Kiran Kumar Guruji, Case, Bangalore: ವಾಮಾಚಾರ ಆಗಿದೆ, ಪೂಜೆ ಮಾಡಿಸಬೇಕು ಎಂದು ಹೇಳಿ ಕೋಟಿಗೂ ಹೆಚ್ಚು ಹಣ, ಒಡವೆ ಪಡೆದ ಗುರೂಜಿ ; ಮಹಿಳೆ ದೂರು 

25-03-25 06:09 pm       Bangalore Correspondent   ಕ್ರೈಂ

ನಿಮ್ಮ ಕುಟುಂಬಕ್ಕೆ ವಾಮಾಚಾರ ಆಗಿದೆ, ಪೂಜೆ ಮಾಡಿಸುತ್ತೇನೆಂದು ಹೇಳಿ ವಿವಾಹಿತ ಮಹಿಳೆಯೊಬ್ಬರಿಂದ ಹಣ ಪಡೆದು ವಂಚಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಿರಣ್ ಕುಮಾರ್ ಗುರೂಜಿ ಹಾಗೂ ಆತನ ಸಹಚರ ಲೋಹಿತ್ ಎಂಬವರ ವಿರುದ್ಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. 

ಬೆಂಗಳೂರು, ಮಾ.25 : ನಿಮ್ಮ ಕುಟುಂಬಕ್ಕೆ ವಾಮಾಚಾರ ಆಗಿದೆ, ಪೂಜೆ ಮಾಡಿಸುತ್ತೇನೆಂದು ಹೇಳಿ ವಿವಾಹಿತ ಮಹಿಳೆಯೊಬ್ಬರಿಂದ ಹಣ ಪಡೆದು ವಂಚಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಿರಣ್ ಕುಮಾರ್ ಗುರೂಜಿ ಹಾಗೂ ಆತನ ಸಹಚರ ಲೋಹಿತ್ ಎಂಬವರ ವಿರುದ್ಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. 

ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆಯಲ್ಲಿ ಗಾಯತ್ರಿ ನಗರ ನಿವಾಸಿ 49 ವರ್ಷದ ರೂಪಶ್ರೀ ಎಂಬ ಮಹಿಳೆ ದೂರು ನೀಡಿದ್ದಾರೆ. ಮಹಿಳೆಯ ಪತಿ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಮಕ್ಕಳು ಸಹ ತಂದೆ ಜೊತೆಗೆ ಅಲ್ಲಿಯೇ ನೆಲೆಸಿದ್ದಾರೆ. ವೃದ್ಧ ತಂದೆಯೊಂದಿಗೆ ವಾಸವಿದ್ದ ಮಹಿಳೆಗೆ 3 ವರ್ಷಗಳ ಹಿಂದೆ ಪರಿಚಯವಾಗಿದ್ದ ಕಿರಣ್ ಕುಮಾರ್ ಗುರೂಜಿ, 'ನಿಮ್ಮ ಕುಟುಂಬದ ಮೇಲೆ ಯಾರೋ ವಾಮಾಚಾರ ಮಾಡಿದ್ದಾರೆ. ಪರಿಹಾರ ಮಾಡದಿದ್ದರೆ ಪತಿಯ ಜೀವಕ್ಕೆ ಅಪಾಯವಿದೆ ಎಂದು ನಂಬಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ್ದಾರೆ. 

ಇದಕ್ಕಾಗಿ ದೂರುದಾರ ಮಹಿಳೆಯಿಂದ ಹಂತ, ಹಂತವಾಗಿ ಹಣ ಪಡೆದಿದ್ದಾರೆ. ನಗದು ಮಾತ್ರವಲ್ಲದೆ, ಜಮೀನು ಮತ್ತಿತರರ ಆಸ್ತಿಗಳನ್ನು ಮಾರಿಸಿ, 1 ಕೋಟಿ ರೂ.ಗೂ ಅಧಿಕ ಹಣ ಪಡೆದಿದ್ದಾರೆ. ಅಲ್ಲದೆ, ದೇವರಿಗೆ ಅರ್ಪಿಸಬೇಕೆಂದು ಚಿನ್ನದ 80 ಗ್ರಾಂ ರುದ್ರಾಕ್ಷಿ ಹಾರ, 5 ಗ್ರಾಂ ಉಂಗುರ, 30 ಗ್ರಾಂ ಮ್ಯಾಂಗೋ ಡಿಸೈನ್ ಹಾರ, 28 ಗ್ರಾಂ ಆ್ಯಂಟಿಕ್ ಡಿಸೈನ್ ನೆಕ್ಲೆಸ್, 30 ತಾಳಿ ಬೊಟ್ಟುಗಳನ್ನು ಗುರೂಜಿ ಪಡೆದಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
 
ಚಿನ್ನ ಮತ್ತು ಅಷ್ಟು ಹಣದ ಬಗ್ಗೆ ಕೇಳಿದಾಗ ಕಿರಣ್ ಕುಮಾರ್ ಗುರೂಜಿ ಹಾಗೂ ಲೋಹಿತ್ ಅವಾಚ್ಯ ಪದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ. ಕಿರಣ್ ಕುಮಾರ್ ಗುರೂಜಿ ಹಾಗೂ ಲೋಹಿತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

A woman has filed a police complaint against self-proclaimed spiritual leader Guruji Kiran Kumar, alleging that he swindled her out of crores of rupees and valuable jewelry by convincing her to perform a series of rituals, purportedly aimed at warding off negative energies with the help of witchcraft.