ಬ್ರೇಕಿಂಗ್ ನ್ಯೂಸ್
09-05-24 10:59 am Mangalore Correspondent ಕ್ರೈಂ
ಮಂಗಳೂರು, ಮೇ.9: ನಗರದ ಬಾವುಟಗುಡ್ಡೆಯ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟಿದ್ದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು ಮೊಬೈಲಿನಲ್ಲಿ ಆರು ನಿಮಿಷದ ವಿಡಿಯೋ ಸೆರೆಯಾಗಿತ್ತು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ಸುರತ್ಕಲ್ ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹುಡುಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲಿನ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ 17 ವರ್ಷದ ಹುಡುಗ ತಾಯಿ ಜೊತೆಗೆ ಬರುತ್ತಿದ್ದ. ಈ ಹಿಂದೆ ಎರಡು ಬಾರಿ ಬಂದಿದ್ದ ಬಾಲಕ, ಮೊನ್ನೆ ತಾಯಿಗೆ ಹುಷಾರಿಲ್ಲವೆಂದು ಒಬ್ಬನೇ ಬಂದಿದ್ದ. ತಾಯಿ ಮೊಬೈಲನ್ನು ಜೊತೆಗೆ ತಂದಿದ್ದ ಹುಡುಗ, ಟಾಯ್ಲೆಟಲ್ಲಿ ವಿಡಿಯೋ ಆನ್ ಮಾಡಿ ಹೊರಗೆ ಸುತ್ತಾಡಲು ಹೋಗಿದ್ದ. ಕೆಲ ಹೊತ್ತಿನಲ್ಲಿ ಮೊಬೈಲ್ ರಿಂಗ್ ಆಗಿದ್ದರಿಂದ ಸೆಕ್ಯುರಿಟಿ ಸಿಬಂದಿ ಅಲರ್ಟ್ ಆಗಿದ್ದು, ಮೊಬೈಲನ್ನು ವಶಕ್ಕೆ ಪಡೆದಿದ್ದರು.
ಬಂದರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೊಬೈಲ್ ಸಂಖ್ಯೆ ಆಧಾರದಲ್ಲಿ ಬಾಲಕನ ತಾಯಿಯನ್ನು ಬರಲು ಹೇಳಿದ್ದಾರೆ. ಆನಂತರ, ಬಾಲಕ ಮತ್ತು ತಾಯಿ ಜೊತೆಗೇ ಮೆಡಿಕಲ್ ಕಾಲೇಜಿಗೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೊಬೈಲ್ ಆನ್ ಮಾಡಿಟ್ಟಿದ್ದರಿಂದ ಆ ಕ್ಷಣದ ವರೆಗೆ ಆರು ನಿಮಿಷದ ವಿಡಿಯೋ ಸೆರೆಯಾಗಿತ್ತು. ಆದರೆ, ಅದರಲ್ಲಿ ಯಾವುದೇ ಅಸಭ್ಯ ವಿಡಿಯೋ ದಾಖಲಾಗಿಲ್ಲ. ಒಬ್ಬ ಮಹಿಳೆಯೇನೋ ಬಂದು ಹೋಗುವ ಚಿತ್ರಣವಿದ್ದು, ಆಕೆಯ ತಲೆಯ ಭಾಗ ಮಾತ್ರ ಅಸ್ಪಷ್ಟವಾಗಿ ಬಂದಿದೆ. ಇಷ್ಟರಲ್ಲೇ ಮೊಬೈಲಿಗೆ ಕರೆ ಬಂದಿದ್ದು, ಕಿಡಿಗೇಡಿ ಕೃತ್ಯ ಬಯಲಾಗಿತ್ತು.
ಟಾಯ್ಲೆಟಲ್ಲಿ ಮೊಬೈಲ್ ಇಟ್ಟು ಹೋಗಿದ್ದ ಹುಡುಗ 17 ವರ್ಷದವನಾಗಿದ್ದು, ಆತನನ್ನು ಬಾಲಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಪ್ರಾಪ್ತನಾಗಿರುವ ಕಾರಣ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವಂತಿಲ್ಲ. ಮುಗ್ಧನಂತೆ ವರ್ತಿಸುವ ಹುಡುಗನ ತನಿಖೆಯೇ ಪೊಲೀಸರಿಗೆ ಸವಾಲಾಗಿದೆ.
Mangalore Mobile Phone in Toilet at KMC college Bavuta Gudde, 6 minute video found, minor arrested. The arrested is a 17 year old from surathkal. According to the police, the college security guard discovered the mobile while it was ringing even when no one was in the toilet. The phone was seized and a case has been registered in the North PS under Cr No 57/2024 u/s 354C IPC.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm