತಿಯಲ್ಲಿ ಹಲ್ಲೆಗೈದ ವಿಟ್ಲ ಬಳಿಯ ಪೆರಿಯಾಲ್ತಡ್ಕ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ಫಾ.ನೆಲ್ಸನ್ ಒಲಿವೆರಾ ಅವರನ್ನು ಮಂಗಳೂರು ಕ್ಯಾಥೊಲಿಕ್ ಡಯಾಸಿಸ್ ಪಾದ್ರಿ ಹುದ್ದೆಯಿಂದ ತೆರವುಗೊಳಿಸಿದೆ. 

ಹಲ್ಲೆ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ, ಆಗಿರುವ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಘಟನೆ ಬಗ್ಗೆ ಕಾನೂನು ರೀತ್ಯಾ ತನಿಖೆ ಕೈಗೊಳ್ಳಲು ಪೊಲೀಸರಿಗೆ ನಾವು ಸಹಕಾರ ನೀಡುತ್ತೇವೆ. ಘಟನೆ ಬಗ್ಗೆ ನೈಜ ವಿಚಾರ ತಿಳಿದುಕೊಳ್ಳಲು ಅವರನ್ನು ಪಾದ್ರಿ ಹುದ್ದೆಯಿಂದ ತೆರವುಗೊಳಿಸುತ್ತೇವೆ ಎಂದು ಡಯಾಸಿಸ್ ಪರವಾಗಿ ಫಾ.ಜೆಬಿ ಸಲ್ದಾನ ಮತ್ತು ರೊನಾಲ್ಡ್ ಕ್ಯಾಸ್ಟಲಿನೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪೆರಿಯಾಲ್ತಡ್ಕ ಕ್ರೈಸ್ಟ್ ಕಿಂಗ್ ಚರ್ಚ್ ಧರ್ಮಗುರು ಹುದ್ದೆಯಿಂದ ನೆಲ್ಸನ್ ಒಲಿವೆರಾ ಅವರನ್ನು ತೆರವು ಮಾಡುತ್ತೇವೆ. ಆ ಜಾಗಕ್ಕೆ ಬೇರೊಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಕೃತ್ಯದಲ್ಲಿದ್ದವರು ಒಂದೇ ಸಮುದಾಯದವರಾಗಿದ್ದು ಸಾರ್ವಜನಿಕರು ವದಂತಿಗೆ ಕಿವಿಕೊಡಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ.

Mangalore Catholic priest Nelson Olivera, Attack Video; ವೃದ್ಧ ದಂಪತಿಗೆ ಮನಬಂದಂತೆ ಥಳಿಸಿದ ಕ್ಯಾಥೋಲಿಕ್ ಚರ್ಚ್ ಪಾದ್ರಿ, ವೃದ್ದೆಗೆ ಕಾಲಿನಲ್ಲಿ ಒದ್ದು ದರ್ಪ, ಹಲ್ಲೆ ಘಟನೆಯ ವಿಡಿಯೋ ವೈರಲ್, ಪೆರಿಯಾಲ್ತಡ್ಕ ಚರ್ಚ್ ಪಾದ್ರಿ ವಿರುದ್ಧ ಆಕ್ರೋಶ

Mangalore Catholic Priest Nelson Olivera removed from Church by Diosece after his assulting elderly couple video goes viral. Priest Nelson Olivera priest of Parish priest of Christ the King parish was found assaulting elderly couple brutally over silly matter at at Manela in Pariyalthadka near Vittla in Bantwal taluk.