ಬ್ರೇಕಿಂಗ್ ನ್ಯೂಸ್
12-12-20 10:57 am Mangalore Correspondent ಕ್ರೈಂ
ಬಂಟ್ವಾಳ, ಡಿ.12 : ಮದುವೆ ಹಾಲ್ ಗಳಲ್ಲಿ ಮಹಿಳೆಯರ ಬ್ಯಾಗ್, ಮಕ್ಕಳ ಕತ್ತಿನಿಂದ ಚಿನ್ನಾಭರಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪದಲ್ಲಿ ಫಾತಿಮಾ ಶಹನಾಝ್ ಎಂಬಾಕೆಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮದುವೆ ಹಾಲ್ ಗಳಲ್ಲಿ ಮಹಿಳೆಯರ ಬ್ಯಾಗ್, ಚಿಕ್ಕ ಮಕ್ಕಳ ಕತ್ತಿನಿಂದ ಚಿನ್ನದ ಸರ ಕಳವಾಗುತ್ತಿರುವ ಬಗ್ಗೆ ಬಿ.ಸಿ.ರೋಡಿನ ಹಾಲ್ ಮಾಲೀಕರೊಬ್ಬರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು. ಎರಡು ದಿನಗಳ ಹಿಂದೆ ಪಾಣೆಮಂಗಳೂರಿನ ಆಡಿಟೋರಿಯಂ ಒಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹೆಣ್ಣು ಮಗುವನ್ನು ಪುಸಲಾಯಿಸಿ ಕತ್ತಿನಿಂದ ಚಿನ್ನದ ಸರ ಕಸಿಯಲು ಮಹಿಳೆಯೊಬ್ಬಳು ಯತ್ನಿಸಿದಾಗ ಮಗು ಕಿರುಚಿತ್ತು. ತಕ್ಷಣ ಅಲ್ಲಿ ಸೇರಿದ್ದವರು ಮಹಿಳೆಯನ್ನು ಹಿಡಿದು ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಕಡೆ ಈ ಕೃತ್ಯ ನಡೆಸಿರುವುದನ್ನು ಬಾಯಿಬಿಟ್ಟಿದ್ದಾಳೆ.
ಕಳವುಗೈದ ಚಿನ್ನಾಭರಣ ಕರಗಿಸಿ ಹೊಸ ರೂಪ ನೀಡಿದ್ದ ಸುಮಾರು 234 ಗ್ರಾಂ ಚಿನ್ನವನ್ನು ಫಾತಿಮಾಳಿಂದ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಒಂದಷ್ಟು ಚಿನ್ನ ಮಾರಿದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದ್ದು ತಿಳಿದು ಬಂದಿದೆ. 10 ವರ್ಷಗಳಿಂದ ಆಕೆ ಈ ಕೃತ್ಯದಲ್ಲಿ ತೊಡಗಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀನಾರಾಯಣ ಮಾರ್ಗದರ್ಶನ, ಡಿವೈಎಸ್ಪಿ ವೆಲೆಂಟಿನ್ ಡಿಸೋಜ,ಇನ್ಸ್ ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಂತೆ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ಮುಂದಿನ ತನಿಖೆ ನಡೆಸುತ್ತಿದ್ದಾರೆ.
Bantwal town police personnel have arrested a woman who is accused of stealing jewellery from the necks of the children and ornaments from women's handbags at wedding functions.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
25-05-26 11:00 pm
Mangalore Correspondent
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am