ಬ್ರೇಕಿಂಗ್ ನ್ಯೂಸ್
10-12-20 02:13 pm Mangalore Correspondent ಕ್ರೈಂ
ಮಂಗಳೂರು, ಡಿ.10: ಪ್ರಚೋದನಾತ್ಮಕ ಗೋಡೆ ಬರಹ ಬರೆದು ಸಿಕ್ಕಿಬಿದ್ದ ಇಬ್ಬರಿಗೆ ನ್ಯಾಯಾಲಯ ಮತ್ತೆ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ. ಕೊರೊನಾ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದ ಬಳಿಕ ಬುಧವಾರ ಸಂಜೆ ಅವರನ್ನು ಜೆಎಂಎಫ್ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಪೊಲೀಸರು ಮತ್ತಷ್ಟು ವಿಚಾರಣೆ ಅಗತ್ಯವಿದೆ ಎಂದು ಹೇಳಿದ ಕಾರಣ ಕೋರ್ಟ್ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಿದೆ.
ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಅಹ್ಮದ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಕಳೆದ ಶನಿವಾರ ಪೊಲೀಸರು ಬಂಧಿಸಿದ್ದರು. ಇಬ್ಬರು ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿನ ಡಾಟಾಗಳನ್ನು ರಿಟ್ರೀವ್ ಮಾಡಲು ತಜ್ಞರು ಪ್ರಯತ್ನಿಸುತ್ತಿದ್ದಾರೆ. ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಗಳು ಹೊರಬಿದ್ದರೆ ತನಿಖೆಗೆ ಸಹಕಾರಿಯಾಗಲಿದೆ.
ಆರೋಪಿಗಳ ಪೈಕಿ, ಮೊಹಮ್ಮದ್ ಶಾರೀಕ್ ವಿದೇಶದಿಂದ ಕರೆ ಮಾಡಿದಾತನ ಸೂಚನೆಯಂತೆ ಈ ಕೃತ್ಯ ಮಾಡಿದ್ದ. ಹೇಗೆ ಬರೆಯಬೇಕು ಎನ್ನುವುದನ್ನೂ ವಿದೇಶಿ ವ್ಯಕ್ತಿಯೇ ಸೂಚಿಸಿದ್ದ. ಇಂಟರ್ನೆಟ್ ಮತ್ತು ವಾಟ್ಸಪ್ ಕರೆಗಳ ಮೂಲಕ ಶಾರೀಕ್ ಜೊತೆಗೆ ಒಡನಾಟ ಇಟ್ಟುಕೊಂಡಿದ್ದ. ಶಾರೀಕ್, ಉಗ್ರರ ಪರ ಒಲವುಳ್ಳ ವಾಟ್ಸಪ್ ಗ್ರೂಪ್ ಗಳಲ್ಲಿ ಆಕ್ಟಿವ್ ಆಗಿದ್ದ. ಇವೆಲ್ಲ ವಿಚಾರವನ್ನು ಪೊಲೀಸರು ದೃಢಪಡಿಸಲು ಆತನ ಮೊಬೈಲ್ ಮಾಹಿತಿಗಳನ್ನು ರಿಟ್ರೀವ್ ಮಾಡಲೇಬೇಕು.
ಇದೇ ವೇಳೆ, ಮೊಹಮ್ಮದ್ ಶಾರೀಕ್ ಸಂಬಂಧಿಯಾಗಿರುವ ತೀರ್ಥಹಳ್ಳಿ ಮೂಲದ ಸಾದತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ವಿಚಾರಣೆ ಸಂದರ್ಭ ಸಂಭಾವಿತರಂತೆ ಪೋಸು ನೀಡುತ್ತಿದ್ದಾರೆ. ಅವರ ಹಿನ್ನೆಲೆ ಬಗ್ಗೆ ಕೇಳಿದರೆ, ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ, ಬಂಧಿತ ಇಬ್ಬರು ಕೂಡ ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು ಭಾಷೆಯಲ್ಲಿ ಹಿಡಿತ ಹೊಂದಿದ್ದು, ಆಧುನಿಕ ತಂತ್ರಜ್ಞಾನದ ಮಾಹಿತಿ ಹೊಂದಿದ್ದಾರೆ. ಹೀಗಾಗಿ ಇವರ ಹಿಂದೆ ಪ್ರಬಲ ಸಂಚು ಇರುವ ಬಗ್ಗೆ ಗುಮಾನಿಯಿದ್ದು, ಪೊಲೀಸರು ಸಮಗ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
In connection with the pro-graffiti slogans which appeared at two places in the city, the two persons who were arrested in the case, were remanded to ten days of police custody.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm