ಬ್ರೇಕಿಂಗ್ ನ್ಯೂಸ್
06-01-25 05:37 pm HK News Desk ಕ್ರೈಂ
ನವದೆಹಲಿ, ಜ.6: ದೇಶದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಡಾಟಾ ಬೇಸ್ ಒಂದನ್ನು ಜನರ ಮುಂದಿಟ್ಟಿದೆ. ಯಾರೇ ಅಪರಿಚಿತರು ಕರೆ ಮಾಡಿ ತಮ್ಮನ್ನು ಸಿಬಿಐ, ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿ ವಂಚಿಸಲು ಯತ್ನಿಸಿದರೆ ಅವರ ಬಗ್ಗೆ ನೈಜ ಮಾಹಿತಿ ಪತ್ತೆಗಾಗಿ ಹೊಸ ಪೋರ್ಟಲ್ ಆರಂಭಿಸಿದೆ.
ಯಾವುದೇ ಪ್ರಕಾರದಲ್ಲಿ ಮೊಬೈಲ್ ನಂಬರ್, ಇಮೇಲ್, ವಾಟ್ಸಪ್ ಇನ್ನಿತರ ಇನ್ನಾವುದೇ ಸೋಶಿಯಲ್ ಮೀಡಿಯಾಗಳ ಮೂಲಕ ಕರೆ, ಸಂದೇಶ ಬಂದಲ್ಲಿ ಅವುಗಳನ್ನು ಗ್ರಾಹಕರೇ ಪತ್ತೆ ಹಚ್ಚಬಹುದು. ಅದಕ್ಕಾಗಿ ನ್ಯಾಶನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಲ್ಲಿಯೇ ಹೊಸ ಆಪ್ಶನ್ ನೀಡಲಾಗಿದೆ. 14ಸಿ ಡಾಟಾಬೇಸ್ ಹೆಸರಿನ ಹೊಸ ತಂತ್ರಜ್ಞಾನದಲ್ಲಿ ಕರೆ ಮಾಡಿದವರ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುವ ಅವಕಾಶ ನೀಡಲಾಗಿದೆ.
ಸೈಬರ್ ಕ್ರೈಮ್ ಪೋರ್ಟಲ್ ನಲ್ಲಿ Report and check suspect ಎನ್ನುವ ಪ್ರತ್ಯೇಕ ಕಾಲಂ ಇರಲಿದ್ದು, ಅದರಿಂದ ಸಂಶಯಿತರ ಯಾವುದೇ ಮಾಹಿತಿಯನ್ನು ಗ್ರಾಹಕರು ಕೇಳಿ ಪಡೆಯಬಹುದು. ಅಪರಿಚಿತರ ನಂಬರ್, ಇಮೇಲ್, ವಾಟ್ಸಪ್, ಇನ್ಸ್ ಟಾ, ಫೇಸ್ಬುಕ್, ಯುಪಿಐ ಐಡಿ ಹೀಗೆ ಯಾವುದೇ ಜಾಲತಾಣದಿಂದ ಸಂಪರ್ಕ ಆದರೂ ಅವುಗಳ ನೈಜತೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಸೈಬರ್ ಕ್ರೈಮ್ ತಡೆಯುವುದಕ್ಕಾಗಿ ಈ ಹೆಜ್ಜೆ ಇಡಲಾಗಿದ್ದು, ರಿಪೋರ್ಟ್ ಎಂಡ್ ಚೆಕ್ ಮೂಲಕ ಸಂಶಯಿತರ ಬಗ್ಗೆ ದೂರು ಹೇಳಿಕೊಂಡು ಮಾಹಿತಿ ಪಡೆಯಬಹುದು. 14ಸಿ ಎನ್ನುವ ಸರ್ಚ್ ಇಂಜಿನ್ ಮೂಲಕ ಸೈಬರ್ ಕ್ರಿಮಿನಲ್ ಗಳನ್ನು ಪತ್ತೆಹಚ್ಚಿ ದೂರು ಖಚಿತವಾದರೆ ಆ ವ್ಯಕ್ತಿ ಹೊಂದಿರುವ ಅಂತಹ ಪ್ಲಾಟ್ ಫಾರಂಗಳನ್ನೇ ಬ್ಲಾಕ್ ಮಾಡಲಾಗುತ್ತದೆ. ಆಮೂಲಕ ಡಿಜಿಟಲ್ ಅರೆಸ್ಟ್ ಮಾಡುವ ನಕಲಿ ಖಾತೆದಾರರನ್ನು ಕೇಂದ್ರ ಸರಕಾರ ನಿಯಂತ್ರಣಕ್ಕೆ ತರಲು ಮುಂದಾಗಿದೆ.
ಈಗಾಗಲೇ ಇರುವ https://Cybercrime.gov.in ಎನ್ನುವ ಪೋರ್ಟಲ್ ಮೂಲಕ ಗ್ರಾಹಕರು ಈ ಹೊಸ ಅವಕಾಶವನ್ನೂ ಬಳಸಿಕೊಳ್ಳಬಹುದಾಗಿದೆ. ಸಂಶಯಿತ ಕರೆಗಳ ಬಗ್ಗೆ ಮಾಹಿತಿ ಪಡೆಯುವುದು ಸೇರಿದಂತೆ ತಮಗಾದ ಕಿರುಕುಳ, ಕರೆ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆಯೂ ದೂರು ನೀಡಬಹುದಾಗಿದೆ. ಯಾವುದೇ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆಗಳನ್ನು ಹಂಚಿಕೊಳ್ಳುವುದಕ್ಕೂ ಮುನ್ನ ಗ್ರಾಹಕರು ಈ ಸರ್ಚ್ ಇಂಜಿನ್ ಮೂಲಕ ಪೊಲೀಸ್ ಅಧಿಕಾರಿಗಳೆಂದು ಕರೆ ಮಾಡಿದವರ ನೈಜತೆ ತಿಳಿದುಕೊಳ್ಳಬಹುದು. ಆಮೂಲಕ ಡಿಜಿಟಲ್ ಅರೆಸ್ಟ್ ನಿಂದ ಆಗುವ ಅಪಾಯವನ್ನು ತಪ್ಪಿಸಬಹುದು, ಜೊತೆಗೆ ಸೈಬರ್ ಕ್ರೈಮ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬಹುದು ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಕೋಶ ಹೇಳಿಕೊಂಡಿದೆ.
ಸೈಬರ್ ಕ್ರೈಮ್ ಬಗ್ಗೆ ಎಷ್ಟೇ ದೂರುಗಳಿದ್ದರೂ, ಅವುಗಳನ್ನು ಏಕಕಾಲದಲ್ಲಿ ಪರಿಗಣಿಸಿ ಸೂಕ್ತ ಪ್ರತ್ಯುತ್ತರ ನೀಡಲು ಸರ್ಚ್ ಇಂಜಿನ್ ಸಮರ್ಥವಿದೆ. ಸಂಶಯಿತರ ಪತ್ತೆಗಾಗಿ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (14ಸಿ) ಹೆಸರಲ್ಲಿ ಡಾಟಾಬೇಸ್ ಒಂದನ್ನು ಸ್ಥಾಪಿಸಲಾಗಿದ್ದು, ಗ್ರಾಹಕರ ಯಾವುದೇ ಪ್ರಶ್ನೆ, ಸಂಶಯಕ್ಕೂ ಉತ್ತರ ನೀಡಲಿದೆ. ಬ್ಯಾಂಕ್ ಖಾತೆ, ಯುಪಿಐ ಐಡಿ ಇನ್ನಿತರ ಅಂಕಿ ಅಂಶ ಕೇಳಿದರೂ ಮಾಹಿತಿ ನೀಡಲಿದೆ. ಆದರೆ ಇದು ದೇಶೀಯವಾಗಿ ಮಾತ್ರ ಮಾಹಿತಿ ನೀಡಲು ಸಮರ್ಥವಾಗಿದ್ದು ಇಂಟರ್ ಪೋಲ್ ಕಾನೂನಿನ ಕಾರಣದಿಂದಾಗಿ ವಿದೇಶದಿಂದ ಕಾರ್ಯ ನಿರ್ವಹಿಸುತ್ತಿರುವವರ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಸೈಬರ್ ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
The Indian Government has declared war on the digital arrest scam which has grown manifold in recent years. Recently the prime minister of India issued an advisory about digital arrest scams and asked people to be careful. In this same regard, the government has taken concrete steps to curb the rising instances of digital arrest scam by introducing an online database of known scam UPI IDs, mobile number, names, social media handles and email addresses. This database (codenamed I4C) is hosted on the National Cyber Crime Reporting Portal and can be accessed by anybody.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm