ಬ್ರೇಕಿಂಗ್ ನ್ಯೂಸ್
03-12-20 04:38 pm Headline Karnataka News Network ಕ್ರೈಂ
ಮುಂಬೈ, ಡಿ.3: ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಹಗರಣದ ರೂವಾರಿ, ಸಂಸ್ಥೆಯ ಅಧ್ಯಕ್ಷನಾಗಿದ್ದ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ನನ್ನು ಮೀರಾ ರೋಡ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಮತ್ತು ಸೊಸೈಟಿಯ ನಿರ್ದೇಶಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಜಾಮೀನು ನಿರಾಕರಿಸಿ, ಗಿಲ್ಬರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಿಗೇ ಮುಂಬೈನ ಮೀರಾ ರೋಡ್ ಪೊಲೀಸರು ಗಿಲ್ಬರ್ಟ್ ಬ್ಯಾಪ್ಟಿಸ್ಟ್ ನನ್ನು ಬಂಧಿಸಿದ್ದಾರೆ.


ಇದಕ್ಕೂ ಮುನ್ನ ಕಳೆದ ತಿಂಗಳು ಥಾಣೆ ಕೋರ್ಟ್ ಗಿಲ್ಬರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಆಬಳಿಕ ಗಿಲ್ಬರ್ಟ್ ಸುಪ್ರೀಂ ಮೆಟ್ಟಿಲೇರಿದ್ದು ಅಲ್ಲಿಯೂ ಜಾಮೀನು ಅರ್ಜಿ ನಿರಾಕರಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಗಿಲ್ಬರ್ಟ್ ಸೇರಿ ಸೊಸೈಟಿಯ ಮೂವರು ನಿರ್ದೇಶಕರಾದ ದೀಪಕ್ ಪೂಜಾರಿ, ಲೋಯಲ್ ಬ್ಯಾಪ್ಟಿಸ್ಟ್ ಮತ್ತು ಪ್ರಕಾಶ್ ಕೋಟ್ಯಾನ್ ಅವರನ್ನು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಡಿ.8ರ ವರೆಗೆ ಕಸ್ಟಡಿ ಪಡೆದಿದ್ದಾರೆ.
ಮಲೈಕಾ ಸೊಸೈಟಿಯ ಕಚೇರಿಗಳು ಮುಂಬೈ, ಗೋವಾ, ಉಡುಪಿ, ಮಂಗಳೂರು ಸೇರಿ ಹಲವೆಡೆ ಇದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಹೂಡಿಕೆದಾರರಿಗೆ 350 ಕೋಟಿಗೂ ಹೆಚ್ಚು ಮೊತ್ತವನ್ನು ಪಂಗನಾಮ ಹಾಕಿದ್ದಾರೆ. ಮುಂಬೈನ ಮೀರಾ ರೋಡ್ ನಲ್ಲಿರುವ ಸೊಸೈಟಿ ಕಚೇರಿಯ ವಿರುದ್ಧ ಮೊದಲ ದೂರು ಕಳೆದ ಅಕ್ಟೋಬರ್ 2ರಂದು ಮೀರಾ ರೋಡ್ ಠಾಣೆಯಲ್ಲಿ ದಾಖಲಾಗಿತ್ತು.
ಐಪಿಸಿ ಸೆಕ್ಷನ್ ಗಳಾದ 420 (ಮೋಸ), 406 (ನಂಬಿಕೆ ದ್ರೋಹ), 34 (ಕಾಮನ್ ಇಂಟೆನ್ಷನ್) ಸೇರಿದಂತೆ ಮಹಾರಾಷ್ಟ್ರ ಹೂಡಿಕೆದಾರರ ಹಿತಾಸಕ್ತಿ ಪರ ಕಾಯ್ದೆ (ಎಂಪಿಐಡಿ) ಅಡಿ ಪ್ರಕರಣ ದಾಖಲಾಗಿತ್ತು.


ಮುಂಬೈನಲ್ಲಿ 50ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ್ದಾರೆ. ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ 150ಕ್ಕೂ ಹೆಚ್ಚು ಮಂದಿ ತಮಗೆ ವಂಚನೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದರು. ಮಂಗಳೂರು ಪೊಲೀಸರು ಸೊಸೈಟಿಯಲ್ಲಿ ಮ್ಯಾನೇಜರ್ ಆಗಿದ್ದ ರೀನಾ ಜೋಷ್ ಎಂಬವರನ್ನು ಈಗಾಗ್ಲೇ ಬಂಧಿಸಿದ್ದಾರೆ.
Malaika Credit Society owner Gilbert Baptist has been arrested by the Mumbai police for cheating investors of Rs 350 crores.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:08 am
HK News Staffer
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm