ಬ್ರೇಕಿಂಗ್ ನ್ಯೂಸ್
26-03-25 11:08 pm HK News Desk ಕ್ರೈಂ
ರೋಹ್ಟಕ್, ಮಾ.26: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿ ಹರ್ಯಾಣದಲ್ಲಿ ಯೋಗ ಶಿಕ್ಷಕನೊಬ್ಬನನ್ನು ಕಿಡ್ನಾಪ್ ಮಾಡಿ ಜೀವಂತ ಸಮಾಧಿ ಮಾಡಿರುವ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೋಹ್ಟಕ್ ನಗರದ ಬಾಬಾ ಮಸ್ತ್ ನಾಥ್ ಯುನಿವರ್ಸಿಟಿಯ ಯೋಗ ಶಿಕ್ಷಕ ಜಗದೀಪ್ ಜೀವಂತ ಸಮಾಧಿ ಮಾಡಲ್ಪಟ್ಟು ಕೊಲೆಯಾದವರು.
2024ರ ಡಿಸೆಂಬರ್ 24ರಂದು ಜಗದೀಪ್ ದಿಢೀರ್ ಎನ್ನುವಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ನಾನಾ ಕಡೆಯಲ್ಲಿ ಹುಡುಕಾಡಿದ ಬಳಿಕ ಫೆ.23ರಂದು ಆತನ ಕುಟುಂಬ ಪೊಲೀಸರಿಗೆ ನಾಪತ್ತೆ ದೂರು ನೀಡಿತ್ತು. ಪೊಲೀಸರು ಆತನ ಮೊಬೈಲ್ ಕರೆ ಆಧರಿಸಿ ತನಿಖೆ ಶುರು ಮಾಡಿದ್ದರು. ಎರಡು ವಾರಗಳ ಹುಡುಕಾಟದ ಬಳಿಕ ಮಾರ್ಚ್ 24ರಂದು ಹರ್ದೀಪ್ ಮತ್ತು ಧರ್ಮಪಾಲ್ ಎಂಬಿಬ್ಬರನ್ನು ಬಂಧಿಸಿದ್ದು, ಜೀವಂತ ಸಮಾಧಿ ಮಾಡಿರುವ ಘಟನೆಯನ್ನು ಬಯಲು ಮಾಡಿದ್ದಾರೆ.
ಜಗದೀಪ್ ವಾಸವಿದ್ದ ಮನೆಯ ಮಾಲೀಕನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ ಎಂಬ ಶಂಕೆಯಲ್ಲಿ ಮನೆ ಮಾಲೀಕ ಕೊಲೆಗೆ ಸಂಚು ರೂಪಿಸಿದ್ದ. ಇದರಂತೆ, ಆಗಂತುಕರು ಜಗದೀಪ್ ಅವರನ್ನು ಹಿಡಿದು ಹಗ್ಗದಲ್ಲಿ ಕೈಕಾಲು ಕಟ್ಟಿ ಪೈಂತವಾಸ್ ಎನ್ನುವ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮೊದಲೇ ತೆಗೆದಿಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ತುಂಬಿಸಿದ್ದಾರೆ. ಆಮೂಲಕ ಯೋಗ ಶಿಕ್ಷಕನನ್ನು ಜೀವಂತವಾಗಿಯೇ ಉಸಿರು ಕಟ್ಟಿಸಿ ಸಾಯುವಂತೆ ಮಾಡಿದ್ದಾರೆ. ಏಳು ಅಡಿ ಆಳದ ಗುಂಡಿಯಲ್ಲಿ ಶವ ಇರುವುದನ್ನು ಪೊಲೀಸರು ಪತ್ತೆಹಚ್ಚಿ ಹೊರ ತೆಗೆದಿದ್ದು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ.
A horrific crime has come to light in Paintawas village, Charkhi Dadri, where a Yoga teacher, Jagdeep, was kidnapped and buried alive in a 7-foot pit.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm