ಬ್ರೇಕಿಂಗ್ ನ್ಯೂಸ್
09-12-20 02:58 pm Mangalore Correspondent ಕ್ರೈಂ
ಮಂಗಳೂರು, ಡಿ.9 : ಸೋಮವಾರ ರಾತ್ರಿ ಮದುವೆ ಮನೆಯಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿ ರೌಡಿಶೀಟರ್ ಸಹಿತ ನಾಲ್ವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ರೌಡಿಶೀಟರ್ ಗೌರೀಶ್, ಆತನ ಸ್ನೇಹಿತರಾದ ತಲಪಾಡಿಯ ಸುಮಂತ್, ಬಜಾಲ್ ನಿವಾಸಿ ಸುಮಂತ್ ಮತ್ತು ಆಶಿತ್ ಬಂಧಿತರು.
ಮುಂಬೈಯಿಂದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದವರು, ಗೌರೀಶ್ ಬಳಿ ದಾರಿ ಕೇಳಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ದಾಂಧಲೆ ನಡೆದಿದೆ. ಈ ಸಂದರ್ಭ ಗೌರೀಶ್ ತನ್ನ ಗೆಳೆಯರನ್ನು ಕರೆಯಿಸಿ ಮಹಿಳೆಯರನ್ನು ಎಳೆದಾಡಿ, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಕಂಟ್ರೋಲ್ ರೂಮಿನಿಂದ ಬಂದ ಸೂಚನೆಯಂತೆ ಸಾಗರ ವಾಹನದಲ್ಲಿ ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ನಾರಾಯಣ ಎಂ.ಕೆ. ಸ್ಥಳಕ್ಕೆ ತೆರಳಿ ಗೌರೀಶ್ ನನ್ನು ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಗಳು ಪೊಲೀಸರ ಸಮವಸ್ತ್ರಕ್ಕೆ ಕೈ ಹಾಕಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಅಲ್ಲದೆ, ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಕಂಕನಾಡಿ ನಗರ ಠಾಣೆ ಪೊಲೀಸರು ಅಂದು ರಾತ್ರಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಗೌರೀಶ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಳೆದ ವರ್ಷವೂ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ಸಂದರ್ಭ ಆತನ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದರು.
Mangalore Rowdy Shetter Gowrish and three others arrested for creating Chaos in Marriage House in Padil and also for assaulting cop who came to solve the issue.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm