Crime news, Nude Video shared: ಕೈ ಕೊಟ್ಟಿದ್ದಕ್ಕೆ ಕೋಪ ; ಫಸ್ಟ್​​ ನೈಟ್​​ ದಿನವೇ ಪತಿಗೆ ಹೆಂಡತಿಯ ಬೆತ್ತಲೆ ವಿಡಿಯೋ ಶೇರ್ ಮಾಡಿದ ಪ್ರಿಯಕರ, ಮದುವೆ ದಿನವೇ ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದ ಮದುಮಗಳು

27-04-24 02:53 pm       HK News Desk   ದೇಶ - ವಿದೇಶ

ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯ ಮೊದಲ ರಾತ್ರಿಯಂದು ಮದುಮಗಳು ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದು, ತನಗಾದ ಅನ್ಯಾಯವನ್ನು ದೂರಿನಲ್ಲಿ ದಾಖಲಿದ್ದಾಳೆ. 

ಮಧ್ಯಪ್ರದೇಶ, ಏ.27: ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯ ಮೊದಲ ರಾತ್ರಿಯಂದು ಮದುಮಗಳು ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದು, ತನಗಾದ ಅನ್ಯಾಯವನ್ನು ದೂರಿನಲ್ಲಿ ದಾಖಲಿದ್ದಾಳೆ. 

ಫಸ್ಟ್​​ ನೈಟ್​​ ದಿನವೇ ಪತ್ನಿಯ ಮಾಜಿ ಪ್ರಿಯಕರ ಆಕೆಯ ಬೆತ್ತಲೆ ವಿಡಿಯೋ ಕಳುಹಿಸಿದ್ದು,ಈ ವಿಡಿಯೋವನ್ನು ಪತಿ ತನ್ನ ಕುಟುಂಬಸ್ಥರಿಗೆ ಕಳುಹಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಯುವತಿಗೆ ಈ ಹಿಂದೆ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ಸಮಯದಲ್ಲಿ ಆತನೊಂದಿಗೆ ನಗ್ನವಾಗಿ ವಿಡಿಯೋ ಕಾಲ್​​ನಲ್ಲಿ ಮಾತನಾಡಿದ್ದಳು. ಕೆಲ ದಿನಗಳ ಬಳಿಕ ಇವರಿಬ್ಬರ ನಿಶ್ಚಿತಾರ್ಥ ಮುರಿದು ಹೋಗಿತ್ತು. ಇದಲ್ಲದೇ ಯುವತಿ ಬೇರೊಬ್ಬನೊಂದಿಗೆ ಇತ್ತೀಚಿಗಷ್ಟೇ ಮದುವೆಯಾಗಿದ್ದಾಳೆ. ಇದರಿಂದ ಕೋಪಗೊಂಡ ನಿಶ್ಚಿತಾರ್ಥವಾಗಿದ್ದ ಯುವಕ ಆಕೆಯ ನಗ್ನ ವಿಡಿಯೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಾಕ್​​ ಆದ ಪತಿ ತನ್ನ ಪತ್ನಿಯ ಅಶ್ಲೀಲ ವೀಡಿಯೊವನ್ನು ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾನೆ. ಇದಲ್ಲದೇ ಸೋಶಿಯಲ್​ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾನೆ.

ವಿಡಿಯೋ ಎಲ್ಲೆಡೆ ಶೇರ್​ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಯುವತಿ ತನ್ನ ಪೋಷಕರೊಂದಿಗೆ ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದು, ತನಗಾದ ಅನ್ಯಾಯದ ವಿರುದ್ದ ದೂರು ನೀಡಿದ್ದಾಳೆ. ಇದೀಗಾ ವಿಡಿಯೋ ಕಳುಹಿಸಿದ ಮಾಜಿ ಪ್ರಿಯಕರ, ಪತಿ ಹಾಗೂ ಪತಿಯ ಪೋಷಕರ ವಿರುದ್ಧ ಕೇಸು ದಾಖಲಾಗಿದೆ.

Police have registered a case against a man and kin for circulating obscene video of his wife he married hours before. The video was shared to the man by his wife’s beau, whom she dejected to marry him.