Bangalore Suicide, Bank Staff, Crime; ಹಿರಿಯ ಅಧಿಕಾರಿಗಳ ಕಿರುಕುಳ ಆರೋಪ ; ಪಕ್ಕದ ಕೋಣೆಯಲ್ಲಿದ್ದ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿ ಗುಡ್ ಬೈ ಹೇಳಿ ನೇಣಿಗೆ ಶರಣಾದ ಬ್ಯಾಂಕ್‌ ಉದ್ಯೋಗಿ 

09-03-25 03:06 pm       HK Staff   ಕ್ರೈಂ

ಖಾಸಗಿ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದ, ಬಿಹಾರ ಮೂಲದ, ಸದ್ಯ ತಲಘಟ್ಟಪುರದಲ್ಲಿ ನೆಲೆಸಿದ್ದ ವಿವೇಕ್ ಸಮದರ್ಶಿ (35) ತನ್ನ ಪತ್ನಿಗೆ ಗುಡ್ ಬೈ ಹೇಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು, ಮಾ.9: ಖಾಸಗಿ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದ, ಬಿಹಾರ ಮೂಲದ, ಸದ್ಯ ತಲಘಟ್ಟಪುರದಲ್ಲಿ ನೆಲೆಸಿದ್ದ ವಿವೇಕ್ ಸಮದರ್ಶಿ (35) ತನ್ನ ಪತ್ನಿಗೆ ಗುಡ್ ಬೈ ಹೇಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾರ್ಚ್‌ 6ರ ರಾತ್ರಿ ತಲಘಟ್ಟಪುರದ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪತ್ನಿ ಮೋನಿಷಾ ಮೇಲಧಿಕಾರಿಗಳ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳದಿಂದ ವಿವೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಿಹಾರದ ಮೂಲದ ಸಮದರ್ಶಿ ಐದು ವರ್ಷಗಳಿಂದ ಕೋರಮಂಗಲದಲ್ಲಿ ಖಾಸಗಿ ಬ್ಯಾಂಕ್‌ ಒಂದರ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದು, ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮೊದಲು  ಪಕ್ಕದಲ್ಲಿರುವ ರೂಮ್ ನಲ್ಲಿ ಕುಳಿತಿದ್ದ ಪತ್ನಿಗೆ ವಿಡಿಯೊ ಕಾಲ್ ಮಾಡಿ 'ಗುಡ್ ಬಾಯ್... ಮತ್ತೆ ಯಾವತ್ತೂ ನಾನು ಸಿಗೋದಿಲ್ಲ' ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಪತ್ನಿ, ಪತಿಯ ಸ್ನೇಹಿತರು ಹಾಗೂ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ಆದ್ರೆ ಬಾಗಿಲು ಒಡೆದು ನೋಡುವಷ್ಟರಲ್ಲಿ ವಿವೇಕ್ ನೇಣು ಹಾಕಿಕೊಂಡಿದ್ದಾರೆ.

A senior ICICI Bank employee allegedly died by suicide in Bengaluru, with his family accusing top officials of workplace harassment and extreme work pressure The deceased, Vivek Samdarshi, was the Regional Head of Sales at ICICI Bank and had been with the company for over five years.