ಬ್ರೇಕಿಂಗ್ ನ್ಯೂಸ್
13-12-20 02:42 pm Mangaluru Correspondent ಕ್ರೈಂ
ಉಪ್ಪಿನಂಗಡಿ, ಡಿ.13: ಇಲ್ಲಿನ ಬಿಳಿನೆಲೆ ಗ್ರಾಮದ ಬಾಗೆಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ವೃದ್ಧ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಶವ ಬಿಳಿನೆಲೆ ಗ್ರಾಮದ ಮೂಲೆಮನೆ ನಿವಾಸಿ ವೆಂಕಪ್ಪ ಗೌಡ (62) ಎಂಬವರದೆಂದು ಗುರುತಿಸಲಾಗಿದೆ.
ಈ ಬಗ್ಗೆ ಮೃತ ವೆಂಕಪ್ಪ ಗೌಡ ಅವರ ಮಗ ಸುಬ್ರಹ್ಮಣ್ಯ ಎಂ. ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿ.5 ರಂದು ವೆಂಕಪ್ಪ ಗೌಡರು ನೆರೆಮನೆಯ ಬಾಲಚಂದ್ರ ಅವರೊಂದಿಗೆ ಕಾಡಿನಲ್ಲಿ 'ರಾಮಪತ್ರೆ' ಹೂವು ಕೊಯ್ಯಲು ಹೋಗಿದ್ದರು. ಕಾಡಿನಲ್ಲಿ ದೂರಕ್ಕೆ ಎಲ್ಲೋ ಹೋಗಿರಬೇಕು ಎಂದು ಭಾವಿಸಿದ ಮನೆಯವರು ಸುಮ್ಮನೆ ಇದ್ದರು ಎನ್ನಲಾಗಿದೆ. ಆದರೆ, ಡಿ.10 ರಂದು ವೆಂಕಪ್ಪಗೌಡರು ಉಪಯೋಗಿಸುತ್ತಿದ್ದ ಟಾರ್ಚ್ ಲೈಟ್, ಸಿಗರ್‌ಲೈಟ್, ವಾಚ್ ಹಾಗೂ ಕತ್ತಿಯನ್ನು ಮನೆಯ ಬಾಗಿಲಿನ ಮೆಟ್ಟಿಲ ಬಳಿ ಯಾರೋ ತಂದಿರಿಸಿದ್ದರು ಎನ್ನಲಾಗಿದೆ. ಮನೆಯವರು ಅನುಮಾನಗೊಂಡು ಮರುದಿನ ಸಂಬಂಧಿಕರ ಜೊತೆ ಸೇರಿ ಕಾಡಿನಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಕೋಟೆ ಹೊಳೆಯಲ್ಲಿ ಶವ ಪತ್ತೆಯಾಗಿದೆ.
ಈ ಬಗ್ಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ನಡೆಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Man who went to bring some Medicinal flowers inside the forest was found dead in Uppinangady. The uppinangady police are investigating the case.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm